ಖಾಲಿ ನೆಲದ ಮೇಲೆ ಕುಳಿತು ಪೂಜೆ ಮಾಡಬಾರದೆ?

ನಾವು ಆಚರಿಸುವ ಪ್ರತಿಯೊಂದೂ ಆಚಾರ ವಿಚಾರಗಳೂ ತಮ್ಮದೇ ವಿಶೇಷ ಅರ್ಥವನ್ನು ಪಡೆದಿದೆ. ಅದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಖಾಲಿ ನೆಲದ ಮೇಲೆ ಕೂತು ಪೂಜೆ ಮಾಜಬಾರದು ಎಂಬುದಕ್ಕೂ ಕಾರಣವಿದೆ. ಏನಕ್ಕೆ?

Why you should never drink water standing up

ಹಿಂದೂಗಳು ಯಾವುದೇ ಆಸನವಿಲ್ಲದೆ ನೇರವಾಗಿ ನೆಲದ ಮೇಲೆ ಕುಳಿತು ಸಾಮಾನ್ಯವಾಗಿ ಯಾವ ಧಾರ್ಮಿಕ ಕಾರ್ಯವನ್ನೂ ಮಾಡುವುದಿಲ್ಲ. ಸಂಧ್ಯಾವಂದನೆ, ನಿತ್ಯಪೂಜೆ, ಕೊನೆಗೆ ಶ್ರಾದ್ಧಕರ್ಮದವರೆಗೆ ಪ್ರತಿಯೊಂದಕ್ಕೂ ಆಸನಗಳನ್ನು ಬಳಸಲೇಬೇಕು. ಮರದ ಮಣೆ, ದರ್ಭಾಸನ, ಹುಲ್ಲಿನ ಚಾಪೆ, ಉಣ್ಣೆಯ ಕಂಬಳಿ, ಸನ್ಯಾಸಿಗಳಿಗೆ ಕೃಷ್ಣಾಜಿನ ಅಥವಾ ಹುಲಿಯ ಚರ್ಮ ಹೀಗೆ ಬೇರೆ ಬೇರೆ ಆಸನಗಳಿವೆ. ಕೆಲವು ಸಂದರ್ಭಗಳಿಗೆ ಕುಶಾಸನ ಅಥವಾ ದರ್ಭೆಯಿಂದ ಮಾಡಿದ ಆಸನ ಶ್ರೇಷ್ಠ. ಅದು ಸಾಕಷ್ಟು ಲಭ್ಯವಿಲ್ಲವೆಂದೇ ಕೆಲವು  ಧಾರ್ಮಿಕ ಕಾರ್ಯಗಳಲ್ಲಿ ಎರಡು ದರ್ಭೆಯ ಕಡ್ಡಿಯನ್ನು ಪೃಷ್ಠದ ಕೆಳಗೆ ಹಾಕಿಕೊಂಡು ಕುಳಿತುಕೊಳ್ಳುವುದಿದೆ.

ಧಾರ್ಮಿಕ ಕಾರ್ಯದಲ್ಲಿ ಆಚಮನ ಮಾಡುವುದೇಕೆ?

ಅದಿರಲಿ. ಏಕೆ ಆಸನಹಿಲ್ಲದೆ ಜಪ, ಪೂಜೆಗಳನ್ನು ಮಾಡಬಾರದು? 

ಏಕೆಂದರೆ, ಭೂಮಿಗೆ ತನ್ನಲ್ಲಿರುವ ಶಕ್ತಿಯನ್ನು ನಮ್ಮ ದೇಹಕ್ಕೆ ವರ್ಗಾವಣೆಗೊಳಿಸುವ ಹಾಗೂ ನಮ್ಮಲ್ಲಿರುವ ಶಕ್ತಿಯನ್ನು ತಾನು ಎಳೆದುಕೊಳ್ಳುವ ಹಿಶೇಷ ಗುಣವಿರುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಜಪ, ಪೂಜೆಗಳನ್ನು ಮಾಡಿದಾಗ ಅವುಗಳ ಪ್ರಭಾವದಿಂದ ನಮ್ಮಲ್ಲೊಂದು ಶಕ್ತಿ ಸಂಚಯವಾಗುತ್ತದೆ. ಅದನ್ನು ಭೂಮಿ ಹೀರಿಕೊಳ್ಳಬಾರದು ಮತ್ತು ಭೂಮಿಯಲ್ಲಿರುವ ಶಕ್ತಿ ನಮಗೆ ವರ್ಗಾವಣೆಯಾಗಿ ಜಪದಿಂದ ನಮಗೆ ದೊರಕುವ ಶಕ್ತಿಯ ಮೇಲೆ ವ್ಯತಿರಿಕ್ತ ಪ್ರಭಾವ ಉಂಟಾಗಬಾರದು ಎಂಬ ಕಾರಣಕ್ಕೆ ನಮಗೂ ಭೂಮಿಗೂ ಮಧ್ಯೆ ಒಂದು ತಡೆ ರೂಪದಲ್ಲಿ ಆಸನವನ್ನು ಬಳಸಲಾಗುತ್ತದೆ. 

ಹಾಗೆಯೇ ಕ್ರಿಮಿ, ಕೀಟಾದಿಗಳು ಕಚ್ಚದಿರಲಿ ಎಂದೂ ಆಸನಗಳನ್ನು ಬಳಸುವ ರೂಢಿ ಬಂದಿರಬಹುದು. ಇನ್ನು ಆಸನಗಳಲ್ಲಿ ಯಾವುದು ಶ್ರೇಷ್ಠ ಎಂಬ ಪ್ರಶ್ನೆಗೆ ಬೇರೆ ಬೇರೆ ವಾದದ ಉತ್ತರಗಳಿರಬಹುದು. ದರ್ಭಾಸನ ಮತ್ತು ಮರದಿಂದ ಮಾಡಿದ ಮಣೆಯನ್ನು ಸಾಮಾನ್ಯವಾಗಿ ಎಲ್ಲಾ ಧಾರ್ಮಿಕ ಕಾರ್ಯಗಳಿಗೂ ಬಳಸಬಹುದು. ಈಗೀಗ ಪ್ಲಾಸ್ಟಿಕ್ ಚಾಪೆಯನ್ನು ಬಳಸುವ ರೂಢಿ ಹೆಚ್ಚಿದೆ. ಅದು ಒಳ್ಳೆಯದಲ್ಲ. 

ಮಂತ್ರ ಜಪದಿಂದ ಏನು ಪ್ರಯೋಜನ?

- ಮಹಾಬಲ ಸೀತಾಳಬಾವಿ

Latest Videos
Follow Us:
Download App:
  • android
  • ios