ಧಾರ್ಮಿಕ ಕಾರ್ಯದಲ್ಲಿ ಆಚಮನ ಮಾಡುವುದೇಕೆ?

ಹಳೆ ಆಚಾರಗಳಿಗೆ ವೈಜ್ಞಾನಿಕ ಕಾರಣಗಳಿವೆ. ಪ್ರತಿಯೊಂದೂ ಆಚಾರ ವಿಚಾರಗಳಿಗೂ ತನ್ನದೇ ಮಹತ್ವವಿದೆ. ಅಂಥ ಕೆಲವು ಆಚರಣೆಗಳ ಮಹತ್ವದ ಬಗ್ಗೆ ಬೆಳಕು ಚೆಲ್ಲುವ ಲೇಖನವಿದು. ಧಾರ್ಮಿಕ ಕಾರ್ಯಗಳಲ್ಲಿ ಮಾಡೋ ಆಚಮನಕ್ಕೇನರ್ಥ?

 

Scientific reasons of achamanam while performing religious practices

ಸಂಧ್ಯಾವಂದನೆ, ದೇವರ ಪೂಜೆಯಿಂದ  ಆರಂಭಿಸಿ ಯಾವುದೇ ವಿಧದ ಧಾರ್ಮಿಕ ಕಾರ್ಯಗಳನ್ನು ಮಾಡುವಾಗ ಆರಂಭ ಹಾಗೂ ಅಂತ್ಯದಲ್ಲಿ ಕೈಗೆ ಮೂರು ಸಲ ನೀರು ಹಾಕಿಕೊಂಡು ಕುಡಿಯುವ ಪದ್ಧತಿುದೆ. ಕೆಲವೊಮ್ಮೆ ಮಧ್ಯೆ ಮಧ್ಯೆಯೂ ಹಿೀಗೆ ನೀರು ಕುಡಿಯಲು ಹೇಳಲಾಗಿದೆ. ಬೇರೆ ಬೇರೆ ವೇದ ಅಥವಾ ಪೂಜಾ ಪ್ರಯೋಗದಲ್ಲಿ ಇದಕ್ಕೆ ಹಿಭಿನ್ನ ಮಂತ್ರಗಳೂ ಇವೆ. ಕೆಲ ಪದ್ಧತಿಯಲ್ಲಿ ಋಗ್ವೇದಾಯ ಸ್ವಾಹಾ, ಯಜುರ್ವೇದಾಯ ಸ್ವಾಹಾ, ಸಾಮವೇದಾಯ ಸ್ವಾಹಾ ಎಂದರೆ, ಇನ್ನು ಕೆಲ ಪದ್ಧತಿಯಲ್ಲಿ ಕೇಶವಾಯ ಸ್ವಾಹಾ, ನಾರಾಯಣಾಯ ಸ್ವಾಹಾ.. ಎನ್ನುತ್ತ ನೀರು ಕುಡಿಯುತ್ತಾರೆ. ಇದಕ್ಕೆ ಆಚಮನ ಎಂದು ಹೆಸರು.

ಮಂತ್ರ, ಜಪದಿಂದ ಪ್ರಯೋಜನವಿದೆಯೇ?

ಏಕೆ ಈ ಆಚಮನ ಮಾಡಬೇಕು? 

ಬಾಯಿ ಒಣಗದೆ ಇರಲಿ, ಮಂತ್ರದ ಪದಗಳು ಸರಿಯಾಗಿ ಉಚ್ಛಾರವಾಗಲಿ ಮತ್ತು ದೇಹಕ್ಕೆ ಚೈತನ್ಯ ಸಿಗಲಿ ಎಂಬುದೇ ಇದರ ಹಿಂದಿನ ಉದ್ದೇಶ. ನಮ್ಮ ಬಾಯಿಂದ ಶಬ್ದ ಹೊರಡುವುದಕ್ಕೆ ಕಾರಣ ನಮ್ಮ ಗಂಟಲಿನಲ್ಲಿರುವ ಧ್ವನಿಪೆಟ್ಟಿಗೆಯಿಂದ ಹೊರಡುವ ತರಂಗಗಳು. ಈ ತರಂಗಗಳನ್ನು ನಮ್ಮ ದಂತ, ತುಟಿಗಳು, ಮೂಗು, ಬಾಯಿ ಹೀಗೆ ನಾನಾ ಅಂಗಗಳು ಬೇರೆ ಬೇರೆ ರೀತಿಯಲ್ಲಿ ಬಳಸಿ ಬೇರೆ ಬೇರೆ ರೀತಿಯ ಶಬ್ದಗಳನ್ನು ಹೊರಡಿಸುತ್ತವೆ. ಇವಕ್ಕೆಲ್ಲ ಅಗತ್ಯವಾಗಿ ಬೇಕಿರುವ ಒಂದು ಸಾಮಾನ್ಯ ಅಂಗ. ಅದು ನಾಲಿಗೆ. ಸರಿಯಾಗಿ ಮಾತನಾಡಲು ಸಾಧ್ಯವಾಗಬೇಕು ಅಂದರೆ ಜೊಲ್ಲಿನ ರಸದಿಂದ ನಾಲಿಗೆ ಸರಿಯಾಗಿ ಒದ್ದೆಯಾಗಿರಬೇಕು. ದೀರ್ಘಕಾಲದವರೆಗೆ ಮಂತ್ರ ಹೇಳುತ್ತಿದ್ದರೆ ನಾಲಿಗೆ ಒಣಗಿಹೋಗುತ್ತದೆ. ಅದರಿಂದ ಪದಗಳ ಉಚ್ಛಾರಣೆಯೂ ಸರಿಯಾಗಿ ಆಗುವುದಿಲ್ಲ. 

ದೇವರಿಗೆ ತೆಂಗಿನಕಾಯಿ ಒಡೆಯುವುದೇಕೆ?

ಹೀಗಾಗಿ ಆಚಮನದ ಮೂಲಕ ನಾಲಗೆ ಹಾಗೂ ಗಂಟಲನ್ನು ಒದ್ದೆಯಾಗಿರಿಸಿಕೊಳ್ಳುವ ಪದ್ಧತಿ ಬಂದಿದೆ. ದೀರ್ಘ ಸಮಯದವರೆಗೆ ನಡೆಯುವ ಪೂಜಾ ಕ್ರಮಗಳಲ್ಲಿ ದೇಹಕ್ಕೆ ಬೇಕಾದ ಶಕ್ತಿಯನ್ನೂ ಆಚಮನದ ಜಲ ತಕ್ಕಮಟ್ಟಿಗೆ ಒದಗಿಸುತ್ತದೆ.

- ಮಹಾಬಲ ಸೀತಾಳಬಾವಿ
 

Latest Videos
Follow Us:
Download App:
  • android
  • ios