BMW ಎರಡು ವಿಶಿಷ್ಟ ಐಷರಾಮಿ ಕಾರುಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಿಎಲ್‌ಎಸ್ ಸ್ಪೋರ್ಟ್ಸ್ ಹಾಗೂ ಎಂ2 ಕಾಂಪಿಟಿಷನ್ ಕಾರುಗಳನ್ನ ಲಾಂಚ್ ಮಾಡಿದೆ. ಈ ಕಾರಿನ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ ಹೆಚ್ಚಿನ ವಿವರ.
ಬೆಂಗಳೂರು(ನ.21): ಐಶಾರಾಮಿ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಝ್ ಇದೀಗ ಮೊಟ್ಟಮೊದಲ ಬಾರಿಗೆ ನಾಲ್ಕು ಬಾಗಿಲುಳ್ಳ ಸಿಎಲ್‌ಎಸ್ ಸ್ಪೋರ್ಟ್ಸ್ ಕಾರನ್ನು ಮಾರುಕಟ್ಟೆಗೆ ತಂದಿದೆ. 6.4 ನಾಲ್ಕು ಸೆಕೆಂಡ್‌ನಲ್ಲಿ 100 ಕಿ.ಮಿ ವೇಗದ ಸಾಮರ್ಥ್ಯ ಪಡೆದುಕೊಳ್ಳುವ ಈ ಕಾರು ನಾಲ್ಕು ಸಿಲಿಂಡರ್‌ಗಳ ಶಕ್ತಿಶಾಲಿ ಡೀಸೆಲ್ ಇಂಜಿನ್ ಹೊಂದಿದ್ದು, ಗಂಟೆಗೆ ಗರಿಷ್ಠ 250 ಕಿ.ಮಿ ವೇಗದಲ್ಲಿ ಸಾಗಲಿದೆ. ಸಂಗೀತ ಪ್ರಿಯರಿಗಾಗಿ 12.3 ಇಂಚಿನ ಮೀಡಿಯಾ ಡಿಸ್‌ಪ್ಲೇ ಇರುವ ಕಾರು ಗ್ರೇ, ರೂಬಿ ಬ್ಲಾಕ್, ಸೆಲೆನೈಟ್ ಗ್ರೇ ಸೇರಿ ಒಟ್ಟು ಒಂಭತ್ತು ಬಣ್ಣಗಳಲ್ಲಿ ಲಭ್ಯ. ಕಾರಿನ ಎಕ್ಸ್ ಶೋ ರೂಂ ಬೆಲೆ 84.70 ಲಕ್ಷ ರುಪಾಯಿ. ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ಯಾಸೆಂಜರ್ ಮತ್ತು ಡ್ರೈವರ್ ಏರ್‌ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳ ಸಹಿತ ಶಕ್ತಿಶಾಲಿ ಸ್ಪೋರ್ಟಿವ್ ಡ್ರೈವ್ ಫೀಲ್ ದೊರೆಯಲಿದೆ.

ವಿಶೇಷತೆಗಳು
3498 ಸಿಸಿ ಪವರ್ ಫುಲ್ ಡಿಸೆಲ್ ಇಂಜಿನ್
245 ಹಾರ್ಸ್ ಪವರ್
ಪವರ್ ಅಡ್ಜೆಸ್ಟಬಲ್ ವಿಂಡೋಸ್
ಸ್ವಯಂಚಾಲಿತ ವಾತಾವರಣ ನಿಯಂತ್ರಕ
ಬೆಲೆ 84.70 ಲಕ್ಷ ರು (ಎಕ್ಸ್ ಶೋ ರೂಂ)
ಬಿಎಂಡ್ಲ್ಯೂ ಎಂ2 ಕಾಂಪಿಟಿಷನ್
ಸ್ಪೋರ್ಟಿವ್ ಕಾರ್ ಪ್ರಿಯರಿಗಾಗಿ ಬಿಎಂಡ್ಲ್ಯೂ ಎಂ2 ಕಾಂಪಿಟಿಷನ್ ರೂಪದಲ್ಲಿ ಶಕ್ತಿಶಾಲಿ ಕಾರು ಮಾರುಕಟ್ಟೆಗೆ ಬಂದಿದೆ. ಕೇವಲ 4.2 ಸೆಕೆಂಡ್‌ಗಳಲ್ಲಿ ಗರಿಷ್ಟ100 ಕಿ.ಮೀ ವೇಗ ಪಡೆದುಕೊಳ್ಳುವ ಈ ಕಾರು ಗಂಟೆಗೆ 250 ಕಿ.ಮೀ ವೇಗದಲ್ಲಿ ಸಾಗುವ ಶಕ್ತಿ ಹೊಂದಿದೆ.
ಬಿಎಂಡ್ಲ್ಯೂ ತನ್ನ ಎಂ ಸೀರೀಸ್ ಕಾರುಗಳಲ್ಲಿ ಎರಡನೇಯದಾಗಿ ಈಗ ಎಂ2 ಪರಿಚಯಿಸಿದ್ದು, ಆ್ಯಪಲ್ ಕಾರ್ ಪ್ಲೇ, ಟಿನ್ ಪವರ್ ಟರ್ಬೋ ಇನ್‌ಲೈನ್ 6 ಸಿಲೆಂಡರ್ ಪೆಟ್ರೋಲ್ ಇಂಜಿನ್ ವ್ಯವಸ್ಥೆ ಈ ಕಾರ್‌ನಲ್ಲಿ ಇದೆ.
ವಿಶೇಷತೆಗಳು
2979 ಸಿಸಿ ಪವರ್, 405 ಹಾರ್ಸ್ ಪವರ್
7 ಸ್ಪೀಡ್ ಎಂ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್
ಆಟೋಮೆಟಿಕ್ ಗೇರ್
ಬೆಲೆ 79.90 ಲಕ್ಷ (ಎಕ್ಸ್ ಶೋ ರೂಂ)
