ನವದೆಹಲಿ(ಜೂ.29): ಸೆಡಾನ್, ಹ್ಯಾಚ್‌ಬ್ಯಾಕ್, SUV ಕಾರುಗಳ ಮೂಲಕ ವಿಶ್ವದ ಕಾರು ಮಾರುಕಟ್ಟೆಯಲ್ಲಿ ಮೂಂಚೂಣಿಯಲ್ಲಿರುವ ಹ್ಯುಂಡೈ, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಎಲೆಕ್ಟ್ರಿಕ್ SUV ಕೋನಾ ಕಾರು ಬಿಡುಗಡೆ ಮಾಡಿದ ಹ್ಯುಂಡೈ ಇದೀಗ ಬಸ್ ಉತ್ಪಾದನೆಗೆ ಲಗ್ಗೆ ಇಟ್ಟಿದೆ. ಹ್ಯುಂಡೈ ಮೊತ್ತ ಮೊದಲ ಎಲೆಕ್ಟ್ರಿಕ್ ಬಸ್ ಬಿಡುಗಡೆ ಮಾಡಿದೆ.

ಒಂದೇ ವರ್ಷದಲ್ಲಿ ದಾಖಲೆ ಬರೆದ ಹ್ಯುಂಡೈ ವೆನ್ಯೂ ಕಾರು!..

ಕಂಟ್ರಿ ಮಿನಿಬಸ್ 7,710mm ಉದ್ದವಿದೆ. 128kwH ಲಿಥಿಯಂ ಐಯಾನ್ ಪಾಲಿಮರ್ ಬ್ಯಾಟರಿ ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ಮೈಲೇಜ್ ನೀಡಲಿದೆ. ವಿಶೇಷ ಅಂದರೆ ಫಾಸ್ಟ್ ಚಾರ್ಜಿಂಗ್ ಮೂಲಕ 72 ನಿಮಿಷದಲ್ಲಿ  ಫುಲ್ ಚಾರ್ಜ್ ಆಗಲಿದೆ. 

 

ಲಾಕ್‌ಡೌನ್‌ನಲ್ಲೂ ದಾಖಲೆ ಬರೆದ ನ್ಯೂ ಜನರೇಶನ್ ಕ್ರೆಟಾ ಕಾರು

15 ರಿಂದ 33 ಸೀಟಿನ ಸಾಮರ್ಥ್ಯ ಹೊಂದಿರುವ ಈ ಬಸ್ ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಇತಿಹಾಸ ಬರೆಯಲಿದೆ ಎಂದು ಕಂಪನಿ ಹೇಳಿದೆ. ರೇರ್ ಪಾರ್ಕಿಂಗ್ ಅಸಿಸ್ಟ್, ಪಾದಾಚಾರಿಗಳ ಅಪಘಾತ ಅಲರ್ಟ್ ಸೇರಿದಂತೆ ಹಲವು ಸುರಕ್ಷತೆ ಸೌಲಭ್ಯಗಳು ಇದರಲ್ಲಿದೆ.

ಹ್ಯುಂಡೈ ಎಲೆಕ್ಟ್ರಿಕ್ ಮಿನಿ ಬಸ್ ಬಿಡುಗಡೆ ಮಾಡಿರುವುದು ಸೌತ್ ಕೊರಿಯಾದಲ್ಲಿ. ಶೀಘ್ರದಲ್ಲೇ ಹ್ಯುಂಡೈ ಭಾರತ ಸೇರಿದಂತೆ ಇತರ ದೇಶಗಳಲ್ಲೂ ಮಿನಿ ಎಲೆಕ್ಟ್ರಿಕ್ ಬಸ್ ಬಿಡುಗಡೆ ಮಾಡಲಿದೆ.