Asianet Suvarna News Asianet Suvarna News

ಮಳೆ ತಂಪಿನಲ್ಲಿ ಬೆಚ್ಚಗೆ ಇಮ್ರಾನ್ ಹಶ್ಮಿ ಮನೆ ಸೇರಿದ ಹೊಸ ಅತಿಥಿ!

ಮುಂಬೈ ನಗರ ಸತತ ಮಳೆಯಿಂದ ತಂಪಾಗಿದೆ. ಹೊರಗೆ ಕಾಲಿಟ್ಟರೆ ಚಳಿ ವಾತವಾರಣವಿದೆ.  ಇದರ ನಡುವೆ  ಕಿಸ್ಸಿಂಗ್ ಕಿಂಗ್ ಎಂದೆ ಹೆಸರುವಾಸಿಯಾಗಿರುವ ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿ ಮನಗೆ ಬೆಚ್ಚೆಗೆ ಹೊಸ ಅತಿಥಿಯ ಆಗಮನವಾಗಿದೆ. ಹಶ್ಮಿ ಮನೆ ಸೇರಿದ ಹೊಸ ಅತಿಥಿ ಯಾರು?  ಇಲ್ಲಿದೆ ವಿವರ.

Bollywood star emraan hashmi buys new Lamborghini huracan car
Author
Bengaluru, First Published Jul 11, 2019, 5:24 PM IST
  • Facebook
  • Twitter
  • Whatsapp

ಮುಂಬೈ(ಜು.11): ರೊಮ್ಯಾಟಿಂಕ್ ಚಿತ್ರಗಳ ಮೂಲಕ ಹೊಸ ಸಂಚಲನ ಸೃಷ್ಟಿಸಿರುವ ಬಾಲಿವುಡ್ ಸ್ಟಾರ್ ಇಮ್ರಾನ್ ಹಶ್ಮಿ ಇದೀಗ ನೆಟ್‌ಫ್ಲಿಕ್ಸ್ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಕಿಸ್ಸಿಂಗ್ ಬಾಯ್ ಎಂದೇ ಹೆಸರಾಗಿರುವ ಇಮ್ರಾನ್ ಹಶ್ಮಿ ಮಳೆಯಿಂದ ತಂಪಾಗಿದ್ದ ಮುಂಬೈ ಬಿಸಿ ಏರಿಸಿದ್ದಾರೆ. ಕಾರಣ ಸದ್ದಿಲ್ಲದೆ ಇಮ್ರಾನ್ ಹಶ್ಮಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

ಇದನ್ನೂ ಓದಿ: ಡಿ ಬಾಸ್ ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನ್ ಉರುಸ್ ಕಾರಿನ ವಿಶೇಷತೆ ಇಲ್ಲಿದೆ!

ಹಶ್ಮಿ ಎಂದಾಕ್ಷಣ, ಎಲ್ಲರ ಚಿತ್ತ ಮತ್ತೊಂದು ಕಿಸ್‍‌ನತ್ತ ಹೊರಳಿದರೆ ತಪ್ಪೇನಿಲ್ಲ. ಆದರೆ ಈ ಬಾರಿ ಇಮ್ರಾನ್ ಹಶ್ಮಿ ಮನೆ ಸೇರಿದ್ದು ಹೊಚ್ಚ ಹೊಸ ಲ್ಯಾಂಬೋರ್ಗಿನಿ ಹುರಕಾನ್ ಕಾರು. ಇಮ್ರಾನ್ ಹಳದಿ ಬಣ್ಣದ ಕಾರು ಖರೀದಿಸಿದ್ದಾರೆ. ಹಶ್ಮಿ ಖರೀದಿಸಿದ ನೂತನ ಲ್ಯಾಂಬೋರ್ಗಿನ ಹುರಾಕಾನ್ ಕಾರಿನ ಆರಂಭಿಕ  ಬೆಲೆ 3.43 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) . ಈ ದುಬಾರಿ ಕಾರಿನ ಮೈಲೇಜ್ ಕೇವಲ 11 ಕಿ.ಮೀ (ಪ್ರತಿ ಲೀಟರ್ ಪೆಟ್ರೋಲ್). ಇಷ್ಟೇ ಅಲ್ಲ ಸೀಟ್ ಸಾಮರ್ಥ್ಯ  2 ಮಾತ್ರ.

Bollywood star emraan hashmi buys new Lamborghini huracan car

ಇದನ್ನೂ ಓದಿ: ಖರೀದಿಸಿದ 2 ನಿಮಿಷದಲ್ಲಿ ಕಾಪೌಂಡ್‌ಗೆ ಡಿಕ್ಕಿ- 2.2 ಕೋಟಿ ಲ್ಯಾಂಬೋರ್ಗಿನಿ ಪುಡಿ ಪುಡಿ!

ಲ್ಯಾಂಬೋರ್ಗನಿ ಹುರಕಾನ್ ಎಂಜಿನ್:
ಲ್ಯಾಂಬೋರ್ಗಿನಿ ಹುರಕಾನ್ ಕಾರು 5204cc ಎಂಜಿನ್ ಹೊಂದಿದೆ. 640 bhp(@8000rpm) ಪವರ್ ಹಾಗೂ 600Nm (@6500rpm) ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 7  ಸ್ಪೀಡ್ ಅಟೋಮ್ಯಾಟಿಕ್ ಡ್ಯುಯೆಲ್ ಕ್ಲಚ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ. ಈ ಕಾರಿನ ಗರಿಷ್ಠ ವೇಗ 325 ಕಿ.ಮಿ ಪ್ರತಿ ಗಂಟೆಗೆ. ಇಂಧನ ಸಾಮರ್ಥ್ಯ 90 ಲೀಟರ್.

Bollywood star emraan hashmi buys new Lamborghini huracan car

ಲ್ಯಾಂಬೋರ್ಗನಿ ಹುರಕಾನ್ ಸುರಕ್ಷತೆ:
ಲ್ಯಾಂಬೋರ್ಗನಿ ಹುರಕಾನ್ ಗರಿಷ್ಠ ಸುರಕ್ಷತೆ ನೀಡಲಿದೆ. ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಬ್ರೇಕ್ ಅಸಿಸ್ಟ್, ಸೆಂಟ್ರಲ್ ಲಾಕಿಂಗ್, ಪವರ್ ಡೂರ್ ಲಾಕ್, ಆ್ಯಂಟಿ ಥೆಫ್ಟ್ ಅಲರಾಂ, ಡ್ರೈವರ್ ಏರ್‌ಬ್ಯಾಗ್, ಪ್ಯಾಸೆಂಜರ್ ಏರ್‌ಬ್ಯಾಗ್, ಸೈಡ್ ಏರ್‌ಬ್ಯಾಗ್ ಫ್ರಂಟ್ ಹಾಗೂ ರೇರ್, ಸೀಟ್ ಬೆಲ್ಟ್ ವಾರ್ನಿಂಗ್, ಸೈಡ್ ಇಂಪಾಕ್ಟ್ ಬೀಮ್, ಟ್ರಾಕ್ಷನ್ ಕಂಟ್ರೋಲ್, ಟೈಯರ್ ಪ್ರೆಶರ್ ಮೊನಿಟರ್, ಇಂಜಿನ್ ಚೆಕ್ ವಾರ್ನಿಂಗ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಶನ್(EBD), ರೇರ್ ಕ್ಯಾಮರ, ಆ್ಯಂಟಿ ಥೆಫ್ಟ್ ಡಿವೈಸ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಹೊಂದಿದೆ. 

Bollywood star emraan hashmi buys new Lamborghini huracan car

Follow Us:
Download App:
  • android
  • ios