ಕಾರಿನ ಸುರಕ್ಷತೆಗೆ ಹೊಸ ನಿಯಮ, ISI ಗಾಜು ಕಡ್ಡಾಯ!
ಭಾರತದಲ್ಲಿ ಕಾರಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕ್ರಾಶ್ ಟೆಸ್ಟ್‌ನಲ್ಲಿ ಕನಿಷ್ಠ ಸುರಕ್ಷತೆಯ ಕಾರುಗಳಿಗೆ ಮಾತ್ರ ಭಾರತದಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದೀಗ ಸುರಕ್ಷತೆಗೆ ಮತ್ತೊಂದು ನಿಯಮ ಜಾರಿ ಮಾಡಲಾಗಿದೆ. ಮುಂಭಾಗದ ಕಾರಿನ ಗಾಜಿನ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.
ನವದೆಹಲಿ(ಜು.21): ಭಾರತದಲ್ಲಿ ಕಾರುಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ಹೀಗಾಗಿ 5 ಸ್ಟಾರ್ ರೇಟಿಂಗ್ ಕಾರಿಗೆ ಭಾರಿ ಬೇಡಿಕೆ ಇದೆ. ಟಾಟಾ ಮೋಟಾರ್ಸ್, ಮಹೀಂದ್ರ 5 ಸ್ಟಾರ್ ರೇಟಿಂಗ್ ಕಾರು ನೀಡುತ್ತಿದೆ. ಇದೀಗ ಸುರಕ್ಷತೆಯಲ್ಲಿ ಮತ್ತೊಂದು ನಿಯಮವನ್ನು ಜಾರಿಗೆ ತರಲಾಗಿದೆ. ಕಾರಿನ ವಿಂಡ್‌ಶೀಲ್ಡ್(ಮುಂಭಾಗದ ಗಾಜು) ISI ಮಾರ್ಕ್ ಹೊಂದಿದ ಗುಣಮಟ್ಟದ ಗಾಜನ್ನು ಬಳಸಬೇಕು.
ನಂಬರ್ ಪ್ಲೇಟ್ ರಿಜಿಸ್ಟ್ರೇಶನ್‌ನಲ್ಲಿ ಬದಲಾವಣೆ; ಹೊಸ ನಿಯಮ ಪ್ರಕಟಿಸಿದ MoRTH!
ಅಪಘಾತಗಳಲ್ಲಿ ಕಳಪೆ ಗುಣಮಟ್ಟದ ವಿಂಡ್‌ಶೀಲ್ಡ್‌ನಿಂದ ಚಾಲಕ ಹಾಗೂ ಮುಂಭಾಗದಲ್ಲಿ ಕುಳಿತ ಪ್ರಯಾಣಿಕರಿಗೆ ತೀವ್ರವಾಗಿ ಗಾಯಗಳಾಗುತ್ತಿದೆ. ಹೀಗಾಗಿ ಗುಣಮಟ್ಟದ ISI ಮಾರ್ಕ್ ಇರುವ ಗಾಜುಗಳನ್ನೇ ಬಳಸಬೇಕು ಎಂದು ಬ್ಯರೋ ಆಫ್ ಇಂಡಿಯನ್ ಸ್ಟಾಂಡರ್ಡ್ ಸಂಸ್ಥೆ ಹೇಳಿದೆ.
ಭಾರತದಲ್ಲಿ ISI ಗುಣಮಟ್ಟವಿಲ್ಲದ ವಿಂಡ್‌ಶೀಲ್ಡ್‌ಗಳನ್ನು ಮಾರಾಟ ಮಾಡುವಂತಿಲ್ಲ. ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ವಿಂಡ್‌ಶೀಲ್ಡ್‌ಗಳಿಗೂ ISI ಗುಣಮಟ್ಟ ಇರಲೇಬೇಕು. 2021ರ ಎಪ್ರಿಲ್ 1 ರಿಂದ ನೂತನ ನಿಮಯ ಜಾರಿಗೆ ಬರಲಿದೆ.