ರಸ್ತೆಗಿಳಿಯುವಂತಿಲ್ಲ ಕರ್ನಾಟಕದ 45 ಲಕ್ಷ ವಾಹನ?-ಪರೀಕ್ಷಿಸಿಕೊಳ್ಳಿ ನಿಮ್ಮ ಕಾರು-ಬೈಕ್!

ದೆಹಲಿಯಲ್ಲಿ 2019 ರಿಂದ ಜಾರಿಗೆ ಬರಲಿರುವ ಹೊಸ ಸಾರಿಗೆ ನಿಯಮವನ್ನ ಇದೀಗ ಕರ್ನಾಟಕದಲ್ಲೂ ಜಾರಿಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಮಂದಾಗಿದೆ. ನೂತನ ನಿಯಮ ಪ್ರಕಾರ ಬೆಂಗಳೂರಿನ 16 ಲಕ್ಷ ಹಾಗೂ ಕರ್ನಾಟಕದ ಒಟ್ಟು 45 ಲಕ್ಷ ವಾಹನಗಳು ರಸ್ತೆಗಿಳಿಯುವಂತಿಲ್ಲ. 

Karnataka Plan to scrap vehicles older than 15 years to control Pollution

ಬೆಂಗಳೂರು(ಅ.14): ಭಾರತದಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಸಾರಿಗೆ ಇಲಾಖೆ ಕಠಿಣ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿದೆ. ಇದರ ಮೊದಲ ಅಂಗವಾಗಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ನಿಷೇಧ ಹೇರೋ ಕಾಯ್ದೆ ತರಲು ಇಲಾಖೆ ಎಲ್ಲಾ ಸಿದ್ಧತೆ ನಡೆಸಿದೆ.

ದೆಹಲಿಯಲ್ಲಿ 2019ರಿಂದ ಈ ನಿಯಮ ಜಾರಿಗೆ ಬರಲಿದೆ. ಈಗಾಗಲೇ ಈ ಕುರಿತು ನೊಟೀಸ್ ಕೂಡ ನೀಡಲಾಗಿದೆ. ಈ ನಿಯಮದ ಪ್ರಕಾರ ದೆಹಲಿಯಲ್ಲಿರೋ 15 ವರ್ಷ ಹಳೆಯದಾದ ಪೆಟ್ರೋಲ್ ಕಾರು ಹಾಗೂ 10 ವರ್ಷ ಹಳೆಯದಾದ ಡೀಸೆಲ್ ಕಾರಿಗೆ ನಿಷೇಧ ಹೇರಲಾಗಿದೆ. ಇದೀಗ ಇದೇ ನಿಮಯ ಕರ್ನಾಟಕದಲ್ಲೂ ಜಾರಿಗೆ ತರಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ(KPSCB)ಮುಂದಾಗಿದೆ.

ಕರ್ನಾಟಕದಲ್ಲಿ 15 ವರ್ಷಕ್ಕಿಂತ ಹಳೆಯದಾದ 45.05 ಲಕ್ಷ(23%) ವಾಹನಗಳಿವೆ. ಇನ್ನು ಬೆಂಗಳೂರಿನಲ್ಲಿ 16.37 ಲಕ್ಷ ಹಳೆಯ ವಾಹನಗಳಿವೆ. ಈ ನಿಯಮ ಜಾರಿಯಾದರೆ ಈ ಹಳೇ ವಾಹನಗಳು ರಸ್ತೆಗಿಳಿಯುವಂತಿಲ್ಲ. ಈ ವಾಹನಗಳನ್ನ ಗುಜುರಿ(ಕ್ರಾಶ್)ಗೆ ಹಾಕಬೇಕು. ಇದರಲ್ಲಿ ಸರ್ಕಾರಿ ಬಸ್‌ಗಳು, ವಾಹನಗಳೂ ಸೇರಿವೆ. 

ಮಾಲಿನ್ಯ ನಿಯಂತ್ರಣಕ್ಕೆ ಈ ನಿಯಮ ಅಗತ್ಯ ಅನ್ನೋದು ತಜ್ಞರ ಮಾತು. ಆದರೆ ಈ ನಿಯಮದ ಹಿಂದೆ ದೊಡ್ಡ ಲಾಬಿ ಇದೆ ಅನ್ನೋ ಮಾತುಗಳು ಕೇಳಿ ಬಂದಿದೆ. ವಾಹನ ಕಂಪೆನಿಗಳ ಲಾಬಿಯಿಂದ ಈ ನಿಯಮಕ್ಕೆ ಒತ್ತು ನೀಡಲಾಗುತ್ತಿದೆ. ಹಳೇ ವಾಹನ ಪುಡಿ ಮಾಡೋ ಮೂಲಕ, ಜನರು ಅನಿವಾರ್ಯವಾಗಿ ಹೊಸ ವಾಹನಗಳ ಮೊರೆ ಹೋಗಲಿದ್ದಾರೆ. ಇದರಿಂದ ಮಾಹನಗಳ ಮಾರಾಟ ಹೆಚ್ಚಳವಾಗಲಿದೆ ಅನ್ನೋ ಜನಸಾಮಾನ್ಯರ ಮಾತು. ಆದರೆ ಶೀಘ್ರದಲ್ಲೇ ಹೊಸ ಕಾಯ್ದೆ ಪ್ರಸ್ತಾಪವಾಗಲಿದೆ. 
 

Latest Videos
Follow Us:
Download App:
  • android
  • ios