ಮೂರು ಹೊಸ ಹೀರೋ ಬೈಕ್ ದೇಶಕ್ಕೆ ಅರ್ಪಣೆ!
ಭಾರತದ ಅತೀ ದೊಡ್ಡ ಮೋಟಾರ್‌ಸೈಕಲ್ ತಯಾರಿಕಾ ಕಂಪನಿ ಹೀರೋ ಮೋಟಾರ್ ಕಾರ್ಪ್ ಮೂರು ಹೊಸ ಬೈಕ್ ಬಿಡುಗಡೆ ಮಾಡಿದೆ. 3 ಬೈಕ್ ವಿಶೇಷತೆ, ಹೊಸತನ, ಹೀರೋ ಕಂಪನಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಜೈಪುರ(ಫೆ.24): ಭಾರತದಲ್ಲಿ ನಂಬರ್ ವನ್ ಮೋಟಾರ್‌ಸೈಕಲ್ ಕಂಪನಿ ಯಾವುದು ಅಂತ ನೀವು ಕೇಳಿದರೆ ಅದಕ್ಕೆ ಉತ್ತರ ಹೀರೋ. ಹಾಗಾಗಿಯೇ ಹೀರೋ ಮೋಟೋ ಕಾಪ್‌ರ್ ಕಂಪನಿ ಸದಾ ಉತ್ಸಾಹದಲ್ಲಿರುತ್ತದೆ. ಅದೇ ಹುಮ್ಮಸ್ಸಲ್ಲಿ ಹೀರೋ ಕಂಪನಿ ರಾಜಸ್ಥಾನದ ಜೈಪುರದ ವಿಶಾಲವಾದ ಮತ್ತು ಅದ್ಭುತವಾದ ಬೈಕು ತಯಾರಿಕಾ ಘಟಕದಲ್ಲಿ ಹೀರೋ ವರ್ಲ್ಡ್ 2020 ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಭಾರಿ ಬಿಸಿಲು ಬೀಳುತ್ತಿದ್ದ ಒಂದು ಮುಂಜಾನೆ ನಾವು ಹೀರೋ ಘಟಕದ ಮುಂದೆ ನಿಂತಿದ್ದೆವು.
ತಿರುವು ಮುರುವು ರಸ್ತೆ, ಕಲ್ಲುಗಳೇ ತುಂಬಿದ ರಸ್ತೆ, ಉಬ್ಬು ತಗ್ಗುಗಳಿರುವ ವಿಚಿತ್ರ ರಸ್ತೆ ಹೀಗೆ ನಾನಾ ಬಗೆಯ ರಸ್ತೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಘಟಕ ಅದು. ಯಾವುದೇ ಬೈಕುಗಳನ್ನು ಆ ರಸ್ತೆಗಳಲ್ಲಿ ಓಡಿಸಿ ಟೆಸ್ಟ್ ಮಾಡಲಾಗುತ್ತದೆ. ಅದಕ್ಕಾಗಿ ಅಲ್ಲಿ ರಸ್ತೆಗಳೋ ರಸ್ತೆಗಳು. ಹೀಗೆ ನಾನಾ ಬಗೆಯ ರಸ್ತೆಗಳನ್ನು ದಾಟಿ ಒಂದು ಮೈದಾನಕ್ಕೆ ಹೋದರೆ ಅಲ್ಲಿ ಅಚ್ಚರಿ ಕಾದಿತ್ತು. ಹೀರೋ ಕಂಪನಿ ಬಿಎಸ್ 6 ಇಂಜಿನ್ ಹೊಂದಿರುವ ಮೂರು ಬೈಕುಗಳನ್ನು ಬಿಡುಗಡೆ ಮಾಡಲು ತಯಾರಾಗಿ ನಿಲ್ಲಿಸಿತ್ತು. ಹೀರೋ ಮೋಟೋಕಾಪ್‌ರ್ ಕಂಪನಿಯ ಚೇರ್‌ಮನ್ ಡಾ. ಪವನ್ ಮುಂಜಲ್ ಉತ್ಸಾಹದ ಬುಗ್ಗೆಯಂತೆ ನಿಂತಿದ್ದರು. ಕಡೆಗೆ ಮೂರು ಹೊಸ ಬೈಕುಗಳನ್ನು ದೇಶಕ್ಕೆ ಅರ್ಪಿಸಿದರು. ಅದರ ಹೆಸರು ಹೀರೋ ಎಕ್ಸ್‌ಟ್ರೀಮ್ 160ಆರ್, ಹೀರೋ ಪ್ಯಾಷನ್ ಪ್ರೋ ಮತ್ತು ಹೀರೋ ಗ್ಲಾಮರ್. ಹಳೆಯ ಹೆಸರಿನ ಹೊಸ ವರ್ಷನ್ ಬೈಕುಗಳಿವು.
