Asianet Suvarna News Asianet Suvarna News

ದೆಹಲಿಯ ಎಲೆಕ್ಟ್ರಿಕ್‌ ವಾಹನ ಪಾರ್ಕಿಂಗ್‌ನಲ್ಲಿ ಬೆಂಕಿ, ಸುಟ್ಟು ಭಸ್ಮವಾದ ನೂರಾರು ಗಾಡಿಗಳು

Fire in electric vehicle parking space in Delhi: ದೆಹಲಿಯ ಜಾಮಿಯಾನಗರದಲ್ಲಿರುವ ಎಲೆಕ್ಟ್ರಿಕ್‌ ಗಾಡಿಗಳ ಪಾರ್ಕಿಂಗ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ನೂರಾರು ಗಾಡಿಗಳು ಬೆಂಕಿಗೆ ಆಹುತಿಯಾಗಿದೆ.

Fire breaks out at delhi electric vehicle parking 100s of vehicles gutted
Author
Bengaluru, First Published Jun 8, 2022, 11:59 AM IST

ನವದೆಹಲಿ: ದೆಹಲಿಯ ಜಾಮಿಯಾ ನಗರದ ಎಲೆಕ್ಟ್ರಿಕ್‌ ವಾಹನಗಳ ಪಾರ್ಕಿಂಗ್‌ನಲ್ಲಿ ಅಗ್ನಿ ಅವಘಡವಾಗಿದ್ದು ನೂರಾರು ವಾಹನಗಳು ಸುಟ್ಟು ಬೂದಿಯಾಗಿದೆ. ಪಾರ್ಕಿಂಗ್ ಲಾಟ್‌ನಲ್ಲಿ ಬೆಂಕಿಯ ಕೆನ್ನಾಲಿಗೆ ಎಲೆಕ್ಟ್ರಿಕ್‌ ಕಾರು, ರಿಕ್ಷಾ, ಸ್ಕೂಟರ್‌ ಸೇರಿದಂತೆ ಹಲವು ವಾಹನಗಳನ್ನು ಆಹುತಿ ತೆಗೆದುಕೊಂಡಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದೆ. 

ಅಗ್ನಿಶಾಮಕ ದಳದ ಮಾಹಿತಿಯ ಪ್ರಕಾರ 11 ವಾಹನಗಳು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಸಲಾಗಿದೆ. 10 ಕಾರುಗಳು, ಒಂದು ಮೋಟರ್‌ ಬೈಕ್‌, ಎರಡು ಸ್ಕೂಟರ್‌, 30 ಹೊಸ ಎಲೆಕ್ಟ್ರಿಕ್‌ ರಿಕ್ಷಾ ಮತ್ತು 50 ಹಳೆಯ ರಿಕ್ಷಾಗಳು ಬೆಂಕಿಗೆ ಆಗುತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ. ಪಾರ್ಕಿಂಗ್‌ ವ್ಯವಸ್ಥೆಯ ಕೆಲಸಗಾರರು ಘಟನಾ ಸ್ಥಳದಲ್ಲೇ ಇದ್ದರಾದರೂ ಬೆಂಕಿನ್ನು ನಂದಿಸಲು ಸಾಧ್ಯವಾಗಿಲ್ಲ. ಬೆಂಕಿಗೆ ಕಾರಣವೇನು ಎಂಬುದು ಸಹ ಇದುವರೆಗೂ ತಿಳಿದು ಬಂದಿಲ್ಲ. 

ಹೆಚ್ಚುತ್ತಿದೆ ಎಲೆಕ್ಟ್ರಿಕ್‌ ವಾಹನಗಳ ಅವಘಡ:
ಇತ್ತೀಚೆಗೆ ಪುಣೆಯಲ್ಲಿ ಓಲಾ ಸ್ಕೂಟರ್‌ ಟ್ರಾಫಿಕ್‌ನಲ್ಲಿ ಹೊತ್ತಿ ಉರಿದಿತ್ತು. ಅದೇ ರೀತಿಯ ಘಟನೆಗಳು ದೇಶಾದ್ಯಂತ ಕೇಳಿ ಬಂದಿತ್ತು. ಕೇವಲ ಓಲಾ ಒಂದೇ ಅಲ್ಲದೇ ವಿವಿಧ ಕಂಪೆನಿಗಳ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. 

ಬೆಂಗಳೂರು ಮೂಲದ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಎಕ್ಸ್‌ಪೀರಿಯನ್ಸ್ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಲವು ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿದೆ. ಚೆನ್ನೈನಲ್ಲಿರುವ ಎದರ್ ಎಕ್ಸ್‌ಪೀರಿಯನ್ಸ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ಚೆನ್ನೈನಲ್ಲಿ ಎಕ್ಸ್‌ಪೀರಿಯನ್ಸ್ ಕೇಂದ್ರದಲ್ಲಿ ಇದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಎಕ್ಸ್‌ಪೀರಿಯನ್ಸ್ ಕೇಂದ್ರದಲ್ಲಿದ್ದ ಉದ್ಯೋಗಿಗಳು ಹೊರಬಂದಿದ್ದಾರೆ. ಬೆಂಕಿ ಹಾಗೂ ಹೊಗೆ ಕಾರಣ ಸ್ಕೂಟರ್‌ಗಳನ್ನು ತೆರವು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕೆಲ ಸ್ಕೂಟರ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ.

