ಕಡಿಮೆ ಸಿಸಿ ಬೈಕುಗಳಿಂದ ಹಿಡಿದು ಅಡ್ವೆಂಚರ್‌ ಪ್ರಿಯರ ಅದ್ದೂರಿ ಬೈಕುಗಳವರೆಗೆ ಹೊಸ ಹೊಸ ಬೈಕುಗಳು ಮಾರುಕಟ್ಟೆಗೆ ಒಂದರ ಹಿಂದೊಂದರಂತೆ ಬಲಗಾಲಿಟ್ಟು ಬರುತ್ತಿವೆ. ಜನ ಮತ್ತೆ ಓಡಾಟ ಶುರು ಮಾಡಿದ್ದಾರೆ ಮತ್ತು ಬೈಕು ಮಾರುಕಟ್ಟೆಚೇತರಿಸಿಕೊಂಡಿವೆ ಅನ್ನುವುದಕ್ಕೆ ಈ ಬೈಕುಗಳು ಪುರಾವೆಯಂತಿವೆ. ಇತ್ತೀಚೆಗೆ ಬಿಡುಗಡೆಯಾದ ಮಿಡ್ಲ್‌ ಕ್ಲಾಸ್‌ ವಿಭಾಗದಿಂದ ಹಿಡಿದು ತಾರುಣ್ಯದ ಮಂದಿಯ ಆಕರ್ಷಕ ಅಡ್ವೆಂಚರ್‌ ಬೈಕುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಭಾರತದಿಂದ ಯುರೋಪ್ ಮಾರುಕಟ್ಟೆಗೆ ರಫ್ತು, ಹೊಸ ದಾಖಲೆ ನಿರ್ಮಿಸಿದ ಹೋಂಡಾ!

ಬಜಾಜ್‌ ಸಿಟಿ 100ನ ಹೊಸ ವರ್ಷನ್‌
ಮಿಡ್ಲ್‌ ಕ್ಲಾಸ್‌ ಮಂದಿಯ ಗಮನ ಸೆಳೆಯುವಂತೆ ರೂಪಿಸಲಾಗಿದ್ದ ಬಜಾಜ್‌ ಸಿಟಿ 100 ಬೈಕಿನ ಅಪ್‌ಡೇಟೆಡ್‌ ವರ್ಷನ್‌ ಬಿಡುಗಡೆಯಾಗಿದೆ. ‘ಇನ್ನಷ್ಟುಖಡಕ್‌ ಹಾಗೂ ಸ್ಟೈಲಿಶ್‌ ಆಗಿ ಕಾಣಲು ಈ ಖಡಕ್‌ ಬೈಕ್‌’ ಅನ್ನುತ್ತಾ ತನ್ನ ಹೊಸ ಸಿಟಿ 100 ರಿಲೀಸ್‌ ಮಾಡಿದೆ ಬಜಾಜ್‌. 100 ಸಿಸಿ ಇಂಜಿನ್‌ನ ಈ ಬೈಕ್‌ 89.5 ಕಿಮೀ ಮೈಲೇಜ್‌ ನೀಡುತ್ತದೆ ಎನ್ನುವುದು ಕಂಪನಿ ನೀಡುವ ಭರವಸೆ. ಹಾಗಾಗಿ ಸಿಟಿಯಲ್ಲೇ ಆರಾಮಾಗಿ ಓಡಾಡಿಕೊಂಡಿರಲು ಈ ಬೈಕು ಬೆಸ್ಟುಅನ್ನುವುದು ಬಜಾಜ್‌ ಕಂಪನಿಯ ಮನಸಿನ ಮಾತು. ರಬ್ಬರ್‌ ಟ್ಯಾಂಕ್‌ ಪ್ಯಾಡ್‌, ಕ್ರಾಸ್‌ ಟ್ಯೂಬ್‌ ಹೊಂದಿರುವ ಹ್ಯಾಂಡಲ್‌ ಬಾರ್‌, ಫ್ಯುಲ್‌ ಮೀಟರ್‌ ಹೀಗೆ ಎಂಟು ಹೊಸ ಫೀಚರ್‌ಗಳಿವೆ.

