ಸೋಮವಾರ ಹುಟ್ಟಿದ್ದೀರಾ? ನಿಮ್ಮಲ್ಲಿ ಕೆಲ ಗುಣಗಳು ತಾನೇತಾನಾಗಿ ಬಂದಿರೋದಕ್ಕೆ ಇದೇ ಕಾರಣ
ಸೋಮವಾರ ಜನಿಸಿದ ಜನರಿಗೆ ನೀರಿನ ಸಾಮೀಪ್ಯವೆಂದರೆ ಭಾರೀ ಇಷ್ಟವಾಗುತ್ತದೆ. ಹೌದೋ ಅಲ್ಲವೋ ವಿಮರ್ಶೆ ಮಾಡಿಕೊಳ್ಳಿ. ನಾವು ಜನಿಸುವ ವಾರ ಅಥವಾ ದಿನದ ಪ್ರಭಾವ ನಮ್ಮ ಮೇಲೆ ಅಗಾಧವಾಗಿರುವುದೇ ಇದಕ್ಕೆ ಕಾರಣ. ಸೋಮವಾರ ಜನಿಸಿದವರ ಮೇಲೆ ಚಂದ್ರ ಗ್ರಹದ ಪ್ರಭಾವ ಅಧಿಕವಾಗಿರುತ್ತದೆ.

ಹುಟ್ಟಿದ ದಿನ, ಸಮಯಕ್ಕೆ ಭಾರೀ ಮಹತ್ವವಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಪ್ರತಿಪಾದಿಸುತ್ತದೆ. ನಮ್ಮ ಜೀವನದ ಮಾರ್ಗ ಹಾಗೂ ವ್ಯಕ್ತಿತ್ವ ರೂಪಿಸುವಲ್ಲಿಯೂ ಅದರ ಪಾತ್ರವೇ ಅಗಾಧ ಎನ್ನುತ್ತದೆ. ಕೆಲವರಿಗೆ ಇದು ಹಾಸ್ಯಾಸ್ಪದ ಎನ್ನಿಸಬಹುದು. ಆದರೆ, ಜ್ಯೋತಿಷ್ಯ ಶಾಸ್ತ್ರ ಈ ಕುರಿತು ಸ್ಪಷ್ಟ ನಿಲುವು ಹೊಂದಿದ್ದು, ನಾವು ಜನಿಸುವ ದಿನ ಕೂಡ ನಮ್ಮ ಮೇಲೆ ಭಾರೀ ಪರಿಣಾಮ ಬೀರುವುದನ್ನು ಗುರುತಿಸಿದೆ. ಏಕೆಂದರೆ, ಪ್ರತಿಯೊಂದು ದಿನ ಅಥವಾ ವಾರದ ಮೇಲೆ ಗ್ರಹಗಳ ಪ್ರಭಾವವಿದೆ. ಎಲ್ಲವೂ ಒಂದೇ ರೀತಿಯಾಗಿರುವುದಿಲ್ಲ. ಹೀಗಾಗಿ, ಯಾವ ವಾರದಂದು ವ್ಯಕ್ತಿ ಹುಟ್ಟಿರುತ್ತಾನೋ ಆ ದಿನದ ಗ್ರಹಗಳ ಪ್ರಭಾವ ಆತನ ವ್ಯಕ್ತಿತ್ವ ನಿರ್ಮಿಸುವಲ್ಲಿ ಪ್ರಭಾವ ಬೀರುತ್ತದೆ. ಸೋಮವಾರ ಜನಿಸಿದವರು ಚಂದ್ರನ ಪ್ರಭಾವದಲ್ಲಿರುತ್ತಾರೆ. ಶಾಸ್ತ್ರದ ಪ್ರಕಾರ, ಚಂದ್ರ ಗ್ರಹ ಭಾವನೆಗಳು, ಅಂತಃದೃಷ್ಟಿ ಹಾಗೂ ಅಂತಃಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ. ಇದರ ಪರಿಣಾಮವಾಗಿ, ಸೋಮವಾರದಂದು ಜನಿಸಿರುವ ಜನ ತಮ್ಮ ಭಾವನೆಗಳೊಂದಿಗೆ ನಿಕಟವಾಗಿರುತ್ತಾರೆ. ಹಾಗೂ ಶಕ್ತಿಯುತ ಅಂತಃದೃಷ್ಟಿ ಹೊಂದಿರುತ್ತಾರೆ. ಇಷ್ಟೇ ಅಲ್ಲ, ಸೋಮವಾರದಂದು ಜನಿಸಿದ ವ್ಯಕ್ತಿಗಳಲ್ಲಿ ಇನ್ನೂ ಹಲವಾರು ವಿಶೇಷತೆಗಳು ಮನೆಮಾಡಿರುತ್ತವೆ.
