ಬೆಂಗಳೂರು(ಜು.10): ಪ್ರತಿಯೊಬ್ಬ ಕಾರು ಪ್ರಿಯರಿಗೆ ಮರ್ಸಿಡೀಸ್ ಬೆಂಜ್ ಕಾರು ತಮ್ಮ ಮನೆಯಲ್ಲಿರಬೇಕು, ಅದರಲ್ಲಿ ಪ್ರಯಾಣ ಮಾಡಬೇಕು ಅನ್ನೋ ಕನಸು ಇದ್ದೇ ಇರುತ್ತೆ. ಅಷ್ಟರ ಮಟ್ಟಿಗೆ ಮರ್ಸಿಡೀಸ್ ಬೆಂಜ್ ಮೋಡಿ ಮಾಡಿದೆ. ಐಷಾರಾಮಿ, ಭವ್ಯತೆ, ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದ ಮರ್ಸಿಡೀಸ್ ಬೆಂಜ್  ಇದೀಗ ಹೊಚ್ಚ ಹೊಸ ಎರಡು ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಮರ್ಸಿಡೀಸ್ ಬೆಂಜ್ GLE LWB ಹಾಗೂ ಮರ್ಸಡೀಸ್ ಬೆಂಜ್ GLS ಕಾರು ಮಾರುಕಟ್ಟೆ ಪ್ರವೇಶಿಸಿದೆ.

ಮರ್ಸಿಡಿಸ್ ಬೆಂಜ್ ಕಳೆದ ಹಲವು ದಶಕಗಳಿಂದ ಐಷಾರಾಮಿ ಕಾರುಗಳ ಅಗ್ರಜನಾಗಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ.  ಪ್ರತಿ ಬೆಂಜ್ ಕಾರು ಅಸಾಧಾರಣ ಕಾರ್ಯಕ್ಷಮತೆ ಹೊಂದಿದೆ. ರೋಮಾಂಚಕ ಚಾಲನಾ ಅನುಭವ, ಹಾರ್ಸ್ ಪವರ್‌ನಿಂದ ಬೆಂಜ್ ಎಲ್ಲರ ಅಚ್ಚುಮೆಟ್ಟಿನ ಕಾರಾಗಿದೆ. ಇದೇ ಪರಂಪರೆ, ಗ್ರಾಹಕರ ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡಿರುವ ಮರ್ಸಡಿಸ್ ಬೆಂಜ್ ಇದೀಗ ಹೊಚ್ಚ ಹೊಸ ಮರ್ಸಡಿಸ್ ಬೆಂಜ್ GLE LWB ಹಾಗೂ ಮರ್ಸಡೀಸ್ ಬೆಂಜ್ GLS ಕಾರನ್ನು ಬಿಡುಡೆ ಮಾಡಿದೆ.

ನೂತನ ಮರ್ಸಡಿಸ್ ಬೆಂಜ್  GLE LWB ಕಾರು ಅದ್ಭುತ ವಿನ್ಯಾಸ, ಶಕ್ತಿಯುತ ಕಾರ್ಯಕ್ಷಮತೆ ಹೊಂದಿದೆ. ನೂತನ ಮರ್ಸಡಿಸ್ ಬೆಂಜ್ GLE LWB ಈ ಯುಗದ ಶಕ್ತಿ ಎಂದೇ ಗುರುತಿಸಿಕೊಂಡಿದೆ. ಇದು 5 ಸೀಟರ್ SUV ಕಾರು.  ಕಾರು ಹೆಚ್ಚಿನ ವೀಲ್ ಬೇಸ್ ಹೊಂದಿರುವ ಕಾರಣ ಹಿಂಬದಿ ಸೀಟಿನಲ್ಲಿನ ಪ್ರಯಾಣ ಕೂಡ ಆರಾಮದಾಯಕವಾಗಿದೆ. 20 ಇಂಚಿನ ಆಲೋಯ್ ವೀಲ್, ಮಲ್ಟಿ ಫಂಕ್ಷನ್ ಸ್ಪೋರ್ಟ್ ಸ್ಟೀರಿಂಗ್ ವೀಲ್ ಹಾಗೂ ಆಫ್ ರೋಡ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.

