Asianet Suvarna News Asianet Suvarna News

ಫಾಸ್ಟ್ಯಾಗ್ ಅಳವಡಿಕೆ ಮುಂದೂಡಿಕೆ : ಸವಾರರು ನಿರಾಳ!

ಫಾಸ್ಟ್‌ ಟ್ಯಾಗ್‌ ಅಳವಡಿಸಿಕೊಂಡಿಲ್ಲದ ವಾಹನಗಳು ದುಪ್ಪಟ್ಟು ಸುಂಕ ಕೊಡಬೇಕು’ ಎಂದು ಈ ಹಿಂದೆ ಹೇಳಿದ್ದ ಕೇಂದ್ರ ಸರ್ಕಾರ, ಅದರಲ್ಲಿ ಕೊಂಚ ಮಾರ್ಪಾಡು ಮಾಡಿದೆ.

Govt postpones mandatory implementation
Author
Bengaluru, First Published Dec 15, 2019, 7:56 AM IST

ನವದೆಹಲಿ [ಡಿ.15]: ‘ಹೆದ್ದಾರಿ ಟೋಲ್‌ ಪ್ಲಾಜಾಗಳಲ್ಲಿ ಡಿ.15ರಿಂದ ಕಡ್ಡಾಯವಾಗಿ ಫಾಸ್ಟ್‌ ಟ್ಯಾಗ್‌ ಮೂಲಕವೇ ಸುಂಕ ಪಾವತಿಸಬೇಕು. ಫಾಸ್ಟ್‌ ಟ್ಯಾಗ್‌ ಅಳವಡಿಸಿಕೊಂಡಿಲ್ಲದ ವಾಹನಗಳು ದುಪ್ಪಟ್ಟು ಸುಂಕ ಕೊಡಬೇಕು’ ಎಂದು ಈ ಹಿಂದೆ ಹೇಳಿದ್ದ ಕೇಂದ್ರ ಸರ್ಕಾರ, ಅದರಲ್ಲಿ ಕೊಂಚ ಮಾರ್ಪಾಡು ಮಾಡಿದೆ.

ಫಾಸ್ಟ್‌ ಟ್ಯಾಗ್‌ ಅಳವಡಿಕೆ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿರುವ ಕಾರಣ, ಅದನ್ನು ಅಳವಡಿಸಿಕೊಳ್ಳದ ವಾಹನಗಳಿಗೆ ಡಿ.15ರ ಭಾನುವಾರದಿಂದ ಹೆಚ್ಚುವರಿ ಸುಂಕ ವಿಧಿಸದೇ ಇರಲು ನಿರ್ಧರಿಸಿದೆ. ಫಾಸ್ಟ್‌ ಟ್ಯಾಗ್‌ ಅಳವಡಿಕೆಗೆ ಇನ್ನೂ ಒಂದು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡುವುದಾಗಿ ಪ್ರಕಟಿಸಿದೆ. ಜತೆಗೆ ಈಗಾಗಲೇ ಫಾಸ್ಟ್‌ ಟ್ಯಾಗ್‌ ಅಳವಡಿಸಿಕೊಂಡಿರುವ ವಾಹನಗಳು ಸುಗಮವಾಗಿ ಸಂಚರಿಸುವಂತಾಗಲು ಟೋಲ್‌ ಪ್ಲಾಜಾಗಳಲ್ಲಿ ಶೇ.75ರಷ್ಟುದ್ವಾರಗಳನ್ನು ಅಂತಹ ವಾಹನಗಳಿಗೆ ಮೀಸಲಿಟ್ಟಿದೆ. ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳಿಗೆ ಶೇ.25ರಷ್ಟುದ್ವಾರಗಳು ಇರಲಿವೆ.

ಹೀಗಾಗಿ ಫಾಸ್ಟ್‌ಟ್ಯಾಗ್‌ ಇಲ್ಲದಿದ್ದರೂ, ದುಬಾರಿ ಸುಂಕ ಕೊಡದೇ ಟೋಲ್‌ ಪ್ಲಾಜಾವನ್ನು ವಾಹನಗಳು ಹಾದು ಹೋಗಬಹುದು. ಆದರೆ ಸುಂಕ ಕಟ್ಟಿಸಿಕೊಳ್ಳುವ ಕೇಂದ್ರಗಳ ಸಂಖ್ಯೆ ಕಡಿಮೆ ಇರುವುದರಿಂದ ಸರತಿಯಲ್ಲಿ ಕಾಯುವುದು ಅನಿವಾರ್ಯವಾಗಲಿದೆ.

ಪೇಟಿಎಂನ ಪೇಮೆಂಟ್ಸ್‌ ಬ್ಯಾಂಕ್‌ನಿಂದ ಫಾಸ್ಟ್‌ ಟ್ಯಾಗ್‌ ಮಾರಾಟ...

