ವಾಹನ ಮಾರಾಟದಲ್ಲಿ ಭರ್ಜರಿ ಏರಿಕೆ: ಎಲೆಕ್ಟ್ರಿಕ್ ವಾಹನಗಳ ದರ ಹೆಚ್ಚಳ
ಕಳೆದ ಮೇ ತಿಂಗಳಲ್ಲಿ ದೇಶದ ಬಹುತೇಕ ವಾಹನ ಮಾರಾಟ ಕಂಪನಿಗಳು ಉತ್ತಮ ಪ್ರಗತಿ ದಾಖಲಿಸಿವೆ. ಈ ಮೂಲಕ ಆರ್ಥಿಕತೆ ಚೇತರಿಕೆ ಹಾದಿಯಲ್ಲೇ ಮುಂದುವರೆದಿರುವ ಮತ್ತಷ್ಟು ಲಕ್ಷಣಗಳು ಗೋಚರವಾಗಿದೆ.
ನವದೆಹಲಿ: ಕಳೆದ ಮೇ ತಿಂಗಳಲ್ಲಿ ದೇಶದ ಬಹುತೇಕ ವಾಹನ ಮಾರಾಟ ಕಂಪನಿಗಳು ಉತ್ತಮ ಪ್ರಗತಿ ದಾಖಲಿಸಿವೆ. ಈ ಮೂಲಕ ಆರ್ಥಿಕತೆ ಚೇತರಿಕೆ ಹಾದಿಯಲ್ಲೇ ಮುಂದುವರೆದಿರುವ ಮತ್ತಷ್ಟು ಲಕ್ಷಣಗಳು ಗೋಚರವಾಗಿದೆ. ಮಾರುತಿ, ಹುಂಡೈ, ಮಹೀಂದ್ರಾ, ಟೊಯೋಟಾ, ಟಾಟಾ ಮೋಟಾರ್ಸ್ ಕಿಯಾ, ಎಂಜಿ ಮೋಟಾರ್ ಮೊದಲಾದವುಗಳು ಮಾರಾಟದಲ್ಲಿ ಉತ್ತಮ ಪ್ರಗತಿ ದಾಖಲಿಸಿವೆ. ಅದರಲ್ಲೂ ವಿಶೇಷವಾಗಿ ಎಸ್‌ಯುವಿಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ.
ಮಾರುತಿ ಸುಜುಕಿ 1.43 ಲಕ್ಷ ವಾಹನ ಮಾರಾಟ ಮಾಡುವ ಮೂಲಕ ಶೇ.15ರಷ್ಟು ಪ್ರಗತಿ ದಾಖಲಿಸಿದೆ. ಹ್ಯುಂಡೈ 48601 (ಶೇ.15), ಟಾಟಾ ಮೋಟಾರ್ಸ್ 45878 (ಶೇ.6), ಮಹೀಂದ್ರಾ 26904 (ಶೇ.23), ಕಿಯಾ 24770 (ಶೇ.3), ಟೋಯೋಟಾ ಕಿರ್ಲೋಸ್ಕರ್ 20410, ಎಂಜಿ ಮೋಟಾರ್ 5006 (ಶೇ.25) ವಾಹನಗಳನ್ನು ಮಾರಾಟ ಮಾಡಿವೆ.
ಕೈಗೆಟುಕುವ ದರ, 212 ಕಿ.ಮೀ ಮೈಲೇಜ್, ಸಿಂಪಲ್ ಒನ್ ಸ್ಕೂಟರ್ ರಿಟೇಲ್ 50 ನಗರಕ್ಕೆ ವಿಸ್ತರಣೆ!
ಟಿವಿಎಸ್ ಕಂಪನಿ ಮೇ ತಿಂಗಳಲ್ಲಿ 3.30 ಲಕ್ಷ ವಾಹನಗಳನ್ನು ಮಾರಾಟ ಮಾಡುವ ಶೇ.9 ರಷ್ಟು ಏರಿಕೆ ದಾಖಲಿಸಿದೆ. ಮತ್ತೊಂದೆಡೆ ರಾಯಲ್ ಎನ್‌ಫೀಲ್ಡ್ ಕಂಪನಿ ಕಳೆದ ತಿಂಗಳು 77461 ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇ.22 ರಷ್ಟು ಪ್ರಗತಿ ಸಾಧಿಸಿದೆ. ಆದರೆ ಹೋಂಡಾದ ಮಾರಾಟದಲ್ಲಿ ಇಳಿಕೆ ದಾಖಲಾಗಿದೆ.
