ಭಾರತದ ಮೊಬೈಲ್ ಇಂಡಸ್ಟ್ರಿ ಮುಳುಗಿಸಿದ ಚೀನಾ ಮುಂದಿನ ಟಾರ್ಗೆಟ್ ಆಟೋಮೊಬೈಲ್!

ಭಾರತದಲ್ಲಿ ಚೀನಾ ವಸ್ತುಗಳನ್ನು ಬ್ಯಾನ್ ಮಾಡಬೇಕು, ಬಹಿಷ್ಕರಿಸಬೇಕು ಅನ್ನೋ ಕೂಗು ಇಂದು ನಿನ್ನೆಯದಲ್ಲ.  ಚೀನಾ ಸಂಪೂರ್ಣವಾಗಿ ಭಾರತೀಯತೆಯನ್ನು ನಾಶ ಮಾಡುತ್ತಿದೆ ಅನ್ನೋ ಸ್ಫೋಟಕ ವರದಿ ಬಹಿರಂಗವಾಗಿದೆ. ಈಗಾಗಲೇ ಭಾರತದ ಮೊಬೈಲ್ ಫೋನ್ ಉದ್ಯಮ ಮುಳುಗಿಸಿದ ಚೀನಾ ಮುಂದಿನ ಟಾರ್ಗೆಟ್ ಭಾರತದ ವಾಹನ ತಯಾರಿಕಾ ಕಂಪನಿ. ಈ ಕುರಿತು ಮಹತ್ವದ ಮಾಹಿತಿ ಇಲ್ಲಿದೆ.

China next target Indian Automobile sector after destroying smart phone industry

ನವದೆಹಲಿ(ಜ.26): ಚೀನಾ ನಡುವೆ ಗಡಿ ವಿವಾದವಿದ್ದರೂ ವ್ಯವಹಾರದಲ್ಲಿ ಈ ಎರಡು ದೇಶಗಳು ಜೊತೆಯಾಗಿ ಹೆಜ್ಜೆ ಇಡುತ್ತಿದೆ. ಚೀನಾ ದೇಶದ ನೀತಿಗಳು, ಕಾಲು ಕೆರೆದು ಭಾರತದ ಮೇಲೆ ಸವಾರಿ ಮಾಡೋ ಮನಸ್ಸಿಗೆ ಮೊದಲಿನಿಂದಲೂ ಭಾರತದ ವಿರೋಧವಿದೆ. ಇತ್ತೀಚೆಗೆ ಹಲವು ಬಾರಿ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಈ ಮಾತಿಗೆ ಪುಷ್ಠಿ ನೀಡುವಂತ ಅಧ್ಯಯನದ ಮಾಹಿತಿ ಬಹಿರಂಗವಾಗಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಹೊಸ ಕಾರು; ಭಾರತಕ್ಕೆ ಬರುತ್ತಿದೆ ಚೀನಾ ಕಾರು!

ಚೀನಾ ಆರ್ಥಿಕತೆ ಇತರ ದೇಶಕ್ಕಿಂತ ವೇಗವಾಗಿ ಬೆಳೆಯುತ್ತಿದೆ. ಸದ್ಯ 14.14 ಟ್ರಿಲಿಯನ್ ಡಾಲರ್ ಎಕಾನಮಿ ಹೊಂದಿರುವ ಚೀನಾ 2024ರ ವೇಳೆಗೆ 20 ಟ್ರಿಲಿಯನ್ ಡಾಲರ್ ಎಕಾನಮಿ ಗುರಿ ಇಟ್ಟುಕೊಂಡಿದೆ. ಚೀನಾದ ಆರ್ಥಿಕತೆ ಬೆಳವಣಿಗೆಯಲ್ಲಿ ಭಾರತೀಯರ ಕೊಡುಗೆ ಅಪಾರವಾಗಿದೆ.  ಭಾರತೀಯರು ಖರೀದಿಸುವ ಬಹುತೇಕ ವಸ್ತುಗಳು ಮೇಡ್ ಇನ್ ಚೀನಾ ಬ್ರ್ಯಾಂಡ್. 