ಡಿ.1ರಿಂದಲೇ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಬಳಿಕ 15 ದಿನ ವಿನಾಯಿತಿ ನೀಡಿತ್ತು. ಸರ್ಕಾರದ ಉದ್ದೇಶಿತ ನಿರ್ಧಾರ ಪ್ರಕಾರ, ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳು ದುಪ್ಪಟ್ಟು ಟೋಲ್‌ ಶುಲ್ಕ ತೆರಬೇಕಿತ್ತು. ಈಗ ದುಪ್ಪಟ್ಟು ಶುಲ್ಕವನ್ನು ಜನವರಿ 15ರವರೆಗೆ ತೆರಬೇಕಿಲ್ಲ.

ಇದಲ್ಲದೆ, ಟೋಲ್‌ ಪ್ಲಾಜಾದ 1 ಗೇಟ್‌ನಲ್ಲಿ ಮಾತ್ರ ಫಾಸ್ಟ್‌ಟ್ಯಾಗ್‌ ರಹಿತ ವಾಹನಗಳು ಸಂಚರಿಸಲು ಅವಕಾಶ ನೀಡಿ, ಉಳಿದ ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್‌ಯುಕ್ತ ವಾಹನಗಳಿಗಷ್ಟೇ ಅವಕಾಶ ನೀಡಲು ನಿರ್ಧರಿಸಲಾಗಿತ್ತು. ಈ ಕ್ರಮವನ್ನು ಕೂಡ ಸಡಿಲಿಕೆ ಮಾಡಲಾಗಿದ್ದು, ‘ಶೇ.25ರಷ್ಟುಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್‌ ರಹಿತ ವಾಹನಗಳು ಸಂಚರಿಸಬಹುದು. ಉಳಿದ ಶೇ.75ರಷ್ಟುಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್‌ಯುಕ್ತ ವಾಹನಗಳು ಮಾತ್ರ ಸಂಚರಿಸಬೇಕು’ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಿರುವ ಸೂಚನೆಯಲ್ಲಿ ತಿಳಿಸಿದೆ.

‘ಫಾಸ್ಟ್‌ಟ್ಯಾಗ್‌ ರಹಿತ ವಾಹನಗಳು ಹೆಚ್ಚಾಗಿದ್ದರೆ ಒಂದೇ ಗೇಟ್‌ನಲ್ಲಿ ಅವು ಸರದಿಯಲ್ಲಿ ನಿಂತು ಟ್ರಾಫಿಕ್‌ ಸಮಸ್ಯೆ ಉಂಟಾಗಬಹುದು. ಹೀಗಾಗಿ ದಟ್ಟಣೆಗೆ ಅನುಗುಣವಾಗಿ ಶೇ.25ರಷ್ಟುಗೇಟ್‌ಗಳನ್ನು ಟ್ಯಾಗ್‌ರಹಿತ ವಾಹನಗಳ ಸಂಚಾರಕ್ಕೆ ಬಿಡಬಹುದು. ಟ್ರಾಫಿಕ್‌ ಸಮಸ್ಯೆ ನಿವಾರಣೆ ಮಾಡುವುದಕ್ಕೋಸ್ಕರ ಡಿಸೆಂಬರ್‌ 15ರಿಂದ 30 ದಿನ ಅವಧಿಗೆ ನಿಯಮ ಸಡಿಲಿಕೆ ಮಾಡಲಾಗಿದೆ’ ಎಂದು ಅದು ಸ್ಪಷ್ಟಪಡಿಸಿದೆ.

ಫಾಸ್ಟ್‌ಟ್ಯಾಗ್‌ ಕೆಲಸ ಹೇಗೆ?: ಫಾಸ್ಟ್‌ಟ್ಯಾಗ್‌ ಸ್ಟಿಕ್ಕರ್‌ ಅನ್ನು ವಾಹನದ ಮುಂಭಾಗದ ಗಾಜಿಗೆ ಅಳವಡಿಸಲಾಗುತ್ತದೆ. ವಾಹನದ ಮಾಲೀಕರು ಫಾಸ್ಟ್‌ಟ್ಯಾಗನ್ನು ಪ್ರೀಪೇಡ್‌ ಮೊಬೈಲ್‌ ರೀಚಾಜ್‌ರ್‍ ರೀತಿಯಲ್ಲಿ ರೀಚಾಜ್‌ರ್‍ ಮಾಡಿಸಬಹುದು. ಟೋಲ್‌ಗೇಟ್‌ಗಳಲ್ಲಿ ವಾಹನ ಸಾಗಿದಾಗ, ವಾಹನದ ಫಾಸ್ಟ್‌ಟ್ಯಾಗ್‌ ಸ್ಕಾ್ಯನ್‌ ಆಗುತ್ತದೆ. ಆಗ ತನ್ನಿಂತಾನೇ ಪ್ರೀಪೇಡ್‌ ಫಾಸ್ಟ್‌ಟ್ಯಾಗ್‌ ರೀಚಾಜ್‌ರ್‍ ವ್ಯಾಲೆಟ್‌ನಲ್ಲಿದ್ದ ಹಣವು ಕಡಿತಗೊಳ್ಳುತ್ತದೆ. ರೀಚಾಜ್‌ರ್‍ ವ್ಯಾಲೆಟ್‌ನಲ್ಲಿನ ಹಣ ಖಾಲಿಯಾಗುತ್ತಿದ್ದಂತೆಯೇ ವಾಹನ ಮಾಲೀಕರು ಮತ್ತೆ ರೀಚಾಜ್‌ರ್‍ ಮಾಡಿಸಬಹುದು.

