ಕೊರೋನಾ ವೈರಸ್‌, ಲಾಕ್‌ಡೌನ್‌ನಿಂದ ಆತಂಕಗೊಂಡಿರುವ ಭಾರತದ ಆಟೋಮೊಬೈಲ್ ಇಂಡಸ್ಟ್ರಿ  BMW ಭಾರತದ ಸಿಇಒ ನಿಧನ ವಾರ್ತೆಯಿಂದ ಬೆಚ್ಚಿ ಬಿದ್ದಿದೆ. 46 ವರ್ಷದ ರುದ್ರತೇಜ್ ಸಿಂಗ್ ಆರೋಗ್ಯವಾಗಿದ್ದರು. ಕಳೆದ ವರ್ಷ  BMW ಕಾರು ಕಂಪನಿಯ ಭಾರತದ ಸಿಇಒ ಆಗಿ ಜವಾಬ್ದಾರಿ ವಹಿಸಿಕೊಂಡ ರುದ್ರತೇಜ್ ಸಾವು ಆಟೋ ಇಂಡಸ್ಟ್ರಿಗೂ ದೊಡ್ಡ ಆಘಾತ ನೀಡಿದೆ. 

ನವದೆಹಲಿ(ಏ.20): ವಯಸ್ಸು ಕೇವಲ 46, ಯುವಕರನ್ನೇ ನಾಚಿಸುವ ಉತ್ಸಾಹ. ಕಳೆದ ವರ್ಷವಷ್ಟೇ BMW ಕಾರು ಕಂಪನಿಯ ಭಾರತದ ಸಿಇಒ ಆಗಿ ಜವಾಬ್ದಾರಿ ವಹಿಸಿಕೊಂಡ ಚತುರ. ಆಟೋಮೊಬೈಲ್ ಇಂಡಸ್ಟ್ರಿ ಮಾರಾಟ ಕುಸಿತದಲ್ಲೂ BMWಗೆ ಹೆಚ್ಚಿನ ಹೊಡೆತ ಬೀಳದಂತೆ ನೋಡಿಕೊಂಡ ನಿಪುಣ, BMW ಕಾರು ಕಂಪನಿಯ ಭಾರತದ ಸಿಇಒ ರುದ್ರತೇಜ್ ಸಿಂಗ್ ಇಂದು(ಏ.20) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

3 ತಿಂಗಳಲ್ಲಿ ಎಲ್ಲಾ ಕಾರು ಬುಕ್; ದಾಖಲೆ ಬರೆದ BMW x7

ರುದ್ರತೇಜ್ ಸಿಂಗ್ ಅವರಿಗೆ ಯಾವುದೇ ಅನಾರೋಗ್ಯ ಕಾಣಿಸಿಕೊಂಡಿಲ್ಲ. ದೀಢಿರ್ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಹೃದಯಾಘಾತದ ಪ್ರಮಾಣ ತೀವ್ರವಾಗಿತ್ತು. ಹೀಗಾಗಿ ರುದ್ರತೇತ್ ಅಸುನೀಗಿದ್ದಾರೆ ಎಂದು BMW ಕಂಪನಿ ಹೇಳಿದೆ. ರುದ್ರತೇಜ್ ಕುಟುಂಬಕ್ಕೆ ಆಪ್ತರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಕಂಪನಿ ಹೇಳಿದೆ.

ಕಾರಿಗಿಂತಲೂ ಶಕ್ತಿಶಾಲಿ ಎಂಜಿನ್, BMW R 18 ಬೈಕ್ ಅನಾವರಣ!.

ಹಲವು ಸವಾಲುಗಳ ನಡುವೆ ರುದ್ರತೇಜ್ ಸಿಂಗ್ ಭಾರತದ BMW ಕಂಪನಿಯ ಸಿಇಓ ಆಗಿ ಅಧಿಕಾರ ಸ್ವೀಕರಿಸಿದ್ದರು. ಚಾಣಾಕ್ಷ ನಡೆಯಿಂದ ಭಾರತದಲ್ಲಿ BMW ಉತ್ತಮ ನಿರ್ವಹಣೆ ನೀಡಲು ಸಾಧ್ಯವಾಗಿತ್ತು. ಇದೀಗ ರುದ್ರತೇಜ್ ನಿಧನ ತುಂಬಲಾರದ ನಷ್ಟವಾಗಿದೆ ಎಂದು BMW ಹೇಳಿದೆ.

ನ್ಯೂಜನರೇಶನ್ BMW X5 ಕಾರು ಬಿಡುಗಡೆಗೆ!.

2019ರ ಆಗಸ್ಟ್ ತಿಂಗಳಲ್ಲಿ ರುದ್ರತೇಜ್ ಸಿಂಗ್ ಭಾರತದ BMW ಕಂಪನಿ ಸೇರಿಕೊಂಡರು. ಇದಕ್ಕೂ ಮೊದಲು ರಾಯಲ್‌ ಎನ್‌ಫೀಲ್ಡ್ ಕಂಪನಿಯ ಗ್ಲೋಬಲ್ ಪ್ಲಸಿಡೆಂಟ್ ಆಗಿ ಕಾರ್ಯನಿರ್ವಹಿಸಿದ್ದರು. ಯನಿಲಿವರ್ ಇಂಡಿಯಾ ಕಂಪನಿಯಲ್ಲಿ 16 ವರ್ಷ ಸೇವೆ ಸಲ್ಲಿಸಿದ್ದಾರೆ. ಒಟ್ಟು 25 ವರ್ಷ ಅನುಭವ ಹೊಂದಿದ್ದ ರುದ್ರತೇಜ್ ಸಿಂಗ್ ಅವರನ್ನು 2019ರಲ್ಲಿ BMW ಇಂಡಿಯಾ ಆತ್ಮೀಯವಾಗಿ ಸ್ವಾಗತಿಸಿತ್ತು.