ಎಲೆಕ್ಟ್ರಿಕ್ ವಾಹನಗಳ ದರ ಭರ್ಜರಿ ಏರಿಕೆ
ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜನಕ್ಕೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಹಾಯಧನವನ್ನು ಕಡಿತ ಮಾಡಿದ ಬೆನ್ನಲ್ಲೇ, ಹಲವು ಕಂಪನಿಗಳು ಜೂ.1ರಿಂದಲೇ ಜಾರಿಯಾಗುವಂತೆ ತಮ್ಮ ವಾಹನಗಳ ದರ ಹೆಚ್ಚಳ ಮಾಡಿವೆ. ಓಲಾ, ಟಿವಿಎಸ್, ಆ್ಯಥರ್ ಮೊದಲಾದವುಗಳು ತಮ್ಮ ಕಂಪನಿ ಬೈಕ್‌ಗಳ ಬೆಲೆಯನ್ನು ಭರ್ಜರಿ ಹೆಚ್ಚಳ ಮಾಡಿವೆ. ಓಲಾ ತನ್ನ ಎಸ್1 ಮಾದರಿಯ ಬೈಕ್ ಬೆಲೆಯನ್ನು 1.15 ಲಕ್ಷ ರು.ನಿಂದ 1.30 ಲಕ್ಷ ರು.ಗೆ (ಎಕ್ಸ್ ಶೋರೂಂ ದರ) ಹೆಚ್ಚಿಸಿದೆ. ಇನ್ನು ಎಸ್1 ಪ್ರೋ ದರವನ್ನು 1.25 ಲಕ್ಷ ರು.ನಿಂದ 1.40 ಲಕ್ಷ ರು.ಗೆ ಹೆಚ್ಚಳ ಮಾಡಲಾಗಿದೆ.
ಎಲೆಕ್ಟ್ರಿಕ್ ವಾಹನ ಪ್ರಿಯರಿಗೆ ಶಾಕ್: ಸಬ್ಸಿಡಿ ಕಡಿತ ಎಫೆಕ್ಟ್; ನಾಳೆಯಿಂದ ಸ್ಕೂಟರ್, ಕಾರು, ಬಸ್ ದರ ಹೆಚ್ಚಳ
ಇನ್ನು ಎಂಪೇರ್ ಝೀಲ್ ಇಎಕ್ಸ್ ತನ್ನ ಬೈಕ್‌ಗಳ ಬೆಲೆಯನ್ನು 20900 ರು.ವರೆಗೆ ಹೆಚ್ಚಿಸಿದೆ. ಮ್ಯಾಗ್ನಸ್ ಇಕ್ಸ್ ಮಾದರಿ 21000 ರು.ವರೆಗೆ ಹೆಚ್ಚಳಗೊಂಡಿದೆ. ಎಂಪೇರ್ ಪ್ರೈಮಸ್ ದರ 39100 ರು. ಏರಿಕೆಯಾಗಿದೆ. ಟಿವಿಎಸ್ ಕಂಪನಿ ತನ್ನ ಐಕ್ಯೂಬ್ ಸ್ಕೂಟರ್ ದರವನ್ನು 17000 -21000 ರು.ವರೆಗೂ ಹೆಚ್ಚಿಸಿದೆ. ಹೀಗಾಗಿ ಬೈಕ್‌ಗಳ ದರ 1.66 ಲಕ್ಷ ರು.ನಿಂದ 1.68 ಲಕ್ಷರು.ವರೆಗೆ ತಲುಪಿದೆ. ಮೆಟರ್ ಕಂಪನಿ ಕೂಡಾ ವಿವಿಧ ಮಾದರಿಯ ಬೈಕ್‌ಗಳ ಬೆಲೆ 30000 ರು.ವರೆಗೆ ಹೆಚ್ಚಳಕ್ಕೆ ನಿರ್ಧರಿಸಿದೆ. ಆದರೆ ಗ್ರಾಹಕರಿಗೆ ಜೂ.6ರವರೆಗೆ ಬೆಲೆ ಏರಿಕೆ ಹೊರೆಯಿಂದ ವಿನಾಯ್ತಿ ನೀಡುವುದಾಗಿ ಪ್ರಕಟಿಸಿದೆ.