ಬೆಂಗಳೂರು(ಅ.08):  ಎಬಿಬಿ ಇಂಡಿಯಾದ ಆನ್ಲೈನ್ ಮಾರ್ಕೇಟ್ ಪ್ಲೇಸ್ E ಮಾರ್ಟ್‍ನಿಂದ ಗ್ರಾಹಕರಿಗೆ 450 LV ಮೋಟಾರ್‌ಗಳನ್ನು ಆರ್ಡರ್ ನೀಡುವ ಅವಕಾಶ ಕಲ್ಪಿಸಲಾಗಿದೆ, ಮತ್ತು ದೇಶಾದ್ಯಂತ ಸುಲಭದ ವಿತರಣೆಯ ವ್ಯವಸ್ಥೆಯೂ ಇದೆ. 

ಭಾರತದ ರಸ್ತೆಗಳ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ!...

ಎಬಿಬಿ ಇಂಡಿಯಾ ಇಂದು ತನ್ನ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆದ ಇ-ಮಾರ್ಟ್‍ನಲ್ಲಿ LV ಮೋಟಾರ್‌ಗಳ ಪಟ್ಟಿ ಮತ್ತು ಮಾರಾಟದ ಆರಂಭವನ್ನು ಘೋಷಿಸಿದೆ. ತನ್ನ ವಿಶಾಲ ಶ್ರೇಣಿಯ ಭಾರತದಲ್ಲಿ ತಯಾರಿಸಿಸಿದ ಮೋಟಾರ್‌ಗಳನ್ನು ಭಾರತದಲ್ಲಿ ತನ್ನ ಸ್ವಂತ ಇಮಾರ್ಕೆಟ್ ಪ್ಲೇಸ್‍ನಲ್ಲಿ ಮಾರುತ್ತಿರುವ ಮೊದಲ ಸಂಸ್ಥೆ ಎಬಿಬಿ. ಆರಂಭಿಕ ಹಂತದಲ್ಲಿ, ಎಬಿಬಿಯ ಮೋಶನ್ ವ್ಯಾಪಾರವು 75KW ವರೆಗೆ ತನ್ನ LVಮೋಟಾರ್‌ಗಳ ಪಟ್ಟಿ ಮಾಡಿದ್ದು, ಆಯ್ದ ಡಿಜಿಟಲ್ ಜ್ಞಾನವಿರುವ ಚಾನಲ್ ಪಾಟ್ರ್ನರ್‍ಗಳ ಸಹಯೋಗ ಮಾಡಿಕೊಂಡು, ದೇಶಾದ್ಯಂತ ತನ್ನ ಉತ್ಪನ್ನಗಳ ವಿತರಣೆ ಮಾಡುವ ಏರ್ಪಾಡು ಮಾಡಿದೆ.

ನಗರ ಪ್ರದೇಶಗಳಲ್ಲಿ ಹೆಚ್ಚಾಯ್ತು ಸಂಚಾರ ದಟ್ಟಣೆ: ಜನರಿಗಿಂತ ವಾಹನ ಸಂಖ್ಯೆಯೇ ಹೆಚ್ಚು!.

ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಅಗಾಧವಾಗಿ ಬೆಳೆದಿದ್ದು, ವಿವಿಧ ಉದ್ಯಮಗಳಲ್ಲಿ ಸಂಸ್ಥೆಗಳಿಗೆ ಸಹಜವಾದ ವಾಹಿನಿಯಾಗಿದೆ ಎಂದು ಎಬಿಬಿ ಇಂಡಿಯಾ ಮೋಶನ್ ವ್ಯಾಪಾರ ಅಧ್ಯಕ್ಷ ಸಂಜೀವ್ ಅರೋರಾ ಹೇಳಿದ್ದಾರೆ.   ನಮ್ಮ ತಂಡ ಸಂಶೋಧನೆ ನಡೆಸಿ, ಮಾರ್ಕೆಟ್ ಪ್ಲೇಸ್ ಬೇಡಿಕೆಗಳನ್ನು ತಿಳಿದುಕೊಂಡಿದೆ, ಮತ್ತು ಗ್ರಾಹಕರ ಬದಲಾಗುತ್ತಿರುವ ಅವಶ್ಯಕತೆಗಳನ್ನು ಪೂರೈಸಲು ನಮ್ಮ ವೇದಿಕೆಯು ಸಮರ್ಥವಾಗಿದೆ ಎಂದು ನಂಬಿದ್ದೇವೆ. ನಮ್ಮ ಇ-ಕಾಮರ್ಸ್ ವೇದಿಕೆಯಾದ ಇ-ಮಾರ್ಟ್‍ನಲ್ಲಿ ನಮ್ಮ ಕೈಗಾರಿಕಾ ಮೋಟಾರ್‌ಗಳ ಆರಂಭವು ಭಾರತದಲ್ಲಿ ಮುಂಬರುವ ಬಿ2ಬಿ ಇ-ಕಾಮರ್ಸ್ ಕ್ರಾಂತಿಯೊಂದಿಗೆ ಡಿಜಿಟಲ್ ಉದ್ಯಮದ ಭವಿಷ್ಯವನ್ನು ಬರೆಯುವಲ್ಲಿ ನಮ್ಮ ಹೆಜ್ಜೆಯಾಗಿದೆ ಎಂದರು.

