ಜಾವಾ ಬೈಕ್ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಇನ್ನೇನಿದ್ದರು ಬೈಕ್ ಬುಕ್ಕಿಂಗ್ ಸಿದ್ದತೆ. 80ರ ದಶಕದಲ್ಲಿ ಭಾರತದ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಂಡಿದ್ದ ಜಾವಾ ಇದೀಗ ಮತ್ತೆ ರಸ್ತೆಗಳಿಯಲು ಸಜ್ಜಾಗಿದೆ. ಯಾವಾಗ ಬಿಡುಗಡೆ? ಇಲ್ಲಿದೆ ವಿವರ.

ಬೆಂಗಳೂರು(ಅ.13): ಭಾರತದಲ್ಲಿ 80ರ ದಶಕದಲ್ಲಿ ಜಾವಾ ಮೋಟಾರ್ ಬೈಕ್ ಭಾರತೀಯರನ್ನ ಮೋಡಿ ಮಾಡಿತ್ತು. ಬಳಿಕ ಜಾವಾ ಭಾರತದಲ್ಲಿ ಕಣ್ಮರೆಯಾಗಿತ್ತು. ಯಾವಾಗ ಮಹೀಂದ್ರ ಮೋಟಾರ್ಸ್ ಜಾವಾ ಬೈಕ್ ನಿರ್ಮಾಣಹ ಹಕ್ಕನ್ನು ಪಡೆಯಿತೋ ಅಲ್ಲಿಂದ ಭಾರತೀಯರ ಕಾಯುವಿಕೆ ಆರಂಭಗೊಂಡಿತು.

2016ರಲ್ಲಿ ಮಹೀಂದ್ರ ಕಂಪೆನಿ ಜಾವಾ ಮೋಟಾರ್‌ಬೈಕ್ ಹಕ್ಕನ್ನ ಪಡೆದುಕೊಂಡಿತು. ಇನ್ನು 2017ರಲ್ಲಿ ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ, ಶೀಘ್ರದಲ್ಲೇ ಜಾವಾ ಭಾರತದ ರಸ್ತೆಗಿಳಿಯಲಿದೆ ಅನ್ನೋ ಸೂಚನೆ ನೀಡಿದ್ದರು. ಇದೀಗ ಜಾವಾ ಬೈಕ್ ಅನಾವರಣ ದಿನಾಂಕ ಪ್ರಕಟಗೊಂಡಿದೆ.

Scroll to load tweet…

ಜಾವಾ ನೂತನ ಬೈಕ್ ನವೆಂಬರ್ 15 ರಂದು ಅನಾವರಣಗೊಳ್ಳಲಿದೆ. ಈ ಮೂಲಕ ಜಾವಾ ಬೈಕ್‌ಗಾಗಿ ಕಾಯುತ್ತಿದ್ದವರ ಮನದಲ್ಲಿ ಸಂತಸ ಮೂಡಿದೆ. ಕಳೆದವಾರ ವಷ್ಟೇ ನೂತನ ಜಾವಾ ಬೈಕ್‌ನ ಎಂಜಿನ್ ಫೋಟೋ ರಿವೀಲ್ ಮಾಡಲಾಗಿತ್ತು.

Scroll to load tweet…

293 ಸಿಸಿ ಎಂಜಿನ್ ಹೊಂದಿರುವ ನೂತನ ಜಾವಾ ಬೈಕ್, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್‌ಡ್ ಎಂಜಿನ್ ಹೊಂದಿದೆ. 27 ಬಿಹೆಚ್‌ಪಿ ಪವರ್ ಹಾಗೂ 28 ಎನಎಂ ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು 6 ಸ್ಪೀಡ್ ಗೇರ್ ಹೊಂದಿದೆ.

ಆಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಜಾವಾ ಬೈಕ್ ಬಿಡುಗಡೆಯಾಗಲಿದೆ. ಹಿಂದಿನ ಜಾವಾ ಬೈಕ್ ವಿನ್ಯಾಸಕ್ಕೆ ಯಾವುದೇ ಧಕ್ಕೆ ಬರದ ರೀತಿಯಲ್ಲಿ ಬಿಡುಗಡೆ ಮಾಡಲು ಮಹೀಂದ್ರ ಸಜ್ಜಾಗಿದೆ.