Asianet Suvarna News Asianet Suvarna News

11 ಸಾವಿರ ನೀಡಿ ನೂತನ ಮಾರುತಿ ಎರ್ಟಿಗಾ ಕಾರು ಬುಕ್ ಮಾಡಿ!

ಮಾರುತಿ ಸುಜುಕಿ ಸಂಸ್ಥೆಯ ನೂತನ ಎರ್ಟಿಗಾ ಕಾರು ಬಿಡುಗಡೆ ಮಾಡುತ್ತಿದೆ. 11 ಸಾವಿರ ರೂಪಾಯಿ ನೀಡಿ ನೂತನ ಕಾರು ಬುಕ್ ಮಾಡಬಹುದು. ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ಗಳಲ್ಲಿ ನೂತನ ಎರ್ಟಿಗಾ ಕಾರು ಲಭ್ಯವಿದೆ.

All-New Maruti Suzuki Ertiga Bookings Officially Open with 11000 rs
Author
Bengaluru, First Published Nov 14, 2018, 2:39 PM IST
  • Facebook
  • Twitter
  • Whatsapp

ಬೆಂಗಳೂರು(ನ.14): ಮಾರುತಿ ಸುಜುಕಿ ಸಂಸ್ಥೆಯ ನೆಕ್ಸ್ಟ್ ಜನರೇಷನ್ ಎರ್ಟಿಗಾ ಕಾರು ನವೆಂಬರ್ 21ಕ್ಕೆ ಬಿಡುಗಡೆಯಾಗಲಿದೆ. ಈಗಾಗಲೇ ಈ ಕಾರಿನ ಬುಕಿಂಗ್ ಆರಂಭಗೊಂಡಿದೆ.

All-New Maruti Suzuki Ertiga Bookings Officially Open with 11000 rs

11,000 ರೂಪಾಯಿ ನೀಡಿ ನೂತನ ಮಾರುತಿ ಎರ್ಟಿಗಾ ಕಾರನ್ನು ಬುಕ್ ಮಾಡಬಹುದು. ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ಗಳಲ್ಲಿ ಈ ಕಾರು ಲಭ್ಯ. ಹೆಚ್ಚುವರಿ ಫೀಚರ್ಸ್‌ನೊಂದಿಗೆ ಈ ಕಾರು ಬಿಡುಗಡೆಯಾಗುತ್ತಿದೆ.

All-New Maruti Suzuki Ertiga Bookings Officially Open with 11000 rs
ಭಾರತದಲ್ಲಿ ಈವರೆಗೆ 4.2 ಲಕ್ಷ ಎರ್ಟಿಗಾ ಕಾರುಗಳು ಮಾರಾಟವಾಗಿದೆ. MPV ಸೆಗ್ಮೆಂಟ್‌ನಲ್ಲಿ ಬೇರೆ ಕಾರುಗಳಿಗೆ ಹೋಲಿಸಿದಲ್ಲಿ, ಎರ್ಟಿಗಾ ಬೆಲೆ ಕಡಿಮೆ. ಇದೀಗ ನೂತನ ಎರ್ಟಿಗಾ ಹಿಂದಿನ ಎಲ್ಲಾ ದಾಖಲೆಗಳನ್ನೂ ಹಿಂದಿಕ್ಕಲಿದೆ ಎನ್ನುವುದು ಕಂಪೆನಿ ವಿಶ್ವಾಸ.  

ಹಳೇ ಎರ್ಟಿಗಾ 1.4 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿತ್ತು. ಇದೀಗ ಈ ಕಾರು 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. 103 bhp ಪೀಕ್ ಪವರ್, 38nm ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಮ್ಯಾನ್ಯುಯಲ್ ಗೇರ್‌ಬಾಕ್ಸ್ ಇದಕ್ಕಿದೆ. ಇನ್ನು ಪೆಟ್ರೋಲ್ ಎಂಜಿನ್ SHVS ಮೈಲ್ಡ್ ಹೈಬ್ರಿಡ್ ಕಾರೂ ಲಭ್ಯವಿದೆ.

 

All-New Maruti Suzuki Ertiga Bookings Officially Open with 11000 rs

ಡೀಸೆಲ್ ಎಂಜಿನ್ ಗಾಡಿ ಹೇಗಿದೆ?
ಡೀಸೆಲ್ ಎಂಜಿನ್ ಎರ್ಟಿಗಾ 1.3 ಲೀಟರ್ DDIS 200 ಮೋಟಾರ್,  89bhp ಪೀಕ್ ಪವರ್ ಹಾಗೂ 200nm ಟಾರ್ಕ್ ಉತ್ಪಾದಿಸಲಿದೆ. ಇನ್ನು ಡೀಸೆಲ್ ಎಂಜಿನ್ ಕಾರು ಪ್ರತಿ ಲೀಟರ್‌ಗೆ 25 ಲೀಟರ್ ಮೈಲೇಜ್ ನೀಡಲಿದೆ. ಎರ್ಟಿಗಾ ಆರಂಭಿಕ ಬೆಲೆ 7.13 ಲಕ್ಷ (ಎಕ್ಸ್ ಶೋ ರೂಂ) ರೂ. ನಿಂದ ಪ್ರಾರಂಭವಾಗಲಿದೆ.

Follow Us:
Download App:
  • android
  • ios