ಇದನ್ನೂ ಓದಿ: ಶುರುವಾಯ್ತು ಪೈಪೋಟಿ; ಭಾರತಕ್ಕೆ ಬರುತ್ತಿದೆ ಚೀನಾದ ಹವಲ್ ಕಾರು!

ಆರಂಭದಲ್ಲಿ ನಿಧಾನವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ಚೀನಾ ಮೊಬೈಲ್ ಇದೀಗ ಸಂಪೂರ್ಣವಾಗಿ ಆವರಿಸಿಕೊಂಡಿದೆ. 2019ರಲ್ಲಿ ಚೀನಾದ ಮೊಬೈಲ್ ಕಂಪನಿಗಳು ಶೇಕಡಾ 72ರಷ್ಟು ಭಾರತದ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಚೀನಾದ ಒಪ್ಪೊ, ರಿಯಲ್‌ಮಿ, ಒನ್ ಪ್ಲಸ್ ಪೇರೆಂಟ್ ಕಂಪನಿ ಬಿಬಿಕೆ ಗ್ರೂಪ್ 37% ಭಾರತದ ಮೊಬೈಲ್ ಮಾರುಕಟ್ಟೆ ಆವರಿಸಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿ ಶೇಕಡಾ 28  ರಷ್ಟು ಶಿಓಮಿ, ರೆಡ್‌ಮಿ ಬ್ರ್ಯಾಂಡ್  ತುಂಬಿಕೊಂಡಿದೆ.

ಇದನ್ನೂ ಓದಿ ಭಾರತಕ್ಕೆ ಬರುತ್ತಿದೆ ಕಡಿಮೆ ಬೆಲೆಯ ಚೀನಾ ಎಲೆಕ್ಟ್ರಿಕ್ ಕಾರು; 350KM ಮೈಲೇಜ್!

ಶಿಓಮಿ ಭಾರತದಲ್ಲಿ 7 ಫೋನ್ ತಯಾರಿಕಾ ಘಟಕ ಹೊಂದಿದೆ. ಕಳೆದ ವರ್ಷ 3,500 ಕೋಟಿ ರೂಪಾಯಿ ಹೆಚ್ಚುವರಿ ಬಂಡವಾಳ ಹಾಕಿದೆ. ಇನ್ನು ವಿವೋ ಕಂಪನಿ ಭಾರತದಲ್ಲಿ 7,500 ಕೋಟಿ ರೂಪಾಯಿ ಬಂಡವಾಳ ಹೂಡುತ್ತಿದೆ. ಇನ್ನು ಟಿಸಿಎಲ್ ಕಂಪನಿ 2,200 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. 

ಚೀನಾದಲ್ಲಿ ಲಭ್ಯವಿರುವ ತಂತ್ರಜ್ಞಾನ, ಕಚ್ಚಾ ವಸ್ತುಗಳು, ಮ್ಯಾನ್‌ಪವರ್‌ನಿಂದ ಚೀನಾ ಮೊಬೈಲ್ ಕಡಿಮೆ ಬೆಲೆಗೆ ಭಾರತದಲ್ಲಿ ಹಾಟ್ ಕೇಕ್ ರೀತಿಯಲ್ಲಿ ಮಾರಾಟವಾಗುತ್ತಿದೆ. ಇದರಿಂದ ಭಾರತದ ಮೊಬೈಲ್ ಕಂಪನಿಗಳು ಹೇಳ ಹೆಸರಿಲ್ಲದಂತೆ ಮುಚ್ಚಿಹೋಗಿವೆ. ಕರ್ನಾಟಕದ ಕಾರ್ಬನ್ ಮೊಬೈಲ್, ಸೆಲ್ಕಾನ್, ಐಬಾಲ್, ಮೈಕ್ರೋಮ್ಯಾಕ್ಸ್ ಸೇರಿದಂತೆ ಹಲವು ಕಂಪನಿಗಳು ಸ್ಥಗಿತಗೊಂಡಿವೆ. 

