ಬೆಂಗಳೂರು(ಡಿ.12): ಆಟೋಮೊಬೈಲ್ ಕ್ಷೇತ್ರ ಹೊಸ ವರ್ಷವನ್ನ ಬರ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಹೀಗಾಗಿ 2018ರ ವರ್ಷಾಂತ್ಯದ ಮಾರಾಟಕ್ಕಾಗಿ ಭರ್ಜರಿ ಆಫರ್ ಘೋಷಿಸಿದೆ. ಈ ಮೂಲಕ ಸ್ಟಾಕ್ ಕ್ಲಿಯರ್ ಮಾಡಲು ಮುಂದಾಗಿದೆ. ಇನ್ನುಳಿದ 20 ದಿನ ಕಾರು ಖರೀದಿಸುವವರಿಗೆ ರಿಯಾಯಿತಿ ಸಿಗಲಿದೆ.

ಮಾರುತಿ ಸುಜುಕಿ ಆಫರ್
ಮಾರುತಿ ಸುಜುಕಿ ಸಂಸ್ಥೆಯಿಂದ ನೇರ ಡಿಸ್ಕೌಂಟ್ ಇರುವುದಿಲ್ಲ. ಆದರೆ ಡೀಲರ್‌ಗಳು ಇದೀಗ ವರ್ಷಾಂತ್ಯದ ಮಾರಾಟಕ್ಕಾಗಿ ಆಫರ್ ನೀಡಿದ್ದಾರೆ. ಇದು ಡೀಲರ್‌ನಿಂದ ಡೀಲರ್‌ಗೆ ವ್ಯತ್ಯಾಸವಾಗಲಿದೆ.
ಮಾರುತಿ ಸುಜುಕಿ ಆಲ್ಟೋ ಮೇಲೆ ಗರಿಷ್ಠ 30,000 ರೂಪಾಯಿ ವರೆಗೆ ರಿಯಾಯಿತಿ ಸಿಗಲಿದೆ
ಮಾರುತಿ ವ್ಯಾಗನ್ಆರ್ ಕಾರಿನ ಮೇಲೆ ಗರಿಷ್ಠ 40,000 ರೂಪಾಯಿ ವರೆಗೆ ರಿಯಾಯಿತಿ
ಮಾರುತಿ ಸೆಲೆರಿಯೋ ಕಾರಿನ ಮೇಲೆ ಗರಿಷ್ಠ 35,000 ರೂಪಾಯಿ ರಿಯಾಯಿತಿ
ಮಾರುತಿ ಸ್ವಿಫ್ಟ್ ಕಾರಿನ ಮೇಲೆ ಗರಿಷ್ಠ 35,000 ರೂಪಾಯಿ ರಿಯಾಯಿತಿ
ಮಾರುತಿ ಸುಜುಕಿ ಡಿಸೈರ್ ಮೇಲೆ ಗರಿಷ್ಠ 35,000 ರೂಪಾಯಿ ರಿಯಾಯಿತಿ

ಹ್ಯುಂಡೈ ಆಫರ್
ಹ್ಯುಂಡೈ ಇಯಾನ್ ಕಾರಿನ ಮೇಲೆ ಗರಿಷ್ಠ 65,000 ರೂಪಾಯಿ ರಿಯಾಯಿತಿ
ಹ್ಯುಂಡೈ ಐ10 ಕಾರಿ ಮೇಲೆ ಗರಿಷ್ಠ 85,000 ರೂಪಾಯಿ ರಿಯಾಯಿತಿ
ಹ್ಯುಂಡೈ ಎಕ್ಸೆಂಟ್ ಕಾರಿನ ಮೇಲೆ ಗರಿಷ್ಠ 90,000 ರೂಪಾಯಿ ರಿಯಾಯಿತಿ
ಹ್ಯುಂಡೈ ಐ20 ಆಕ್ಟೀವ್ ಕಾರಿನ ಮೇಲೆ 50,000 ರೂಪಾಯಿ ರಿಯಾಯಿತಿ
ಹ್ಯುಂಡೈ ವರ್ನಾ ಕಾರಿನ ಮೇಲೆ ಗರಿಷ್ಠ 50,000 ರೂಪಾಯಿ ರಿಯಾಯಿತಿ
ಹ್ಯುಂಡೈ ಎಲಾಂಟ್ರಾ - ಒಂದು ವರ್ಷ ವಿಮೆ ಸೇರಿದಂತೆ 30,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್
ಹ್ಯುಂಡೈ ಟಸ್ಕನ್ - ಒಂದು ವರ್ಷ ವಿಮೆ ಸೇರಿದಂತೆ 30,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್

ಹೊಂಡಾ ಆಫರ್
ಹೊಂಡಾ ಬ್ರಿಯೋ - 1 ರೂಪಾಯಿಗೆ  ವಿಮೆ ಹಾಗೂ 19,000 ರೂಪಾಯಿ ರಿಯಾಯಿತಿ
ಹೊಂಡಾ ಅಮೇಜ್ - 2 ವರ್ಷ ಹೆಚ್ಚುವರಿ ವಾರೆಂಟಿ , 3  ವರ್ಷ ಪ್ರೋ ಕಾರು ಸರ್ವೀಸ್ ಹಾಗೂ ಎಕ್ಸ್‌ಚೇಂಜ್
ಹೊಂಡಾ ಜಾಝ್ - ಗರಿಷ್ಠ 70,000 ರೂಪಾಯಿ ರಿಯಾಯಿತಿ, ಒಂದು ವರ್ಷ ವಿಮೆ ಹಾಗೂ 20,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್
ಹೊಂಡಾ ಸಿಟಿ -ಗರಿಷ್ಠ 62,000 ರೂಪಾಯಿ ರಿಯಾಯಿತಿ

ಫೋರ್ಡ್ ಇಂಡಿಯಾ
ಫೋರ್ಡ್ ಫ್ರೀ ಸ್ಟೈಲ್ -ಗರಿಷ್ಠ 40,000 ರೂಪಾಯಿ ರಿಯಾಯಿತಿ,ವಿಮೆಯಲ್ಲಿ ಡಿಸ್ಕೌಂಟ್
ಫೋರ್ಡ್ ಆಸ್ಪೈರ್ - 5 ವರ್ಷ ವಾರೆಂಟಿ
ಫೋರ್ಡ್ ಇಕೋಸ್ಪೋರ್ಟ್ - ಗರಿಷ್ಠ 50,000 ರೂಪಾಯಿ ರಿಯಾಯಿತಿ

ವಿಶೇಷ ಸೂಚನೆ: ಈ ಎಲ್ಲಾ ರಿಯಾಯಿತಿಗಳು ಡೀಲರ್‌ಗಳಿಂದ ಡೀಲರ್‌ಗೆ ವ್ಯತ್ಯಾಸವಾಗಲಿದೆ. ನಿರ್ದಿಷ್ಠ ಡೀಲರ್‌ಗಳಲ್ಲಿ ಮಾತ್ರ ಈ ರಿಯಾಯಿತಿ ಲಭ್ಯವಾಗಲಿದೆ.