ಒಂದು ವಾರಗಳ ವಿದ್ಯುತ್‌ ಚಾಲಿತ ವಾಹನಗಳ ಅಭಿಯಾನದ ಭಾಗವಾಗಿ ಬೆಸ್ಕಾಂ ವತಿಯಿಂದ ಶನಿವಾರ ವಿಧಾನಸೌಧದಿಂದ ಅರಮನೆ ಮೈದಾನದ ಚಾಮರ ವಜ್ರ ಸಭಾಂಗಣದವರೆಗೆ ವಿದ್ಯುತ್‌ಚಾಲಿತ ವಾಹನಗಳ (ಇವಿ) ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು (ಜು.03): ಒಂದು ವಾರಗಳ ವಿದ್ಯುತ್‌ ಚಾಲಿತ ವಾಹನಗಳ ಅಭಿಯಾನದ ಭಾಗವಾಗಿ ಬೆಸ್ಕಾಂ ವತಿಯಿಂದ ಶನಿವಾರ ವಿಧಾನಸೌಧದಿಂದ ಅರಮನೆ ಮೈದಾನದ ಚಾಮರ ವಜ್ರ ಸಭಾಂಗಣದವರೆಗೆ ವಿದ್ಯುತ್‌ಚಾಲಿತ ವಾಹನಗಳ (ಇವಿ) ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಹಸಿರು ಇಂಧನ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಈ ರಾರ‍ಯಲಿಗೆ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಸ್ವತಃ ವಾಹನ ಚಲಾಯಿಸುವ ಮೂಲಕ ಚಾಲನೆ ಕೊಟ್ಟರು. ಬೈಕ್‌, ಕಾರು, ಟಿಪ್ಪರ್‌, ಆಟೋ, ಸೈಕಲ್‌ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಎಲೆಕ್ಟ್ರಿಕ್‌ ವಾಹನಗಳು ಭಾಗವಹಿಸಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮುಂದಿನ ದಿನಗಳಲ್ಲಿ ಬೆಂಗಳೂರು ದೇಶದ ವಿದ್ಯುತ್‌ಚಾಲಿತ ವಾಹನಗಳ ರಾಜಧಾನಿಯಾಗಲಿದೆ. ಇವಿ ಚಾರ್ಜಿಂಗ್‌ ಸ್ಟೇಷನ್‌ ನಿರ್ಮಾಣ, ಇವಿ ಉತ್ಪಾದನೆಗೆ ಬೆಂಬಲ, ಬ್ಯಾಟರಿ ತಯಾರಿಕೆ ಘಟಕ ನಿರ್ಮಾಣ ಮುಂತಾದ ಇವಿ ಸಂಬಂಧಿ ಯೋಜನೆಗಳಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ವಿದ್ಯುತ್‌ಚಾಲಿತ ವಾಹನ ಬಳಕೆ ದೊಡ್ಡ ಪ್ರಮಾಣದಲ್ಲಿ ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಆದ್ಯತೆ ಆಗಿದೆ ಎಂದು ತಿಳಿಸಿದರು.