ಭಾರತೀಯ ಮೊಬೈಲ್ ಇಂಡಸ್ಟ್ರಿ ಮುಳುಗಿಸಿದ ಚೀನಾ ಇದೀಗ ಭಾರತದ ವಾಹನ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಭಾರತದ ಟಾಟಾ ಮೋಟಾರ್ಸ್, ಮಹೀಂದ್ರ, ಅಶೋಕ್ ಲೈಲಾಂಡ್ ಸೇರಿದಂತೆ ಹಲವು ಕಂಪನಿಗಳು ಭಾರತೀಯ ಅಟೋಮೊಬೈಲ್ ಕ್ಷೇತ್ರದಲ್ಲಿ ಪ್ರಮುಖ ಕಂಪನಿಗಳವಾಗಿದೆ. ಇದರ ಜೊತೆಗೆ ಜಪಾನ್ ಕಂಪನಿಯಾದ ಸುಜುಕಿ, ಟೊಯೊಟಾ, ಸೌತ್ ಕೊರಿಯಾದ ಹ್ಯುಂಡೈ ಸೇರಿದಂತ ಹಲವು ವಿದೇಶಿ ಕಂಪನಿಗಳು ಭಾರತದಲ್ಲಿ ವಾಹನ  ಮಾರುಕಟ್ಟೆ ಆಕ್ರಮಿಸಿಕೊಂಡಿದೆ.

ಇದೀಗ ಚೀನಾದ ಎಂಜಿ ಮೋಟಾರ್ಸ್ ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಎಂಜಿ ಹೆಕ್ಟರ್ ಬಳಿಕ ಎಂಜಿ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಚೀನಾದ ಗ್ರೇಟ್ ವಾಲ್ ಮೋಟಾರ್ಸ್, ಹವಲ್ ಬ್ರ್ಯಾಂಡ್ ಸೇರಿದಂತೆ ಹಲವು ಆಟೋಮೊಬೈಲ್ ಕಂಪನಿಗಳು ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. ಇದೀಗ ಭಾರತದಲ್ಲಿ ಆಟೋಮೊಬೈಲ್ ಕ್ರಾಂತಿ ಮಾಡಲು ಚೀನಾ ಕಂಪನಿಗಳು ಮುಂದಾಗಿವೆ.

ಎಲೆಕ್ಟ್ರಾನಿಕ್, ಆಟೋಮೊಬೈಲ್ ಮಾತ್ರವಲ್ಲ, ಬಹುತೇಕ ಎಲ್ಲಾ ವಸ್ತುಗಳು ಈಗ ಚೀನಾದ್ದಾಗಿದೆ. ಮಕ್ಕಳ ಆಟಿಕೆಗಳು, ಬಾಲ್, ಬ್ಯಾಟ್, ಸ್ಪೋರ್ಟ್ ಪರಿಕರಗಳು, ಬಟ್ಟೆ, ಚಪ್ಪಲ್ ಸೇರದಂತೆ ಎಲ್ಲಾ ವಸ್ತುಗಳು ಚೀನಾಮಯವಾಗಿದೆ. ಇಷ್ಟೇ ಯಾಕೆ ಭಾರತೀಯ ಸಂಪ್ರದಾಯದ ವಸ್ತುಗಳು ಕೂಡ ಇದೀಗ ಚೀನಾದಿಂದ ಬರುತ್ತಿದೆ. ಇದರಿಂದ ಸ್ಥಳೀಯ ಉತ್ಪಾದನೆ,  ವ್ಯವಹಾರ ನಷ್ಟದಲ್ಲಿದೆ. ಇದು ಭಾರತದ ಆರ್ಥಿಕತೆಗೆ ಅತೀ ದೊಡ್ಡ ಹೊಡೆತ ನೀಡಲಿದೆ.

Latest Videos
Follow Us:
Download App:
  • android
  • ios