ಹೊಚ್ಚ ಹೊಸ ಮರ್ಸಡಿಸ್ ಬೆಂಜ್ GLE LWB ಕಾರಿನಲ್ಲಿ 7 ಏರ್‌ಬ್ಯಾಗ್ ಹೊಂದಿದೆ. ಪನರೋಮಿಕ್ ಸನ್‌ರೂಫ್, ಬ್ಲೈಂಡ್ ಸ್ಪಾಟ್ ಅಸಿಸ್ಟ್, AIRMATIC ಸಸ್ಪೆನ್ಶನ್ ಜೊತೆಗೆ ADS+, ಆಕರ್ಷಕ ಇಂಟಿರಿಯರ್, NTG 6 MBUX ಜೊತೆಗೆ ವಾಯ್ಸ್ ಅಸಿಸ್ಟ್ ಹೊಂದಿದೆ. ಅದರಲ್ಲೂ ಪನೊರೋಮಿಕ್ ಸ್ಲೈಡಿಂಗ್ ಸನ್‌ರೂಫ್ ಎಲ್ಲರನ್ನೂ ಆಕರ್ಷಿಸುತ್ತಿದೆ.

ಇನ್ನು ಹೊಚ್ಚ ಹೊಸ ಮರ್ಸಡಿಸ್ ಬೆಂಜ್ GLS ಕಾರು S-ಕ್ಲಾಸ್ SUV ಕಾರಾಗಿದೆ. ಇದು 7 ಸೀಟರ್ SUV ಕಾರು. ವಿಶೇಷ ಅಂದರೆ ಈ ಕಾರಿನಲ್ಲಿ EQ ಬೂಸ್ಟ್ ಟೆಕ್ನಾಲಜಿ ಬಳಸಿಕೊಳ್ಳಲಾಗಿದೆ. ಈ ಸ್ಪೋರ್ಟ್ಸ್  SUV ಕಾರು ಮಲ್ಟಿಬೀಮ್ LED ಹೆಡ್‌ಲ್ಯಾಂಪ್ ಹಾಗೂ ಆಡಾಪ್ಟೀವ್ ಹೈ ಬೀಮ್ ಅಸಿಸ್ಟ್ ಪ್ಲಸ್ ಫೀಚರ್ಸ್ ಹೊಂದಿದೆ. ಇದರಿಂದ ರಾತ್ರಿ ಡ್ರೈವಿಂಗ್ ಸುಲಭವಾಗಲಿದೆ.

21 ಇಂಚಿನ್ ಆಲೋಯ್ ವೀಲ್ ಜೊತೆಗೆ ಎರಡೂ ಬದಿಯಲ್ಲಿ ರಬ್ಬರ್ ಸ್ಟಡ್ ಹೊಂದಿರುವ ಈ SUV ಕಾರು ಯಾವುದೇ ರಸ್ತೆಯಲ್ಲೂ ಸಲೀಸಾಗಿ ಪ್ರಯಾಣ ಮಾಡಲಿದೆ. ಕಾರಿನೊಳಗಿನ ವಿನ್ಯಾಸ ಕೂಡ ಅಷ್ಟೇ ಉತ್ತಮವಾಗಿದೆ. ಇಷ್ಟೇ ಅಲ್ಲ ಆಕರ್ಷವಾಗಿದೆ. ಬ್ರಮಸ್ಟರ್ ಸರೌಂಡ್ ಸೌಂಡ್ ಸಿಸ್ಟಮ್, ಫ್ರಂಟ್ ಹಾಗೂ ಹಿಂಭಾಗದಲ್ಲಿ ವೈಯರ್‌ಲೆಸ್ ಚಾರ್ಚಿಂಗ್ ಸೌಲಭ್ಯವಿದೆ. ಇನ್ನು ಕಾರಿಲ್ಲಿ ಒಟ್ಟು 11 USB ಪೋರ್ಟ್ ಅಳವಡಿಸಲಾಗಿದೆ. 2 ಮತ್ತು 3ನೇ ಸಾಲಿನ ಸೀಟು ಒಂದೇ ಟಚ್‌ನಲ್ಲಿ ಸುಲಭವಾಗಿ ಮಡಚಿಕೊಳ್ಳಲಿದೆ. ಇದರಿಂದ ಲಾಂಗ್ ಡ್ರೈವ್‌ನಲ್ಲಿ ಆರಾಮಾದಾಯಕವಾಗಿ ಪ್ರಯಾಣ ಸುಲಭವಾಗಲಿದೆ. ಇನ್ನು ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗಿದೆ. 9 ಏರ್‌ಬ್ಯಾಗ್, ಆಫ್ ರೋಡ್ ABS, AIRMATIC ಸಸ್ಪೆನ್ಶನ್ ಜೊತೆ ADS+ ಹೊಂದಿದೆ.

