Asianet Suvarna News Asianet Suvarna News

ಶೀಘ್ರದ್ರಲ್ಲೇ ಮಾರುತಿ ವ್ಯಾಗನ್R ಕಾರಿಗೆ ಪ್ರತಿಸ್ಪರ್ಧಿ- ಹೊಂಡಾ ಎಲೆಕ್ಟ್ರಿಕ್ !

ಮಾರುತಿ ಸುಜುಕಿ ವ್ಯಾಗನ್‌ಆರ್ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಹೊಂಡಾ ಕಂಪೆನಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಂದಾಗಿದೆ. ಈ ಮೂಲಕ ಮಾರುತಿಗೆ ಪೈಪೋಟಿ ನೀಡಲು ಸಿದ್ಧತೆ ಮಾಡಿಕೊಂಡಿದೆ.
 

Honda to launch small electric car in India rival of Maruti WagonR
Author
Bengaluru, First Published Nov 14, 2018, 5:09 PM IST

ನವದೆಹಲಿ(ನ.13): ಮಾರುತಿ ಸುಜುಕಿ ಸಂಸ್ಥೆ 2020ರ ವೇಳೆಗೆ ಎಲೆಕ್ಟ್ರಿಕ್ ಕಾರು ಬಿಡುಗಡೆ ಎಲ್ಲಾ ಸಿದ್ಧತೆ ನಡೆಸಿದೆ. ಮಾರುತಿ ವ್ಯಾಗನ್‌ಆರ್ ಎಲೆಕ್ಟ್ರಿಕ್ ಕಾರು ಈಗಾಗಲೇ ರೋಡ್ ಟೆಸ್ಟ್ ಯಶಸ್ವಿಯಾಗಿ ಮುಗಿಸಿದೆ. ಇಡೀ ಜಗತ್ತೆ ಈಗ ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡಿದೆ. ಹೀಗಾಗಿ ಇದೀಗ ಮಾರುತಿ ವ್ಯಾಗನ್ಆರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಹೊಂಡಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ.

ಹೊಂಡಾ ಎಲೆಕ್ಟ್ರಿಕ್ ಕಾರು ಬಿ ಸೆಗ್ಮೆಂಟ್ ಅಥವಾ ಸಣ್ಣ SUV ಸೆಗ್ಮೆಂಟ್‌ನಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. 2023-24ರ ವೇಳೆಗೆ ಹೊಂಡಾ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ.

 

 

ಹೊಂಡಾ ನೂತನ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 150-200 ಕಿ.ಮೀ ಪ್ರಯಾಣ ಮಾಡಬಹುದಾಗಿದೆ. ಹೊಂಡಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಸಮಯದಲ್ಲಿ ಭಾರಿ ಪೈಪೋಟಿ ಎದುರಿಸಲಿದೆ. ಕಾರಣ ಈಗಾಗಲೇ ಮಹೀಂದ್ರ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಇನ್ನು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಮುಂದಾಗಿದೆ. ಇಷ್ಟೆ ಅಲ್ಲ ಟಾಟಾ ಮೋಟಾರ್ಸ್ ಕೂಡ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಹೀಗಾಗಿ ಹೊಂಡಾ ಎಲೆಕ್ಟ್ರಿಕ್ ಕಾರಿಗೆ ಭಾರಿ ಪೈಪೋಟಿ ಎದುರಾಗಲಿದೆ.

Follow Us:
Download App:
  • android
  • ios