ಭಾರತದಲ್ಲಿ  LVಮೋಟಾರ್‌ಗಳನ್ನು ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗಿದ್ದು,ಇಮಾರ್ಟ್ ದೊಡ್ಡ ಮತ್ತು ಚಿಕ್ಕ ಸಂಸ್ಥೆಗಳಿಗೆ ತಮ್ಮ ಅವಶ್ಯಕತೆಯನ್ನು ಪೂರೈಸುವ ಉತ್ಪನ್ನಗಳನ್ನು ಪಡೆಯುವ ಅವಕಾಶ ನೀಡುತ್ತದೆ. ಈ ಆನ್‍ಲೈನ್ ಪೋರ್ಟಲ್ ಉತ್ಪನ್ನದ ನಿರ್ದಿಷ್ಟತೆಗಳ ಬಗ್ಗೆ ವಿವರವಾದ ಮಾಹಿತಿ ನೀಡುತ್ತದೆ.  ಪ್ರತಿ ಉತ್ಪನ್ನದ ಚಿತ್ರಗಳನ್ನು ಒದಗಿಸಿ, ಭೌತಿಕ ಮತ್ತು ಡಿಜಿಟಲ್ ಖರೀದಿಯ ಅನುಭವದ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತದೆ. ಗ್ರಾಹಕರ ಬದಲಾಗುವ ಬೇಡಿಕೆಗಳಿಗೆ ರಚಿಸಲಾದ ಇ-ಮಾರ್ಟ್‍ನಲ್ಲಿ ಪಟ್ಟಿ ಮಾಡಲಾಗಿರದ ಉತ್ಪನ್ನಗಳಿಗೆ ನಿರ್ದಿಷ್ಟತೆಗಳನ್ನು ಒದಗಿಸುವ ಅವಕಾಶವನ್ನೂ ನೀಡುತ್ತದೆ. ಸಂಸ್ಥೆಯು ವೇದಿಕೆಯಲ್ಲಿ ತನ್ನ ಉತ್ಪನ್ನಗಳ ಪಟ್ಟಿಯನ್ನು ವಿಸ್ತರಿಸಲು ಈ ಮಾಹಿತಿಯನ್ನು ಬಳಸಲು ಉದ್ದೇಶಿಸಿದೆ.

ಇ-ಮಾರ್ಟ್ ಅನ್ನು ಜುಲೈ 2020ರಂದು ಆರಂಭಿಸಲಾಗಿದ್ದು, ಸುಮಾರು 600 ವಿದ್ಯುತ್ ಉತ್ಪನ್ನಗಳನ್ನು ಹೊಂದಿದೆ. ಇದು ಡೆಸ್ಕ್ ಟಾಪ್ ಮತ್ತು ಮೊಬೈಲ್ ಬ್ರೌಸರ್ ಮೂಲಕ ಗ್ರಾಹಕಸ್ನೇಹಿ ಅನುಭವ ನೀಡುತ್ತದೆ ಮತ್ತು ಸುಭದ್ರ ಹಣ ಪಾವತಿಯ ವಿಧಾನಗಳನ್ನು ಹೊಂದಿದ್ದು, ಇದರಲ್ಲಿ ನೆಟ್ ಬ್ಯಾಂಕಿಂಗ್, ಇ-ವ್ಯಾಲೆಟ್, ಮತ್ತು ಯುಪಿಐ ಸೇರಿದೆ. ಜೊತೆಗೆ ಇದು ಗ್ರಾಹಕರ ಮಾಹಿತಿಯ ವಿಷಯದಲ್ಲಿ ಸಾಮಾನ್ಯ ದತ್ತಾಂಶ ಸಂರಕ್ಷಣಾ ಕ್ರಮಗಳನ್ನೂ ಅನುಸರಿಸುತ್ತದೆ.

