ಹೊಂಡಾ ಪಾಸ್‌ಪೋರ್ಟ್ SUV ಕಾರು ಅನಾವರಣ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 28, Nov 2018, 1:29 PM IST
Honda revealed New SUV passport car in La motor show
Highlights

ಹೊಂಡಾ ಕಂಪನಿ ನೂತನ ಪಾಸ್‌ಪೋರ್ಟ್ SUV ಕಾರು ಅನಾವರಣ ಮಾಡಿದೆ. ಈ ಕಾರಿನ ವಿಶೇಷತೆ ಏನು? ಇತರ ಕಾರಿಗಿಂತ ಭಿನ್ನ ಹೇಗೆ? ಇಲ್ಲಿದೆ ಹೆಚ್ಚಿನ ವಿವರ.

ಲಾಸ್ ಎಂಜಲ್ಸ್(ನ.28): ಹೊಂಡಾ ಕಂಪನಿ ನೂತನ SUV ಕಾರು ಅನಾವರಣ ಮಾಡಿದೆ. ಲಾ ಮೋಟಾರ್ ಸ್ಪೋರ್ಟ್ಸ್‌ನಲ್ಲಿ ನೂತನ ಕಾರನ್ನ ರಿವೀಲ್ ಮಾಡಿದ ಹೊಂಡಾ ಪಾಸ್‌ಪೋರ್ಟ್ SUV ಎಂದು ನಾಮಕರಣ ಮಾಡಿದೆ. 

 

 

ನೂತನ ಪಾಸ್‌ಪೋರ್ಟ್ SUV ಕಾರು 3.6 ಲೀಟರ್,ವಿ6 ಪೆಟ್ರೋಲ್ ಹೊಂದಿರುವ ಪಾಸ್‌ಪೋರ್ಟ್ SUV ಕಾರು 284hp ಹಾಗೂ 355nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಹೀಗಾಗಿ ಹೆಚ್ಚು ಬಲಿಷ್ಠ ಕಾರಾಗಿ ಹೊರಹೊಮ್ಮಲಿದೆ.

ನೂತನ ಪಾಸ್‌ಪೋರ್ಟ್ SUV ಕಾರು ಇತರ 4 ಸೀಟರ್ SUV ಸೆಗ್ಮೆಂಟ್ ಕಾರುಗಳಿಂದ ಗಾತ್ರದಲ್ಲಿ ದೊಡ್ಡದಿದೆ.  1,167 ಲೀಟರ್ ಬೂಟ್ ಸ್ಪೇಸ್ ಹೊಂದಿರುವ ಈ ಕಾರು, 8.0 ಇನ್ಫೋಟೈನ್‌ಮೆಂಟ್ ಟಚ್ ಸ್ಕ್ರೀನ್, ಆ್ಯಂಡ್ರಾಯಿಡ್ ಆಟೋ ಹಾಗೂ ಆ್ಯಪಲ್ ಆಟೋ ಪ್ಲೇ ಹೊಂದಿದೆ. ಇದರ ಬೆಲೆ ಇನ್ನು ಬಹಿರಂಗಪಡಿಸಿಲ್ಲ.  ಇಷ್ಟೇ ಅಲ್ಲ ಈ ಕಾರು ಭಾರತದಲ್ಲಿ ಬಿಡುಗಡೆಯಾಗೋ ಸಾಧ್ಯತೆ ಕಡಿಮೆ.

loader