Asianet Suvarna News Asianet Suvarna News

ಭಾರತದಲ್ಲಿ BMW ಕಾರು ಖರೀದಿ ಈಗ ಇನ್ನೂ ಸುಲಭ!

BMW ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ಈಗ ಇನ್ನೂ ಸುಲಭ.  BMW ನೂತನ ಯೋಜನೆಯಿಂದ ಲಕ್ಸುರಿ ಕಾರು ಖರೀದಿ ಸುಲಭವಾಗಿದೆ. ಅಷ್ಟಕ್ಕೂ  BMW ನೂತನ ಯೋಜನೆ ಏನು? ಇಲ್ಲಿದೆ ಉತ್ತರ.

BMW India Kick Starts Online Sales Of Its Cars
Author
Bengaluru, First Published Nov 14, 2018, 3:06 PM IST

ಮುಂಬೈ(ನ.14): ಲಕ್ಸುರಿ ಕಾರು ಎಂದೇ ಗುರುತಿಸಿಕೊಂಡಿರುವ BMW ಖರೀದಿ ಈಗ ಇನ್ನೂ ಸುಲಭವಾಗಿದೆ. ಈಗ BMW ಕಾರು ಖರೀದಿಯನ್ನ ಮನೆಯಲ್ಲೇ ಕುಳಿತು ಮಾಡಬಹುದು. ಹೌದು,  BMW ಸಂಸ್ಥೆ ಇದೀಗ ಆನ್‌ಲೈನ್ ಮಾರಾಟ ಆರಂಭಿಸಿದೆ.

ಡಿಜಿಟಲ್ ಇಂಡಿಯಾ ಮೂಲಕ ಭಾರತದಲ್ಲಿ ಹೊಸ ಕ್ರಾಂತಿಯಾಗಿದೆ. ಈಗ ಯಾವುದೇ ವಸ್ತು, ಆಹಾರ, ತರಕಾರಿ ಸೇರಿದಂತೆ ಎಲ್ಲವೂ ಆನ್ ಲೈನ್ ಮೂಲಕವೇ ವ್ಯವಹಾರ. ಹೀಗಾಗಿ  BMW ಕೂಡ ಆನ್ ಲೈನ್ ಕಾರು ಮಾರಾಟ ಆರಂಭಿಸಿದೆ.

BMW India Kick Starts Online Sales Of Its Cars

ಡಿಜಿಟಲೀಕರಣದಿಂದ ಇದೀಗ  BMW ಕೂಡ ಆನ್‌ಲೈನ್ ಮಾರಾಟ ಆರಂಭಿಸುತ್ತಿದೆ. ಗ್ರಾಹಕರು ಆನ್ ಲೈನ್ ಮೂಲಕವೇ  BMW ಕಾರಿನ ಕುರಿತು ಎಲ್ಲಾ ವಿವರಗಳನ್ನ ಪಡೆಯಬಹುದು. ಇನ್ನು ಕಾರಿನ ಮೊತ್ತ, ಡೌನ್ ಪೇಮೆಂಟ್, ಲೋನ್ ಮೊತ್ತ ಸೇರಿದಂತೆ ಎಲ್ಲವೂ ಕೂಡ ಆನ್‌ಲೈನ್ ಮೂಲಕ ಲಭ್ಯವಾಗಲಿದೆ. ಇಷ್ಟೇ ಅಲ್ಲ ಇದೇ ವೇಳೆ ಗ್ರಾಹಕರಿಗೆ ಎದುರಾಗೋ ಯಾವುದೇ ಪ್ರಶ್ನೆಗಳು, ಅನುಮಾನಗಳಿಗೆ ಆನ್‌ಲೈನ್ ಮೂಲಕವೇ ಉತ್ತರ ಸಿಗಲಿದೆ ಎಂದು  BMW ಇಂಡಿಯಾ ಗ್ರೂಪ್ ಮುಖ್ಯಸ್ಥ ವಿಕ್ರಮ್ ಪವಾಹ್ ಹೇಳಿದ್ದಾರೆ.

BMW India Kick Starts Online Sales Of Its Cars

ಆನ್‌ಲೈನ್ ಮೂಲಕ ಕಾರು ಖರೀದಿಸಲು ಬಯಸುವ ಗ್ರಾಹಕರು ಶೋ ರೂಂಗೆ ಬರೋ ಆಗತ್ಯವಿಲ್ಲ. ಟೆಸ್ಟ್ ಡ್ರೈವ್ ಕೂಡ ಅನ್‌ಲೈನ್ ಮೂಲಕವೇ ಬುಕ್ ಮಾಡಬಹುದು. ಇನ್ನು ಎಲ್ಲಾ ದಾಖಲೆಗಳನ್ನ ಆನ್‌ಲೈನ್ ಮೂಲಕವೇ ರವಾನಿಸಿ, ಕಾರು ಖರೀದಿಸಬಹುದು ಎಂದು ವಿಕ್ರಮ್ ಹೇಳಿದ್ದಾರೆ.

BMW India Kick Starts Online Sales Of Its Cars

ಆನ್‌ಲೈನ್ ಮೂಲಕ  ಕಾರು ಮಾರಾಟ ಆರಂಭಿಸುತ್ತಿರುವುದು ಇದೇ ಮೊದಲಲ್ಲ. ಟಾಟಾ ಮೋಟಾರ್ಸ್ ಒಡೆತನದ ಜಾಗ್ವಾರ್ ಹಾಗೂ ಲ್ಯಾಂಡ್ ರೋವರ್ ಈಗಾಗಲೇ ಆನ್ ಲೈನ್ ಮಾರಾಟ ಆರಂಭಿಸಿದೆ. ಇನ್ನು ಹ್ಯುಂಡೈ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ಸ್ಯಾಂಟ್ರೋ ಕಾರು ಕೂಡ ಆನ್ ಲೈನ್ ಮಾರಾಟ ಆರಂಭಿಸಿತ್ತು. 

Follow Us:
Download App:
  • android
  • ios