ನವದೆಹಲಿ(ಮೇ.06): ಹೊಂಡಾ ಮೋಟರ್‌ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ ಕಂಪನಿಯ  ಹೊಂಡಾ ಆಕ್ಟೀವಾ ಹಾಗೂ ಹೊಂಡಾ ಡಿಯೋ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.  ಆಕ್ಟೀವಾ ಮಾರಾಟದಲ್ಲಿ ದಾಖಲೆ ಬರೆದ ಬೆನ್ನಲ್ಲೇ ಇದೀಗ ಡಿಯೋ ಕೂಡ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ: ಬಜಾಜ್‌ನಿಂದ ಹೊಸ ಆಫರ್- ಡೊಮಿನಾರ್ 400 ಬೈಕ್ ಬೆಲೆ ಕಡಿತ!

ಹೊಂಡಾ ಡಿಯೋ ಒಟ್ಟು 30 ಲಕ್ಷ ಸ್ಕೂಟರ್‌ಗಳು ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ. ಆರಂಭಿಕ 14 ವರ್ಷಗಳಲ್ಲಿ 15 ಲಕ್ಷ ಸ್ಕೂಟರ್ ಮಾರಾಟವಾಗಿತ್ತು. ಕಳೆದ 3 ವರ್ಷಗಳಲ್ಲಿ 15 ಲಕ್ಷ ಸ್ಕೂಟರ್ ಮಾರಾಟವಾಗಿದೆ. ಈ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಿದೆ.

ಇದನ್ನೂ ಓದಿ: ಬಜಾಜ್ ಅವೆಂಜರ್ 160 ABS ಬೈಕ್ ಬಿಡುಗಡೆ- ಬೆಲೆ ಎಷ್ಟು?

ಹೊಂಡಾ ಡಿಯೋ 2018ರಲ್ಲಿ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. LED ಹೆಡ್‌ಲ್ಯಾಂಪ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ.  ನೂತನ ಡಿಯೋ ಸ್ಕೂಟರ್ ಬೆಲೆ 52,938 ರೂಪಾಯಿ.  109 cc ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು,  8 bhp ಪವರ್ ಹಾಗೂ 8.91 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.