ಲಾಭ ಏನು?: ಈವರೆಗೆ ಟೋಲ್‌ಗೇಟ್‌ಗಳಲ್ಲಿ ನಗದು ತೆತ್ತು ಟೋಲ್‌ ಶುಲ್ಕ ಪಾವತಿಸಬೇಕಿತ್ತು. ಆಗ ಚಿಲ್ಲರೆ ಹಣ ವಾಪಸು ಕೊಡುವುದು ಸೇರಿದಂತೆ ನಾನಾ ಕಾರಣಗಳಿಂದ ಟೋಲ್‌ ಪಾವತಿ ವಿಳಂಬವಾಗಿ ಹನುಮಂತನ ಬಾಲದ ಹಾಗೆ ಟೋಲ್‌ನಾಕಾಗಳಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದವು. ಆದರೆ ಫಾಸ್ಟ್‌ಟ್ಯಾಗ್‌ ಅಳವಡಿಕೆಯಿಂದ ಇಂತಹ ಯಾವುದೇ ಸಮಸ್ಯೆ ಇಲ್ಲ. ಫಾಸ್ಟ್‌ಟ್ಯಾಗ್‌ ಸ್ಕಾ್ಯನ್‌ ಆಗುತ್ತಿದ್ದಂತೆಯೇ ಟೋಲ್‌ಗೇಟು ತೆರೆದುಕೊಂಡು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಇದರಿಂದ ಟೋಲ್‌ಗೇಟ್‌ಗಳಲ್ಲಿ ಟ್ರಾಫಿಕ್‌ ಜಾಮ್‌ ಕಿರಿಕಿರಿ ಇರುವುದಿಲ್ಲ.

ಖರೀದಿ ಹೇಗೆ?:  ಫಾಸ್ಟ್‌ಟ್ಯಾಗ್‌ಗಳನ್ನು ರಾಷ್ಟ್ರೀಯ ಹೆದ್ದಾರಿ ಟೋಲ್‌ಪ್ಲಾಜಾಗಳಲ್ಲಿರುವ ಫಾಸ್ಟ್‌ಟ್ಯಾಗ್‌ ಖರೀದಿ ಕೇಂದ್ರಗಳಿಂದ ಖರೀದಿಸಬಹುದು. ಇಲ್ಲವೇ 22 ಪ್ರಮಾಣೀಕೃತ ಬ್ಯಾಂಕ್‌ಗಳಲ್ಲಿ ಅಥವಾ ಇಂಟರ್ನೆಟ್‌ ಬ್ಯಾಂಕಿಂಗ್‌ ಮೂಲಕ ಖರೀದಿ ಮಾಡಬಹುದು. ಅಮೆಜಾನ್‌ನಂತಹ ಇ-ಕಾಮರ್ಸ್‌ ವೇದಿಕೆಗಳಲ್ಲಿ ಕೂಡ ಇದು ಲಭ್ಯ.

ರೀಚಾಜ್‌ರ್‍ ಹೇಗೆ?:  ಫಾಸ್ಟ್‌ಟ್ಯಾಗ್‌ ಹೊಂದಿದವರಿಗೆ ವ್ಯಾಲೆಟ್‌ ಐಡಿ ನಂಬರ್‌ ನೀಡಲಾಗುತ್ತದೆ. ಇಂಟರ್ನೆಟ್‌ ಬ್ಯಾಂಕಿಂಗ್‌ ಅಥವಾ ಯುಪಿಐ ಮೂಲಕ ಇದನ್ನು ನಮೂದಿಸಿ ರೀಚಾಜ್‌ರ್‍ ಮಾಡಿಸಬಹುದು.

Follow Us:
Download App:
  • android
  • ios