Bengaluru: ಎಲೆಕ್ಟ್ರಿಕ್‌ ವಾಹನಗಳತ್ತ ಜನರ ಚಿತ್ತ: ಎಕ್ಸ್‌ಪೋಗೆ ಭಾರಿ ಸ್ಪಂದನೆ

ಆ.15ರಿಂದ ರಸ್ತೆಗಿಳಿಯಲಿವೆ ಎಲೆಕ್ಟ್ರಿಕ್‌ ಆಟೋ: ಡಿಎಸ್‌ಆರ್‌ ಕಂಪೆನಿಯ ಎಲೆಕ್ಟ್ರಿಕ್‌ ಆಟೋಗಳು ಆ.15ರಿಂದ ರಸ್ತೆಗಿಳಿಯಲಿವೆ ಎಂದು ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಧನಶೇಖರ್‌ ರೆಡ್ಡಿ ತಿಳಿಸಿದ್ದಾರೆ. ನಗರದಲ್ಲಿ ಆಯೋಜಿಸಿರುವ ಗ್ರೀನ್‌ ವೆಹಿಕಲ್‌ ಎಕ್ಸ್‌ಪೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಟರಿ ಚಾಲಿತ ಮೋಟಾರ್‌ ವಾಹನಗಳ ಕಂಪೆನಿ ನಮ್ಮದಾಗಿದ್ದು ಆ.15 ಕ್ಕೆ ಕಂಪೆನಿಯ ಎಲೆಕ್ಟ್ರಿಕಲ್‌ ಆಟೋಗಳು ರಸ್ತೆಗಿಳಿಯಲಿವೆ. ಬೆಂಗಳೂರು ನಗರ, ಗ್ರಾಮಾಂತರದಲ್ಲಿ 120 ಕ್ಕೂ ಅಧಿಕ ಬ್ಯಾಟರಿ ರೀಪ್ಲೇಸ್‌ಮೆಂಟ್‌ ಪಾಯಿಂಟ್‌ ಹಾಗೂ ಚಾರ್ಜಿಂಗ್‌ ಪಾಯಿಂಟ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿವರಿಸಿದರು.

ಬಲವಾದ, ಸುರಕ್ಷಿತ ಮತ್ತು ಆರ್ಥಿಕವಾಗಿ ಕೈಗೆಟುಕುವ ಎಲೆಕ್ಟ್ರಿಕ್‌ ವಾಹನಗಳ ತಯಾರಕ ಕಂಪೆನಿ ನಮ್ಮದಾಗಿದೆ. ಪರಿಸರ ರಕ್ಷಣೆಗಾಗಿ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸುವುದು ಇಂದಿನ ಅಗತ್ಯವಾಗಿದೆ. ಸಾರ್ವಜನಿಕರ ವೀಕ್ಷಣೆಗೆ ಎಲೆಕ್ಟ್ರಿಕ್‌ ಆಟೋವನ್ನು ಈ ಎಕ್ಸ್‌ಪೋದಲ್ಲಿ ಪ್ರದರ್ಶನಕ್ಕಿಡಲಾಗಿದೆ. ಪರಿಸರಸ್ನೇಹಿ ಎಲೆಕ್ಟ್ರಿಕ್‌ ದ್ವಿಚಕ್ರ, ತ್ರಿಚಕ್ರ ವಾಹನ ತಯಾರಿಕೆಗೆ ನಾವು ಆದ್ಯತೆ ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಹೆಚ್ಚು ಸುರಕ್ಷಿತ, ಸುಲಭ ಚಾರ್ಜಿಂಗ್, ಅತ್ಯಾಕರ್ಷಕ ಒಬೆನ್ ಎಲೆಕ್ಟ್ರಿಕ್ ಬೈಕ್ ಟೆಸ್ಟ್ ರೈಡ್ ಆರಂಭ!

ಡಿಎಸ್‌ಆರ್‌ ಇವಿ ಮೊಬಿಲಿಟಿಯು ದ್ವಿಚಕ್ರ ವಾಹನ ಶ್ರೇಣಿಯಲ್ಲಿ ಡಿಎಸ್‌ಆರ್‌ ಲಿಯೋ, ಥಿಲ್‌, ರಾಂಬೊ ಮತ್ತು ರೋಡಿಂಗ್‌ ಹೊರತಂದಿದೆ. ತ್ರಿಚಕ್ರ ವಾಹನ ಶ್ರೇಣಿಯಲ್ಲಿ ಡಿಎಸ್‌ಆರ್‌ ಎಲ್‌5ಎಂ ಮತ್ತು ಲೋಡಿಂಗ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಎರಡೂ ಉತ್ಪನ್ನಗಳು ಸುರಕ್ಷಿತವಾಗಿದೆ. ಗೇರ್‌ಗಳಿಲ್ಲ. ಉತ್ತಮ ಬಾಳಿಕೆ ಬರುತ್ತವೆ ಎಂದು ಭರವಸೆ ನೀಡಿದರು. ಕಂಪೆನಿಯ ಜಯಸೂರ್ಯ, ರಾಕೇಶ್‌ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.