Asianet Suvarna News Asianet Suvarna News

ಸೋಶಿಯಲ್ ಮೀಡಿಯಾದಲ್ಲಿ ಎಡವಟ್ಟು, ಕ್ಷಮೆ ಯಾಚಿಸಿದ BMW!

ಸಾಮಾಜಿಕ ಜಾಲತಾಣದಲ್ಲಿ ತುಸು ಎಚ್ಚರಿಕೆಯಿಂದರಬೇಕು ಅನ್ನೋದು ಹಲವು ಬಾರಿ ಸಾಬೀತಾಗಿದೆ. ಹಲವು ಬಾರಿ ಆಲೋಚಿಸಿ ಹಾಕಿದ ಪೋಸ್ಟ್ ಕೂಡ ತಿರುಗುಬಾಣವಾದ ಊದಾಹರಣೆಗಳಿವೆ. ಇದೀಗ BMW ಕಾರು ಕಂಪನಿ ಏನೋ ಹೇಳಲು ಹೋಗಿ ಯಡವಟ್ಟು ಮಾಡಿಕೊಂಡಿದೆ. ಇಷ್ಟೇ ಅಲ್ಲ ಇದೀಗ ಕ್ಷಮೆ ಯಾಚಿಸಿದೆ.

BMW car maker apologies ok boomer blunder in social media ckm
Author
Bengaluru, First Published Nov 21, 2020, 6:49 PM IST

ಜರ್ಮನಿ(ನ.21): ಐಷಾರಾಮಿ ಹಾಗೂ ದುಬಾರಿ ಕಾರುಗಳ ಪೈಕಿ BMW ಕಾರು ಕಂಪನಿಗೆ ಅಗ್ರಸ್ಥಾನವಿದೆ.  ಆರಾಮದಾಯಕ ಹಾಗೂ ಅತ್ಯಂತ ದಕ್ಷ ಕಾರುಗಳನ್ನು ನೀಡುತ್ತಿರುವ BMW ವಿಶ್ವದಲ್ಲೇ ಜನಪ್ರಿಯವಾಗಿದೆ. ಇತ್ತೀಚೆಗೆ  BMW ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. BMW iX ಎಲೆಕ್ಟ್ರಿಕ್ ಕಾರಿಗೆ ಭಾರಿ ಸ್ಪಂದನೆ ವ್ಯಕ್ತವಾಗಿತ್ತು. ಇತ್ತ BMW ಸಾಮಾಜಿಕ ಮಾಧ್ಯಮದಲ್ಲಿ BMW iX ಕಾರಿನ ಪ್ರಚಾರ ಮಾಡಿತ್ತು. ಈ ವೇಳೆ ಮಾಡಿದ ಯಡವಟ್ಟಿಗೆ ಇದೀಗ ಕ್ಷಮೆ ಕೇಳಿದೆ.

ಭಾರತದಲ್ಲಿ ಫಸ್ಟ್ ಎವರ್ BMW X3M ಕಾರು ಬಿಡುಗಡೆ!.

BMW iX ಕಾರಿನ ಪ್ರಚಾರಕ್ಕಾಗಿ ಟ್ವಿಟರ್ ಮೂಲಕ ಪೋಸ್ಟ್ ಒಂದನ್ನು ಮಾಡಿತ್ತು. ಈ ಪೋಸ್ಟ್‌ನಲ್ಲಿ ಹಳೇ ಕಾಲದಲ್ಲಿದ್ದೀರಾ? ಹಾಗಾದಾರೆ ನೀವು ಬದಲಾಯಿಸಿದಿರಲು ಕಾರಣವೇನು? ಇಲ್ಲಿದೆ ಮೊತ್ತ ಮೊದಲ BMW iX ಎಲೆಕ್ಟ್ರಿಕ್ ಕಾರು ಎಂದು ಟ್ವಿಟರ್ ಪೋಸ್ಟ್ ಮಾಡಿತ್ತು. ಇದರಲ್ಲೇನಿದೆ ಅಂತೀರಾ. ಇಲ್ಲೇ ಇರೋದು ನೋಡಿ.

