ಮಾಲಿನ್ಯ ತಡೆಗಟ್ಟಲು ಇದೀಗ ಹಳೇ ಮಾಹನಗಳ ನಿಷೇಧಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೆ ದೆಹಲಿ ನಗರದಲ್ಲಿ ನೂತನ ನಿಯಮ ಜಾರಿಗೆ ತರಲಾಗಿದೆ. ದೆಹಲಿ ಬಳಿಕ ಇದೀಗ ಮತ್ತೊಂದು ನಗರದಲ್ಲಿ ಈ ನಿಯಮ ಜಾರಿಗೆ ಬರುತ್ತಿದೆ.
ಪ್ಯಾರಿಸ್(ನ.13): ಮಾಲಿನ್ಯ ತಡೆಗಟ್ಟಲು ದೆಹಲಿಯಲ್ಲಿ 15ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ಹಾಗೂ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳ ಬಳಕೆ ನಿಷೇಧಿಸಿದೆ. ಇದೀಗ ದೆಹಲಿ ಬಳಿಕ ಗ್ರೆಟರ್ ಪ್ಯಾರಿಸ್‌ನಲ್ಲೂ ಡೀಸೆಲ್ ವಾಹನಗಳ ನಿಷೇಧಕ್ಕೆ ಮುಂದಾಗಿದೆ.
2019ರಿಂದಲೇ ಗ್ರೇಟರ್ ಪ್ಯಾರಿಸ್ ನಗದರಲ್ಲಿ ಹಳೆಯ ಡೀಸೆಲ್ ವಾಹನಗಳಿಗೆ ನಿಷೇಧ ಹೇರಲಾಗಿದೆ. ಡಿಸೆಂಬರ್ 31, 2000ನೇ ಇಸವಿಯ ಹಿಂದಿನ ಡೀಸೆಲ್ ವಾಹನಗಳನ್ನ ನಿಷೇಧಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ.
ಪ್ಯಾರಿಸ್ ಕೌನ್ಸಿಲ್ ಮತದಾನ ಮೂಲಕ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಇಷ್ಟೇ ಅಲ್ಲ ಇನ್ನೊಂದು ತಿಂಗಳಲ್ಲಿ ನೂತನ ನಿಯಮ ಜಾರಿಗೆ ಬರಲಿದೆ. 2000ನೇ ಇಸವಿ ಬಳಿಕ ರಿಜಿಸ್ಟ್ರೇಶನ್ ಆಗಿರುವ ಕಾರುಗಳು ಖಡ್ಡಾಯವಾಗಿ ಎಮಿಶನ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಇಷ್ಟೇ ಅಲ್ಲ ಸರ್ಕಾರದ ಕ್ರಿಟ್ ಏರ್ ಟೆಸ್ಟ್ ಪಾಸಾಗಿದ್ದರೆ ಮಾತ್ರ ಬಳಕೆಗೆ ಅವಕಾಶ ನೀಡಲು ಮುಂದಾಗಿದೆ.
ಜುಲೈ 2017ರಲ್ಲಿ ಸೆಂಟ್ರಲ್ ಪ್ಯಾರಿಸ್‌ನಲ್ಲಿ 2000 ಹಳೆಯ ಡೀಸೆಲ್ ವಾಹನಗಳನ್ನ ನಿಷೇಧಿಸಿದೆ. ಇದೀಗ ಗ್ರೇಟರ್ ಪ್ಯಾರಿಸ್ ಕೂಡ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಮೂಲಕ ಮಾಲಿನ್ಯ ತಡೆಗಟ್ಟಲು ದಿಟ್ಟ ಹೆಜ್ಜೆ ಇಟ್ಟಿದೆ.