ಭಾರತೀಯ ಮೋಟಾರ್ ಮತ್ತು ಡ್ರೈವ್ ಮಾರ್ಕೆಟ್ ಪ್ಲೇಸ್‍ಗೆ ಡಿಜಿಟಲ್ ಪರಿಹಾರ ಮತ್ತು ಸೇವೆಗಳನ್ನು ಆರಂಭಿಸಿದ ಮೊದಲ ಕಂಪನಿ ಎಬಿಬಿ, ಇದರಲ್ಲಿ ಐಗಿ ಮೋಟಾರ್‍ಗಳಿಗೆ ಎಬಿಬಿ ಎಬಿಲಿಟಿ ಸ್ಮಾರ್ಟ್ ಸೆನ್ಸರ್, ಡ್ರೈವ್‍ಗಳಿಗೆ ರಿಮೋಟ್ ಡಿಜಿಟಲ್ ಕಮೀಶನಿಂಗ್ ಮತ್ತು ಸೇವೆಗಳೂ ಸೇರಿದೆ. ಈ ಆನ್‍ಲೈನ್ ಉಪಸ್ಥಿತಿಯು ತನ್ನ ಗ್ರಾಹಕರಿಗೆ ಮತ್ತು ಪಾಲುದಾರರಿಗೆ ಡಿಜಿಟಲ್ ಅನುಭವದ ಪರಿಸರವ್ಯವಸ್ತೆಗೆ ಸೇರ್ಪಡೆಯಾಗಿದ್ದು, ಅದರಲ್ಲೂ ಮಿಥವಾಸ್ತವಿಕವಾಗಿ ಉದ್ಯಮ ನಡೆಸುವ ಈ ಸಮಯದಲ್ಲಿ ಬಹಳ ಮುಖ್ಯವಾಗಿದೆ.

ಎಬಿಬಿ ಅಗ್ರ ಜಾಗತಿಕ ತಂತ್ರಜ್ಞಾನ ಸಂಸ್ಥೆಯಾಗಿದ್ದು, ಹೆಚ್ಚು ಉತ್ಪಾದಕ, ಸಮರ್ಥನೀಯ ಭವಿಷ್ಯವನ್ನು ಸಾಧಿಸಲು ಸಮಾಜ ಮತ್ತು ಉದ್ಯಮದ ಪರಿವರ್ತನೆಗೆ ಶಕ್ತಿ ನೀಡುತ್ತಿದೆ. ತನ್ನ ಎಲೆಕ್ಟ್ರಿಫಿಕೇಷನ್, ರೊಬೊಟಿಕ್ಸ್, ಆಟೊಮೇಶನ್ ಮತ್ತು ಮೋಶನ್‍ಗಳ ಉತ್ಪನ್ನಗಳಿಗೆ ತನ್ನ ತಂತ್ರಾಂಶವನ್ನು ಸೇರಿಸಿ, ಎಬಿಬಿ ತಂತ್ರಜ್ಞಾನದ ಮಿತಿಗಳನ್ನು ಮೀರಿ ಸಾಧನೆಯನ್ನು ವರ್ಧಿಸುತ್ತಿದೆ. 130 ವರ್ಷಗಳಿಗೂ ಹೆಚ್ಚು ಉತ್ಕೃಷ್ಟತೆಯ ಅನುಭವದ ಇತಿಹಾಸದೊಂದಿಗೆ, ಎಬಿಬಿಯ ಯಶಸ್ಸಿಗೆ ಆಧಾರವಾಗಿದೆ 100 ಕ್ಕೂ ಹೆಚ್ಚು ದೇಶಗಳಲ್ಲಿರುವ 110000 ಪ್ರತಿಭಾನ್ವಿತ ಉದ್ಯೋಗಿಗಳು.