Ather Energy Updates: ಮಾರ್ಚ್ ತಿಂಗಳಲ್ಲಿ ಶೇ.125ರಷ್ಟು ಮಾರಾಟ ದಾಖಲಿಸಿದೆ ಏಥರ್ ಎನರ್ಜಿ

ಈ ಕುರಿತು ಟ್ವೀಟ್ ಮಾಡಿರುವ ಎದರ್, ಚೆನ್ನೈನಲ್ಲಿನ ಎಕ್ಸ್‌ಪೀರಿಯನ್ಸ್ ಕೇಂದ್ರದಲ್ಲಿ ಸಣ್ಣ ಬೆಂಕಿ ಕಾಣಿಸಿಕೊಂಡಿದೆ. ಇದು ಕಚೇರಿ ಹಾಗೂ ಸ್ಕೂಟರ್ ಮೇಲೂ ಪರಿಣಾಮ ಬೀರಿದೆ. ಅದೃಷ್ಠವಶಾತ್ ಎಲ್ಲಾ ಉದ್ಯೋಗಿಗಳು ಸುರಕ್ಷಿತವಾಗಿದ್ದಾರೆ. ಶೀಘ್ರದಲ್ಲೇ ಎಕ್ಸ್‌ಪೀರಿಯನ್ಸ್ ಕೇಂದ್ರ ಕಾರ್ಯಾರಂಭಗೊಳ್ಳಲಿದೆ ಎಂದು ಎದರ್ ಹೇಳಿದೆ.

ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನಗಳು ಹೆಚ್ಚಾಗಿದೆ. ಇದು ಗ್ರಾಹಕರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಕಚೇರಿಯಲ್ಲೇ ಬೆಂಕಿ ಕಾಣಿಸಿಕೊಂಡಿದ್ದು ಆತಂಕ ಮತ್ತಷ್ಟು ಹೆಚ್ಚಿಸಿದೆ. ಈ ಘಟನೆಗೆ ಕಾರಣವೇನು? ಸ್ಕೂಟರ್ ಬ್ಯಾಟರಿಗಳೇ? ಅಥವಾ ಕಚೇರಿಯಲ್ಲಿನ ಕಾರಣಗಳೇ ಅನ್ನೋದು ಇನ್ನು ಬಹಿರಂಗವಾಗಿಲ್ಲ.

ಇದನ್ನೂ ಓದಿ: ಓಲಾ ಸ್ಕೂಟರ್ ಬಗ್ಗೆ ಅಸಮಾಧಾನ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಮಾಲೀಕ

ಚಲಿಸುತ್ತಿದ್ದ ಎಲೆಕ್ಟ್ರಿಕ್‌ ಬೈಕ್‌ಗೆ ಬೆಂಕಿ: ಅವಘಡದಿಂದ ಪಾರಾದ ಮಾಲಿಕ:
ಎಲೆಕ್ಟ್ರಿಕ್‌ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುವ ಘಟನೆಗಳು ಮುಂದುವರಿದಿವೆ. ತಮಿಳುನಾಡಿನ ಗಡಿ ಭಾಗದಲ್ಲಿ ಶನಿವಾರ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸವಾರ ಸ್ವಲ್ಪದರಲ್ಲೇ ಪಾರಾದ ಘಟನೆ ವರದಿಯಾಗಿದೆ.

ಬೆಂಗಳೂರು ನಗರದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಸೂಪರ್‌ವೈಸರ್‌ ಆಗಿರುವ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ನಿವಾಸಿ ಸತೀಶ್‌ ಕುಮಾರ್‌ ಸ್ವಲ್ಪದರಲ್ಲೇ ಪಾರಾದ ಸವಾರ. ಅವರು ತಮಿಳುನಾಡಿನ ಜೂಜುವಾಡಿಯಲ್ಲಿ ಬರುತ್ತಿದ್ದಾಗ ಏಕಾಏಕಿ ಎಲೆಕ್ಟ್ರಿಕ್‌ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅವರು ಬೈಕ್‌ನಿಂದ ಜಿಗಿದು ತಪ್ಪಿಸಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಆದರೂ ವಾಹನದ ಹಿಂಭಾಗ ಪೂರ್ಣವಾಗಿ ಸುಟ್ಟು ಹೋಗಿದೆ. ಎಲೆಕ್ಟ್ರಿಕ್‌ ಶಾರ್ಚ್‌ ಸಕ್ರ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: Fire at Ather ಬೆಂಗಳೂರು ಮೂಲದ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಕೇಂದ್ರದಲ್ಲಿ ಬೆಂಕಿ!

ಎಲೆಕ್ಟ್ರಿಕ್‌ ಬೈಕ್‌ ಬ್ಯಾಟರಿ ಸ್ಪೋಟ: ಒಬ್ಬನ ಸಾವು:
ಹೊಸ ಎಲೆಕ್ಟ್ರಿಕ್‌ ಬೈಕ್‌ನ ಬ್ಯಾಟರಿ ಚಾಜ್‌ರ್‍ಗೆ ಇಟ್ಟಿದ್ದ ವೇಳೆ ಸ್ಫೋಟಗೊಂಡು ಓರ್ವ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶ ವಿಜಯವಾಡದಲ್ಲಿ ನಡೆದಿದೆ. ಶಿವಕುಮಾರ್‌ (40) ಸ್ಫೋಟಕ್ಕೆ ಬಲಿಯಾಗಿದ್ದು, ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಗಾಯಗಳಾಗಿದೆ. ಇತ್ತೀಚೆಗೆ ತೆಲಂಗಾಣದ ನಿಜಾಮಾಬಾದ್‌ನಲ್ಲೂ ಬೈಕ್‌ನ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವ್ಯಕ್ತಿ ಮೃತಪಟ್ಟಿದ್ದ. ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಕೂಡ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು.

Follow Us:
Download App:
  • android
  • ios