ನವದೆಹಲಿ(ಏ.02): ವಿಶ್ವ ಆಟೋಮೊಬೈಲ್ ಮಾರುಕಟ್ಟೆ 2018-19ರಲ್ಲಿ ನಿರೀಕ್ಷಿತ ಮಾರಾಟ ಕಂಡಿಲ್ಲ. ಇನ್ನು ನಿಯಮ ಉಲ್ಲಂಘನೆ ಹಾಗೂ ಇತರ ತಪ್ಪುಗಳಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಶೀಘ್ರದಲ್ಲೇ ವಾಹನ ಕ್ಷೇತ್ರದ 37000 ಉದ್ಯೋಗ ಕಡಿತಗೊಳ್ಳಲಿದೆ. 

ಇದನ್ನೂ ಓದಿ: ಕಾರಿಗೆ 4.9 ಲಕ್ಷ ರೂಪಾಯಿ ದಂಡ- ತಲೆ ತಿರುಗಿ ಬಿದ್ದ ಮಾಲೀಕ!

ಭಾರತ, ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿನ ಆಟೋಮೊಬೈಲ್ ಕ್ಷೇತ್ರಕ್ಕೆ ಉದ್ಯೋಗ ಕಡಿತ ಮತ್ತಷ್ಟು ಹಿನ್ನಡೆಯಾಗಲಿದೆ. ಜನರಲ್ ಮೋಟಾರ್ಸ್, ಫೋರ್ಡ್ ಹಾಗೂ ವೋಕ್ಸ್‌ವ್ಯಾಗನ್ ಸಂಸ್ಥೆಗಳು ಉದ್ಯೋಗ ಕಡಿತ ಮಾಡಲಿದೆ. ಈಗಾಲೇ ಜನರಲ್ ಮೋಟರಾಸ್ 4000 ಉದ್ಯೋಗ ಕಡಿತ ಮಾಡಿದೆ. 2001ರ ಬಳಿಕ ಗರಿಷ್ಠ ಉದ್ಯೋಗ ಕಡಿತ ಬಿಸಿ ಆಟೋಕ್ಷೇತ್ರಕ್ಕೆ ಬಂದೊದಗಿದೆ.

ಇದನ್ನೂ ಓದಿ: ನಾವಿಬ್ಬರು-ನಮಗಿಬ್ಬರು;ಕಾರಿಗೂ ಬರಲಿದೆ ಫ್ಯಾಮಿಲಿ ಪ್ಲಾನಿಂಗ್!

2018ರಲ್ಲಿ ವೋಕ್ಸ್‌ವ್ಯಾಗನ್ ಸಂಸ್ಥೆ ಎಮಿಶನ್ ಹಗರಣದಲ್ಲಿ ಸಿಲುಕಿಕೊಂಡು ಸಂಕಷ್ಟ ಎದುರಿಸಿತು. ಭಾರಿ ಮೊತ್ತವನ್ನು ದಂಡ ಪಾವತಿಸಬೇಕಾದ ಪರಿಸ್ಥಿತಿಯಲ್ಲಿ ವೋಕ್ಸ್‌ವ್ಯಾಗನ್ ಉದ್ಯೋಗ ಕಡಿತಕ್ಕೆ ಮುಂದಾಯಿತು. ಹೊಂಡಾ, ಹ್ಯುಂಡೈ, ಫೋರ್ಡ್, ಟೆಸ್ಲಾ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಆಟೋಮೊಬೈಲ್ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಆದರೆ  ಭಾರತದ ಟಾಟಾ ಮಾಲೀಕತ್ವದ ಬ್ರೀಟಿಷ್ ಕಂಪನಿ ಜಾಗ್ವಾರ್ ಲ್ಯಾಂಡ್ ರೋವರ್ ಹೊರತು ಪಡಿಸಿದರೆ ಭಾರತದ ಯಾವುದೇ ಮೋಟಾರ್ಸ್ ಕಂಪನಿ ಉದ್ಯೋಗ ಕಡಿತ ಮುಂದಾಗಿಲ್ಲ.