ಮರ್ಸಡಿಸ್ ಬೆಂಜ್ GLS ಕಾರು ಆಕ್ಟೀವ್ ಪಾರ್ಕ್ ಅಸಿಸ್ಟ್ ಹಾಗೂ 360 ಡಿಗ್ರಿ ಕ್ಯಾಮರ, 2X31.2 cm(12.3) ವೈಡ್‌ಸ್ಕ್ರೀನ್ ಕಾಕ್‌ಪಿಕ್, NTG6 MBUX ಜೊತೆಗೆ ವಾಯ್ಸ್ ಅಸಿಸ್ಟ್, HDD ನ್ಯಾವಿಗೇಶನ್, ಮರ್ಸಡಿಸ್ ಬೆಂಝ್ ಮಿ ಆ್ಯಪ್ ಜೊತೆಹೆ ಹಲವು ಫೀಚರ್ಸ್ ಹೊಂದಿದೆ.

 

ಮರ್ಸಿಡಿಸ್ ಬೆಂಜ್ ತಮ್ಮ SUV ಕಾರು ಮಾರುಕಟ್ಟೆಯನ್ನು ಜಾಗತಿಕವಾಗಿ ವಿಸ್ತರಿಸುವಲ್ಲಿ ಆಕ್ರಮಣಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. 2019ರಲ್ಲಿ 7,83,000 ಕ್ಕೂ ಹೆಚ್ಚು ಕಾರುಗಳ ಮಾರಾಟದೊಂದಿಗೆ, ಎಸ್‌ಯುವಿ ವಿಭಾಗ ಗರಿಷ್ಠ ಮಾರಾಟ ದಾಖಲೆ ಬರಿದಿದೆ. ಭಾರತದಲ್ಲೂ  ಮರ್ಸಿಡಿಸ್ ಬೆಂಜ್ SUV ವಿಭಾಗವು ಬೇಡಿಕೆ ಮತ್ತು ಮಾರಾಟದ ವಿಚಾರದಲ್ಲಿ ಜಾಗತಿಕ ವಿಧಾನವನ್ನು ಅನುಸರಿಸಿ ಯಶಸ್ವಿಯಾಗಿದೆ.   ಮರ್ಸಿಡಿಸ್ ಬೆಂಜ್ ಭಾರತೀಯ ಗ್ರಾಹಕರಿಗೆ ಐದು ಹೊಸ SUVಗಳನ್ನು ಪರಿಚಯಿಸಿದೆ. ಈ ಕಾರುಗಳೆಂದರೇ G 350D, ಹೊಚ್ಚ ಹೊಸ GLC, ಹೆಚ್ಚು ಉದ್ದನೆ ವೀಲ್‌ಬೇಸ್ GLE, ನೂತನ GLC ಕೂಪ್ ಹಾಗೂ GLS.

ಐಷಾರಾಮಿ, ಆರಾಮದಾಯಕ ಪ್ರಯಾಣಕ್ಕೆ ಭಾರತೀಯರ ಮೊದಲ ಆಯ್ಕೆ ಮರ್ಸಿಡಿಸ್ ಬೆಂಜ್ ಕಾರು ಅನ್ನೋದು ಸಾಬೀತಾಗಿದೆ. ಮರ್ಸಿಡಿಸ್ ಬೆಂಜ್  ಕಾರು  ಮಾಲೀಕನ ಪ್ರತಿಬಿಂಬವೆಂದು ಪರಿಗಣಿಸಲಾಗುತ್ತದೆ.  ಬಿಡುಗಡೆಯಾಗಿರುವ ನೂತನ ಮರ್ಸಡೀಸ್ GLE LWB ಹಾಗೂ GLS  ಕಾರಿನಲ್ಲಿ ಭಾರಿ ಬದಲಾವಣೆಗಳಿಲ್ಲ. GLE LWB ಕಾರು 5 ಸೀಟರ್ SUV ಕಾರಾಗಿದ್ದರೆ,  GLS ಕಾರು 7 ಸೀಟರ್ SUV ಕಾರಾಗಿದೆ. ಗುಣಮಟ್ಟ, ವಿನ್ಯಾಸ, ತಾಂತ್ರಿಕತೆ, ಆಧುನಿಕತೆ, ಶ್ರೇಷ್ಠತೆ, ಆರಾಮಾದಾಯಕ, ದಕ್ಷತೆಯ ಜೊತೆಗೆ ಐಷಾರಾಮಿ ಕಾರು ನಿಮ್ಮ ಕನಸಾಗಿದ್ದರೆ ಮರ್ಸಿಡಿಸ್ GLE LWB ಹಾಗೂ GLS ಕಾರು ಅತ್ಯುತ್ತಮ ಆಯ್ಕೆ.#AllKindsOfStrength