ಮೂರು ಹೊಸ ಹೀರೋ ಬೈಕುಗಳು
1. ಹೀರೋ ಎಕ್ಸ್‌ಟ್ರೀಮ್ 160ಆರ್
ಎಲ್‌ಇಡಿ ಲೈಟುಗಳನ್ನು ಹೊಂದಿರುವ ಭಾರಿ ಸ್ಟೈಲಿಷ್ ಆಗಿರುವ 160 ಸಿಸಿ ಬೈಕು ಇದು. ಐದು ಸ್ಪೀಡ್ ಗೇರ್, ಎಬಿಎಸ್ ಹೊಂದಿರುವ ಈ ಬೈಕು ಮೂರು ಬಣ್ಣಗಳಲ್ಲಿ ಲಭ್ಯವಿದೆ. ಬೈಕ್ ಪ್ರೇಮಿಗಳಿಗೆ ಇಷ್ಟವಾಗಬಹುದಾದ ಈ ಬೈಕು ಮಾಚ್‌ರ್‍ನಲ್ಲಿ ಬಿಡುಗಡೆಯಾಗಲಿದೆ.
2. ಹೀರೋ ಪ್ಯಾಷನ್ ಪ್ರೋ
110 ಸಿಸಿಯ ಮಧ್ಯಮ ವರ್ಗದ ಮಂದಿಯ ಡಾರ್ಲಿಂಗ್ ಆಗಬಹುದಾದ ಹೀರೋ ಪ್ಯಾಷನ್ ಪ್ರೋ ಆರಂಭಿಕ ಬೆಲೆ ರೂ.64,990. ನಾಲ್ಕು ಬಣ್ಣಗಳಲ್ಲಿ ಈ ಬೈಕು ಲಭ್ಯವಾಗಲಿದೆ.
3. ಹೀರೋ ಗ್ಲಾಮರ್
ಇದು 125 ಸಿಸಿ ಬೈಕು. ಜಾಸ್ತಿ ಗ್ರೌಂಡ್ ಕ್ಲಿಯರೆನ್ಸ್ ಇರುವ, ಹೆಚ್ಚು ಪವರ್ ಬೈಕು. ಇದರ ಆರಂಭಿಕ ಬೆಲೆ ರು.68,900. ಈ ಬೈಕ್ ಕೂಡ ನಾಲ್ಕು ಬಣ್ಣಗಳಲ್ಲಿ ಲಭ್ಯ.
ಹೀರೋ ಎಕ್ಸ್‌ಪಲ್ಸ್ 200 ರಾರಯಲಿ ಕಿಟ್
ಹೀರೋ ಕಂಪನಿ ಒಂದು ಕಡೆ ಎಲ್ಲರಿಗಾಗಿ ಬೈಕು ತಯಾರಿಸುತ್ತಿದ್ದರೆ ಮತ್ತೊಂದು ಕಡೆ ಬೈಕ್ ರೇಸ್ ಇಷ್ಟಪಡುವವರಿಗಾಗಿಯೇ ರಾರಯಲಿ ಬೈಕು ತಯಾರಿಸುತ್ತಿದೆ. ಅದರ ಫಲವಾಗಿಯೇ ತಯಾರಾಗಿದ್ದು ಹೀರೋ ಎಕ್ಸ್‌ಪಲ್ಸ್ 200 ಬೈಕು. ಈಗ ಆ ಬೈಕಿನ ರಾರಯಲಿ ಕಿಟ್ ಮಾರುಕಟ್ಟೆಗೆ ಬಿಡುತ್ತಿದೆ ಹೀರೋ. ಬೈಕ್ ರೇಸ್ ಇಷ್ಟಪಡುವವರಿಗೆ ಈ ಕಿಟ್ ಅನುಕೂಲವಾಗಲಿದೆ. ಆ ಬೈಕು, ರಾರಯಲಿ ಕಿಟ್ ಹೇಗಿದೆ ಅಂತ ತೋರಿಸುವುದಕ್ಕೆ ರೇಸ್ ಟ್ರ್ಯಾಕ್‌ಗಳಲ್ಲಿ ಬೈಕು ಓಡಿಸಲಾಯಿತು. ಈ ಬೈಕಿನ ಸಸ್ಪೆನ್ಷನ್ ಪವರ್‌ಗೆ ಮನಸೋಲದೇ ಇರುವುದು ಅಸಾಧ್ಯ. ರೇಸ್ ಪ್ರೇಮಿಗಳಿಗೆ ಮಾತ್ರ ಲಭ್ಯವಾಗುವ ಈ ಎಕ್ಸ್‌ಪಲ್ಸ್ 200 ರಾರಯಲಿಕಿಟ್ ಬೆಲೆ ರು.38,000. ಮಾಚ್‌ರ್‍ನಿಂದ ಇದು ಕೆಲವೇ ಡೀಲರ್‌ಗಳ ಬಳಿ ಸಿಗಲಿದೆ.
