Asianet Suvarna News Asianet Suvarna News

ರಾಜ್ಯದಲ್ಲಿ 2.11 ಕೋಟಿ ವಾಹನಗಳು: ಒಂದೇ ವರ್ಷದಲ್ಲಿ 17 ಲಕ್ಷ ಹೊಸ ವಾಹನ ನೋಂದಣಿ!

ರಾಜ್ಯದಲ್ಲಿ ಈಗ ಇವೆ 2.11 ಕೋಟಿ| ವಾಹನಗಳು: ಬೆಂಗ್ಳೂರಲ್ಲಿ 80 ಲಕ್ಷ!| ರಾಜ್ಯದಲ್ಲಿ ಒಂದೇ ವರ್ಷದಲ್ಲಿ 17 ಲಕ್ಷ ಹೊಸ ವಾಹನ ನೋಂದಣಿ

2 11 Crore vehicles in Karnataka 17 lakh new vehicles registered in a year
Author
Bangalore, First Published Apr 2, 2019, 9:21 AM IST

ಬೆಂಗಳೂರು[ಏ.02]: ‘ಸಾರ್ವಜನಿಕ ಸಾರಿಗೆ ಹೆಚ್ಚು ಬಳಸಿ’ ಎಂಬ ಪ್ರಚಾರಾಂದೋಲನ ಆರಂಭವಾಗಿರುವ ಈ ದಿನಗಳಲ್ಲಿ ರಾಜ್ಯದ ಒಟ್ಟು ವಾಹನಗಳ ಸಂಖ್ಯೆ 2.10 ಕೋಟಿ ಮೀರಿದೆ! ಈ ಪೈಕಿ ರಾಜಧಾನಿ ಬೆಂಗಳೂರು ನಗರವೊಂದೆಲ್ಲೇ ನೋಂದಣಿಯಾಗಿರುವ ವಾಹನಗಳ ಸಂಖ್ಯೆ 80 ಲಕ್ಷ ದಾಟಿದೆ!!

ಹೌದು. 2018ರ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 1.93 ಕೋಟಿ ವಾಹನಗಳಿದ್ದವು. ಈ ಪೈಕಿ ಬೆಂಗಳೂರು ನಗರದಲ್ಲೇ 74.06 ಲಕ್ಷ ವಾಹನಗಳು ಇದ್ದವು. 2019ರ ಮಾಚ್‌ರ್‍ ಅಂತ್ಯದ ವೇಳೆಗೆ ವಾಹನಗಳ ಸಂಖ್ಯೆ ಕ್ರಮವಾಗಿ 2.10 ಕೋಟಿ ಮತ್ತು 80.45 ಲಕ್ಷಕ್ಕೇರಿದೆ ಎಂದು ಖುದ್ದು ರಾಜ್ಯ ಸಾರಿಗೆ ಇಲಾಖೆ ಮಹತ್ವದ ಅಂಕಿ-ಅಂಶಗಳನ್ನು ಒದಗಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಾರಿಗೆ ಇಲಾಖೆ ಆಯುಕ್ತ ವಿ.ಪಿ. ಇಕ್ಕೇರಿ, ಅಂದರೆ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 16,90,860 ವಾಹನಗಳು ನೋಂದಣಿಯಾಗಿವೆ. ಈ ಪೈಕಿ 6,39,777 ವಾಹನಗಳು ರಾಜಧಾನಿ ಬೆಂಗಳೂರಿನಲ್ಲೇ ನೋಂದಣಿಯಾಗಿವೆ. ಕಳೆದ ವರ್ಷ ನಗರದಲ್ಲಿ ಪ್ರತಿ ನಿತ್ಯ ಸುಮಾರು 1752 ವಾಹನಗಳು ನೋಂದಣಿಯಾಗಿವೆ. ಇದರಲ್ಲಿ ದ್ವಿಚಕ್ರವಾಹನ ಹಾಗೂ ಕಾರುಗಳ ಸಂಖ್ಯೆ ಹೆಚ್ಚಿದೆ ಎಂದು ವಿವರಿಸಿದರು.

ರಾಜಸ್ವ ಸಂಗ್ರಹ ಉತ್ತಮ:

ಕಳೆದ ಆರ್ಥಿಕ ವರ್ಷದಲ್ಲಿ ಸಾರಿಗೆ ಇಲಾಖೆಗೆ ಉತ್ತಮ ರಾಜಸ್ವ ಆದಾಯ ಸಂಗ್ರಹವಾಗಿದೆ. 2018-19ನೇ ಸಾಲಿನಲ್ಲಿ ಇಲಾಖೆಗೆ 6656.42 ಕೋಟಿ ರು. ಆದಾಯ ಗುರಿ ನಿಗದಿ ಮಾಡಲಾಗಿತ್ತು. ಮಾಚ್‌ರ್‍ ಅಂತ್ಯದ ವೇಳೆಗೆ 6528.42 ಕೋಟಿ ರು. ಸಂಗ್ರಹಿಸಲಾಗಿದೆ. ಈ ಮೂಲಕ ಶೇ.98.07ರಷ್ಟುರಾಜಸ್ವ ಸಂಗ್ರಹಿಸಲಾಗಿದೆ. ಒಟ್ಟು ರಾಜಸ್ವ ಆದಾಯದಲ್ಲಿ ಶೇ.80ರಷ್ಟುವಾಹನಗಳ ನೋಂದಣಿಯಿಂದಲೇ ಸಂಗ್ರಹವಾಗಿದೆ. ಇದರ ಜತೆಗೆ ನಿಯಮ ಉಲ್ಲಂಘಿಸಿದ ವಾಹನಗಳಿಂದ ದಂಡದ ರೂಪದಲ್ಲಿ 160 ಕೋಟಿ ರು. ಸಂಗ್ರಹಿಸಲಾಗಿದೆ. ಸಿಬ್ಬಂದಿ ಕೊರತೆ ನಡುವೆಯೂ ರಾಜಸ್ವ ಸಂಗ್ರಹದಲ್ಲಿ ಇಲಾಖೆ ಉತ್ತಮ ಸಾಧನೆ ಮಾಡಿದೆ ಎಂದರು.

Follow Us:
Download App:
  • android
  • ios