• ಭಾವನಾತ್ಮಕ ಸೂಕ್ಷ್ಮತೆ (Emotional Sensitivity)
ಸೋಮವಾರ (Monday) ಜನಿಸಿದ (Born) ಜನರಲ್ಲಿ (People) ಕಂಡುಬರುವ ಅತಿ ಮುಖ್ಯ ಗುಣವೆಂದರೆ, ಭಾವನಾತ್ಮಕ ಸೂಕ್ಷ್ಮತೆ. ಇವರು ಸಿಕ್ಕಾಪಟ್ಟೆ ಕರುಣಾಳುವಾಗಿದ್ದು, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ. ಈ ಗುಣ ಇವರನ್ನು ಅತ್ಯುತ್ತಮ ಕೇಳುಗರನ್ನಾಗಿ ಹಾಗೂ ಕಾಳಜಿ (Care) ವಹಿಸುವವರನ್ನಾಗಿ ರೂಪಿಸುತ್ತದೆ. ಚಂದ್ರನ ಪ್ರಭಾವದಿಂದ ಇವರ ಭಾವನೆಗಳು (Feelings) ಉಬ್ಬರ ಮತ್ತು ಹರಿವಿನಿಂದ ಕೂಡಿರುತ್ತವೆ.
ಈ ರಾಶಿಯವರು ತುಂಬಾ ರೊಮ್ಯಾಂಟಿಕ್..! ನಿಮ್ಮದೂ ಇದೇ ರಾಶಿನಾ..?
• ಆರೈಕೆ (Nurturing) ಮಾಡುವ ಗುಣ
ಕತ್ತಲೆಯಲ್ಲಿ ಬೆಳಕನ್ನು ನೀಡುವ ಚಂದ್ರನ (Moon) ಹಾಗೆ ಸೋಮವಾರದಂದು ಜನಿಸಿರುವ ಜನರಲ್ಲಿ ಆರೈಕೆ ಮಾಡುವ ಹಾಗೂ ಬೆಂಬಲಿಸುವ ಗುಣ ಪ್ರಧಾನವಾಗಿರುತ್ತದೆ. ಪಾಲಕರಾಗಿ, ಸ್ನೇಹಿತರಾಗಿ ಅಥವಾ ವೈದ್ಯರಿಂದ ಹಿಡಿದು ಆರೋಗ್ಯ (Health) ವಲಯದ ಯಾವುದೇ ಕಾರ್ಯಕರ್ತರಾಗಿ ಅವರು ತಮ್ಮ ಪಾತ್ರವನ್ನು ಅತ್ಯಂತ ಕಾಳಜಿಯಿಂದ ನಿರ್ವಹಿಸುತ್ತಾರೆ. ಪ್ರೀತಪಾತ್ರರಿಗೆ ಕಂಫರ್ಟ್ ನೀಡುವುದರಲ್ಲಿ ಮುಂದಿರುತ್ತಾರೆ.