ಪವನ್ ಮುಂಜಲ್ ಎಂಬ ಆಸಕ್ತಿಕರ ವ್ಯಕ್ತಿ
ಪವನ್ ಮುಂಜಲ್ ಹೀರೋ ಕಂಪನಿಯ ಮುಖ್ಯಸ್ಥ. ಆದರೆ ಅವರಿಗೆ ಬೈಕುಗಳ ಮೇಲಿರುವ ಪ್ರೀತಿ ಅಪಾರ. ಹಿರಿಯರಾದರೂ ಕಿರಿತನ ತೋರಿ ಬೈಕೇರಿದ ಅವರ ಉತ್ಸಾಹವೇ ಅದಕ್ಕೆ ಸಾಕ್ಷಿ. ಹೀರೋ ವಲ್ಡ್‌ರ್ 2020 ಕಾರ್ಯಕ್ರಮದಲ್ಲಿ ಅವರು ಕೆಲವು ಮಹತ್ವದ ಘೋಷಣೆಗಳನ್ನು ಮಾಡಿದರು.
- ಮುಂದಿನ ಐದಾರು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವ ಸಲುವಾಗಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿಯೇ 1000 ಕೋಟಿ ರೂಪಾಯಿ ಹೂಡಲಾಗುತ್ತಿದೆ.
- ವಿದೇಶಗಳಲ್ಲೂ ನಮ್ಮ ಬೈಕು ಮಾರಾಟ ಚೆನ್ನಾಗಿದ್ದು, ಯಾವ ದೇಶಗಳಲ್ಲಿ ನಮ್ಮ ಬೈಕು ಲಭ್ಯವಿಲ್ಲವೋ ಅಲ್ಲಿಗೆಲ್ಲಾ ಹೀರೋ ತಲುಪಿಸುವ ಪ್ರಯತ್ನ ನಡೆಯುತ್ತಿದೆ.
- 2011ಕ್ಕೆ ಹೀರೋ ಕಂಪನಿ ಮತ್ತೊಂದು ಹಂತಕ್ಕೆ ಜಿಗಿಯಿತು. ಅಲ್ಲಿಂದ ಇಲ್ಲಿಯವರೆಗೆ ಬಹಳ ದೊಡ್ಡ ಅಭಿವೃದ್ಧಿ ನಡೆದಿದೆ. ನಮ್ಮಷ್ಟುಅತ್ಯಾಧುನಿಕ ಲ್ಯಾಬ್ ಹೊಂದಿರುವ ಕಂಪನಿ ಬೇರೆ ಕಾಣಸಿಗುವುದಿಲ್ಲ.
- ಕಾರ್ಬನ್ ಮುಕ್ತ ಪ್ರಪಂಚಕ್ಕೆ ಹೀರೋ ಕೊಡುಗೆ ಯಾವತ್ತೂ ಇರುತ್ತದೆ.
- ಹೀರೋ ಯಾವತ್ತೂ ಹೀರೋನೇ.
ಜೈಪುರದಲ್ಲಿ ಅದ್ಭುತ ಹೀರೋ ಉತ್ಪಾದನಾ ಘಟಕ
ಜೈಪುರದಲ್ಲಿ ಹೀರೋ ಕಂಪನಿಯ ಅದ್ಭುತ ಉತ್ಪಾದನಾ ಘಟಕವಿದೆ. ಅಲ್ಲಿ ಬೈಕನ್ನು ಎತ್ತಿ ಕೆಳಗೆ ಹಾಕಿ, ಬೈಕನ್ನು ಗೋಡೆಗೆ ಗುದ್ದಿಸಿ ಚೆಕ್ ಮಾಡುವ ಪದ್ಧತಿ ಇದೆ. ಎಲ್ಲವೂ ಸರಿ ಇದೆ ಎಂದಾದ ಮೇಲೆಯೇ ಉತ್ಪಾದನೆಗೆ ಅನುಮತಿ ನೀಡಲಾಗುತ್ತದೆ. ಎಷ್ಟುಶಬ್ದ ಹೊರಹಾಕುತ್ತದೆ, ಎಷ್ಟುಹೊಗೆ ಬರುತ್ತದೆ ಎಂದೆಲ್ಲವೂ ಪರೀಕ್ಷಿಸಲಾಗುತ್ತದೆ. ಅದಕ್ಕೆ ತಕ್ಕ ಅತ್ಯಾಧುನಿಕ ಲ್ಯಾಬ್ ಹೀರೋ ಕಂಪನಿಯಲ್ಲಿದೆ. ಜೈಪುರಕ್ಕೆ ಹೋದವರು ಅನುಮತಿ ಸಿಕ್ಕರೆ ಒಮ್ಮೆ ಈ ಘಟಕಕ್ಕೂ ಭೇಟಿ ನೀಡಬಹುದು.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"