ಕೇವಲ 11 ಸಾವಿರಕ್ಕೆ ಬುಕ್ ಮಾಡಿ ದಾಟ್ಸನ್ ಗೋ & ಗೋ ಪ್ಲಸ್ ಕಾರು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Oct 2018, 3:42 PM IST
Datsun Launches GO And GO+ car Ahead Of The Festive Season
Highlights

ಭಾರತದ ಕಡಿಮೆ ಬೆಲೆಯ ಕಾರುಗಳನ್ನ ಪರಿಚಯಿಸಿ, ಮಧ್ಯಮ ವರ್ಗದ ಜನರ ಮೆಚ್ಚುಗೆಗೆ ಪಾತ್ರವಾಗಿರೋ ದಾಟ್ಸನ್ ಇಂಡಿಯಾ ಇದೀಗ ನೂತನ ಕಾರನ್ನ ಬಿಡುಗಡೆ ಮಾಡಿದೆ. ನೂತನ  ದಾಟ್ಸನ್ ಗೋ ಹಾಗೂ ದಾಟ್ಸನ್ ಗೋ ಪ್ಲಸ್ ಕಾರಿನ ಬೆಲೆ ಎಷ್ಟು? ಇಲ್ಲಿದೆ.
 

ಬೆಂಗಳೂರು(ಅ.11): ದಾಟ್ಸನ್ ಇಂಡಿಯಾ ಇದೀಗ ನೂತನ ದಾಟನ್ಸ್ ಗೋ ಹಾಗೂ ದಾಟ್ಸನ್ ಗೋ ಪ್ಲಸ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ದಾಟ್ಸನ್ ಗೋ ಕಾರಿನ ಬೆಲೆ 3.29 ಲಕ್ಷ ರೂಪಾಯಿಂದ ಆರಂಭಗೊಳ್ಳಲಿದೆ. ಇನ್ನು ಗೋ ಪ್ಲಸ್ ಕಾರಿನ ಬೆಲೆ 3.83 ಲಕ್ಷ ರೂಪಾಯಿಯಿಂದ ಪ್ರಾರಂಭವಾಗಲಿದೆ.

ಶೀಘ್ರದಲ್ಲೇ ಎರಡು ಕಾರುಗಳು ಬಿಡುಗಡೆಯಾಗಲಿದೆ. ಸದ್ಯ ದಾಟ್ಸನ್ ಗೋ ಹಾಗೂ ಗೋ ಪ್ಲಸ್ ಕಾರಿನ ಬುಕ್ಕಿಂಗ್ ಆರಂಭಗೊಂಡಿದೆ. 11,000 ರೂಪಾಯಿ ಪಾವತಿಸಿ ಡಾಟ್ಸನ್ ಕಾರು ಬುಕ್ ಮಾಡಬುಹುದಾಗಿದೆ. 

ನೂತನ ಕಾರಿನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಫ್ರಂಟ್ ಬಂಪರ್ ಹಾಗೂ ಎಲ್ಇಡಿ ರನ್ನಿಂಗ್ ಲ್ಯಾಂಪ್ಸ್ ಬಳಸಲಾಗಿದೆ. ಜೊತೆಗೆ ಮುಂಭಾಗದ ಗ್ರಿಲ್‌ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಮಿರರ್ ಹಾಗೂ ಇಂಡಿಕೇಟರ್ ವಿನ್ಯಾಸ ಬದಲಾಯಿಸಲಾಗಿದೆ. 

14 ಇಂಚಿನ ವ್ಹೀಲ್ಸ್ ಹೊಂದಿದ್ದರೆ, 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಇಂಜಿನ್ ಹೊಂದಿದೆ. 1198 ಸಿಸಿ ಇಂಜಿನ್ ಹೊಂದಿರೋ ದಾಟ್ಸನ್ ಗೋ ಕಾರು 68 ಪಿಎಸ್ ಗರಿಷ್ಠ  ಪವರ್ ಹಾಗೂ 104 ಟಾರ್ಕ್ ಉತ್ಪಾದಿಸಲಿದೆ.

loader