• ಅಂತಃದೃಷ್ಟಿಯ ಬುದ್ಧಿವಂತಿಕೆ (Intuitive Wisdom)
ಅಂತಃದೃಷ್ಟಿ ಮತ್ತು ತಮ್ಮ ಕರುಳಿನ ಕರೆಗೆ ಓಗೊಡುವ ಮಂದಿ ಇವರು. ಈ ಗುಣವೇ ಇವರನ್ನು ಸರಿಯಾದ ದಾರಿಯಲ್ಲಿ ನಡೆಸುತ್ತದೆ. ತರ್ಕವು ಬೇರೆಯದೇ ರೀತಿಯಲ್ಲಿದ್ದರೂ ತಮ್ಮ ಮನಸ್ಸು ಏನು ಹೇಳುತ್ತದೆಯೋ ಹಾಗೆ ನಡೆದುಕೊಳ್ಳುತ್ತಾರೆ. ಇದು ಇವರ ಪ್ರಕೃತಿ.
• ಬದಲಾವಣೆ (Change) ಮತ್ತು ಒಳಗೊಳ್ಳುವಿಕೆ (Adopt)
ಚಂದ್ರನ ಸ್ವರೂಪ ಬದಲಾಗುತ್ತಲೇ ಇರುವಂಥದ್ದು. ಹೀಗಾಗಿ, ಸೋಮವಾರ ಜನಿಸಿದವರು ಬದಲಾವಣೆಯನ್ನು ಬಯಸುತ್ತಾರೆ. ಜೀವನದ ಏರಿಳಿತಗಳನ್ನು ಮುಕ್ತವಾಗಿ ಸ್ವೀಕರಿಸುತ್ತಾರೆ. ಬದಲಾವಣೆ ಎನ್ನುವುದು ಇವರನ್ನು ಯಾವ ರೀತಿಯಲ್ಲೂ ಹೆದರಿಸುವುದಿಲ್ಲ. ಅದನ್ನು ಅವರು ಬೆಳವಣಿಗೆಗೆ ದೊರೆತ ಅವಕಾಶ ಎಂದು ಭಾವಿಸುತ್ತಾರೆ.
ಈ ವಸ್ತುಗಳನ್ನು ದಾನ ಮಾಡಿದರೆ ಹಣ ದುಪ್ಪಟ್ಟಾಗುತ್ತೆ
• ಜಲ ಸಂಬಂಧ (Water Relation)
ಚಂದ್ರ ಗ್ರಹ ಜಲತತ್ವದ ರಾಶಿಗಳನ್ನು ಆಳುತ್ತದೆ. ಅವು, ಕರ್ಕಾಟಕ, ವೃಶ್ಚಿಕ ಮತ್ತು ಮೀನ. ಸೋಮವಾರ ಜನಿಸಿದವರಿಗೆ ಜಲರಾಶಿಗಳ ಜತೆ ನಿಕಟ ಬಾಂಧವ್ಯ ಇರುತ್ತದೆ. ಇವರು ನದಿ, ಸರೋವರ, ಸಮುದ್ರದ ತಟಗಳಲ್ಲಿ ಶಾಂತಿ (Peace) ಪಡೆಯುತ್ತಾರೆ.
• ಸಹಾನುಭೂತಿಯ (Empathy) ಮಾತುಕತೆ
ಸಹಾನುಭೂತಿ ಇವರಲ್ಲಿರುವುದರಿಂದ ವಿಶೇಷ ಚೈತನ್ಯಭರಿತ ಮಾತುಗಳ ಮೂಲಕ ಅದನ್ನು ವ್ಯಕ್ತಪಡಿಸುವುದು ಇವರ ಗುಣ. ಇತರರೊಂದಿಗೆ ಆಳವಾದ ಭಾವನಾತ್ಮಕ ಸಾಂಗತ್ಯ (Relation) ಹೊಂದುವ ಸಾಮರ್ಥ್ಯ ಇವರಲ್ಲಿರುತ್ತದೆ. ಈ ಗುಣದಿಂದಾಗಿ ಇವರು ಅತ್ಯುತ್ತಮ ಆಪ್ತಸಮಾಲೋಚಕ ಅಥವಾ ಥೆರಪಿಸ್ಟ್ ಆಗಬಲ್ಲರು. ಅಗತ್ಯವಿರುವಾಗ ನೋವನ್ನು ಹೇಳಿಕೊಂಡು ಸಮಾಧಾನ ಪಡೆಯಬಲ್ಲ ಸ್ನೇಹಿತರಾಗಬಲ್ಲರು.