 

ಭಾರತದಲ್ಲಿ ಫರ್ಸ್ಟ್ ಎವರ್ BMW 2 ಸೀರೀಸ್ ಗ್ರಾನ್ ಕೂಪೆ ಬಿಡುಗಡೆ!..

ಇಂಗ್ಲೀಷ್ ಭಾಷೆಯಲ್ಲಿರುವ ಪ್ರಖ್ಯಾತ ಪದವನ್ನು BMW ಈ ಪ್ರಚಾರಕ್ಕಾಗಿ ಬಳಸಿತ್ತು. ಒಕೆ ಬೂಮರ್(ok Boomer) ಒಕೆ ಬೂಮರ್ ಪದ ಹಿರಿಯರಿಗೆ, ವಯಸ್ಸಾದವರಿಗೆ, ವಯಸ್ಸಿನ ಕಾರಣ ಎದ್ದು ನಡೆಯಲು ಸಾಧ್ಯವಿಲ್ಲದವರು, ಸಾಮರ್ಥ್ಯ ಕಳೆದುಕೊಂಡವರಿಗೆ  ಹೇಳುವ ಪದವಾಗಿದೆ. ಬೇಬಿ ಬೂಮರ್ ಅನ್ನೋ ಪದವನ್ನು ನ್ಯೂ ಜನರೇಶನ್ ಅಥವಾ ಇಂದಿನ ಪೀಳಿಗೆಗೆ ಹೇಳುವ ಪದವಾಗಿದೆ. ಅಸಮರ್ಥ ಮುದುಕರೆ ನೀವು ಕಾರು ಬದಲಾಯಿಸದಿರಲು ಕಾರಣವೇನು ಅನ್ನೋ ಅರ್ಥದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್‌ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

 

ಹಿರಿಯ ನಿಂದನೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ವಯಸ್ಸಾದವರನ್ನು ನಿಂದಿಸುವುದು ಸರಿಯಲ್ಲ. ಕೇವಸ ಹೊಸ ಪೀಳಿಗೆ, ಯುವ ಜನಾಂಗ ಮಾತ್ರ ನಿಮ್ಮ ಕಾರು ಖರೀದಿಸುತ್ತಿಲ್ಲ. ಹೀಗಿರುವಾಗ ವಯಸ್ಸಿನ ಕುರಿತು ಅಪಹಾಸ್ಯವೇಕೆ ಎಂದು ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು.

ತಕ್ಷಣವೇ ಎಚ್ಚತ್ತ BMW ಬಹಿರಂಗ ಕ್ಷಮೆ ಯಾಚಿಸಿದೆ. ಯಾವ ವಯಸ್ಸಿನವದಾರದೂ ಸಮಸ್ಯೆ ಇಲ್ಲ, ಯಾರನ್ನು ನೋಯಿಸುವ ಉದ್ದೇಶ ನಮಗಿರಲಿಲ್ಲ. ಹೀಗಾಗಿ ನಾವು ಕ್ಷಮೆ ಯಾಚಿಸುತ್ತಿದ್ದೇವೆ. ನಮ್ಮ ಹೊಚ್ಚ ಹೊಸ BMW iX ಕಾರು ಎಲೆಕ್ಟ್ರಿಕ್ ವಿಭಾಗದಲ್ಲಿ ಕೂಸಾಗಿದೆ. ನಮ್ಮ ಎಲೆಕ್ಟ್ರಿಕ್ ಕಾರಿನ ಪಯಣದಲ್ಲಿ ನೀವು ಭಾಗಿಯಾಗುತ್ತೀರಿ ಎಂದು ಭಾವಿಸುತ್ತೇವೆ ಎಂದು BMW ಟ್ವೀಟ್ ಮಾಡಿದೆ.

Follow Us:
Download App:
  • android
  • ios