ಹಬ್ಬದ ಸಂಭ್ರಮ ಡಬಲ್ ; ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್+ ಬ್ಲಾಕ್ ಮತ್ತು ಆಕ್ಸೆಂಟ್ ಲಾಂಚ್!.

ಇದರ ದೆಹಲಿ ಎಕ್ಸ್‌ ಶೋರೂಮ್‌ ಬೆಲೆ ರು.46,432

2.45 ಲಕ್ಷಕ್ಕೆ ಬಿಎಂಡಬ್ಲ್ಯೂ ಬೈಕು
ಬಿಎಂಡಬ್ಲ್ಯೂ ಬೈಕುಗಳ ದುಬಾರಿ ಬೆಲೆಯಿಂದಾಗಿ ಬಿಎಂಡಬ್ಲ್ಯೂ ಬೈಕುಗಳ ಮೇಲೆ ಆಸೆ ಇದ್ದರೂ ಆ ಕಡೆ ಗಮನ ಹರಿಸಲು ಹೆದರಿದವರೇ ಜಾಸ್ತಿ. ಆದರೆ ಇದೀಗ ಎರಡೂವರೆ ಲಕ್ಷ ರೂಪಾಯಿಗೆ ಕೈಗೆಟಕುವ ಬೈಕುಗಳನ್ನು ಬಿಎಂಡಬ್ಲ್ಯೂ ದೇಶಕ್ಕೆ ಅರ್ಪಿಸಿದೆ.

ಮೋಟಾರ್‌ ಇಂಡಿಯಾ ಬಿಎಂಡಬ್ಲ್ಯೂ ಜಿ 310 ಆರ್‌ ಮತ್ತು ಬಿಎಂಡಬ್ಲ್ಯೂ ಜಿ 310 ಜಿಎಸ್‌ ಎಂಬ ಎರಡು ಸೂಪರ್‌ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಅವತಾರ್‌ನಲ್ಲಿರುವ ಈ ಬೈಕ್‌ಗಳಿಗೆ 3 ವರ್ಷದ ವಾರಂಟಿ ಇದೆ. ಅಡ್ವೆಂಚರ್‌ ಬೈಕ್‌ ರೈಡಿಂಗ್‌ ಕ್ರೇಜ್‌ ಇರುವವರಿಗೆ ಹೇಳಿ ಮಾಡಿಸಿದ್ದು. 313 ಸಿಸಿ ವಾಲರ್‌ ಸಿಂಗಲ್‌ ಸಿಲಿಂಡರ್‌ ಫೋರ್‌ ಸ್ಟೊ್ರೕಕ್‌ ಇಂಜಿನ್‌ ಈ ಬೈಕುಗಳ ಶಕ್ತಿ. ಎಲ್‌ಇಡಿ ಹೆಡ್‌ಲೈಟ್‌ಗಳು ಇವುಗಳ ವಿಶೇಷತೆ. 2.5 ಸೆಕೆಂಡ್‌ನಲ್ಲಿ ಗಂಟೆಗೆ 143 ಕಿಮೀ ವೇಗವನ್ನು ಪಡೆಯುವ ಸೂಪರ್‌ ಬೈಕ್‌ಗಳಿವು. 6 ಸ್ಪೀಡ್‌ ಗೇರ್‌ಗಳು ಇದರಲ್ಲಿವೆ.

ಬಿಎಂಡಬ್ಲ್ಯೂ ಜಿ 310 ಆರ್‌ ಆರಂಭಿಕ ಬೆಲೆ ರು.2.45 ಲಕ್ಷ
ಬಿಎಂಡಬ್ಲ್ಯೂ ಜಿ 310 ಜಿಎಸ್‌ ಆರಂಭಿಕ ಬೆಲೆ ರು.2.85 ಲಕ್ಷ