ಪುಷ್ಯ ನಕ್ಷತ್ರದಲ್ಲಿ ಸೂರ್ಯ ಸಂಚಾರ; ಬ್ರೈಟ್ ಆಗಲಿದೆ ಈ 3 ರಾಶಿಯವರ ಲೈಫ್..!
ಸೂರ್ಯನು ರಾಶಿ ಬದಲಾವಣೆ ಮಾಡುವುದರಿಂದ ಸಾಮಾನ್ಯವಾಗಿ ಎಲ್ಲಾ ರಾಶಿಯವರಿಗೆ ಪ್ರಯೋಜನಗಳು ಆಗಲಿವೆ. ಹಾಗೆಯೇ ಯಾವುದಾದರೂ ವಿಶೇಷ ನಕ್ಷತ್ರವನ್ನ ಸೂರ್ಯ ಪ್ರವೇಶ ಮಾಡಿದರೆ ಅದರಿಂದ ಅದೃಷ್ಟ ವೃದ್ಧಿಯಾಗುತ್ತದೆ. ಸಧ್ಯ ಪುಷ್ಯ ನಕ್ಷತ್ರದಲ್ಲಿ ಸೂರ್ಯನ ಸಂಚಾರವಿದ್ದು, ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಬರಲಿದೆ ಎಂಬ ಮಾಹಿತಿ ಇಲ್ಲಿದೆ.
ಸೂರ್ಯನು ರಾಶಿ ಬದಲಾವಣೆ ಮಾಡುವುದರಿಂದ ಸಾಮಾನ್ಯವಾಗಿ ಎಲ್ಲಾ ರಾಶಿಯವರಿಗೆ ಪ್ರಯೋಜನಗಳು ಆಗಲಿವೆ. ಹಾಗೆಯೇ ಯಾವುದಾದರೂ ವಿಶೇಷ ನಕ್ಷತ್ರ (star) ವನ್ನ ಸೂರ್ಯ ಪ್ರವೇಶ ಮಾಡಿದರೆ ಅದರಿಂದ ಅದೃಷ್ಟ (good luck) ವೃದ್ಧಿಯಾಗುತ್ತದೆ. ಸಧ್ಯ ಪುಷ್ಯ ನಕ್ಷತ್ರದಲ್ಲಿ ಸೂರ್ಯನ ಸಂಚಾರವಿದ್ದು, ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಬರಲಿದೆ ಎಂಬ ಮಾಹಿತಿ ಇಲ್ಲಿದೆ.
ಗ್ರಹಗಳ ರಾಜನಾದ ಸೂರ್ಯ (sun) ನು ನಿಗದಿನ ಅವಧಿಯಲ್ಲಿ ರಾಶಿಚಕ್ರವನ್ನು ಬದಲಾಯಿಸುವುದರ ಜೊತೆಗೆ ನಕ್ಷತ್ರ ಪುಂಜಗಳನ್ನು ಬದಲಾಯಿಸುತ್ತಾನೆ. ಜುಲೈ 20ರಂದು ಸೂರ್ಯನ ನಕ್ಷತ್ರ ಪುಷ್ಯ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಜ್ಯೋತಿಷ್ಯ (Astrology) ದಲ್ಲಿ ಸೂರ್ಯನ ನಕ್ಷತ್ರ ಪುಂಜದ ಸಂಕ್ರಮಣವು ಬಹಳ ಮುಖ್ಯವಾಗಿದೆ. ಸೂರ್ಯ ಪುಷ್ಯ ನಕ್ಷತ್ರಕ್ಕೆ ಪ್ರವೇಶಿಸುವುದು ಅನೇಕ ಜನರಿಗೆ ಧನಾತ್ಮಕ ಫಲಿತಾಂಶ (Positive result) ಗಳ ಸಂಕೇತವಾಗಿದೆ. ಸೂರ್ಯನ ನಕ್ಷತ್ರಪುಂಜದ ಬದಲಾವಣೆಯಿಂದ ಈ ರಾಶಿಚಕ್ರ (Zodiac) ದವರ ಜೀವನವು ಬದಲಾವಣೆಯಾಗುತ್ತೆ.
ವೃಷಭ ರಾಶಿ (Taurus)
ವೃಷಭ ರಾಶಿಯವರಿಗೆ ಸೂರ್ಯನ ಸಂಚಾರದಿಂದ ವಿಶೇಷ ಲಾಭ (Special benefit) ಗಳು ದೊರೆಯುತ್ತದೆ. ನಿಮ್ಮ ಅಪಾಯ-ತೆಗೆದುಕೊಳ್ಳುವ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ಈ ಹಂತದಲ್ಲಿ ನೀವು ಪ್ರಮುಖ ಕಾರ್ಯಗಳನ್ನು ಸಾಧಿಸುತ್ತೀರಿ. ಸೂರ್ಯನ ಸ್ಥಾನವು ನಿಮಗೆ ಸಂತೋಷ (happiness) ಮತ್ತು ಗೌರವ (respect) ನೀಡುತ್ತದೆ. ಕೆಲಸದ ಸ್ಥಳಗಳಲ್ಲಿ ನೀವು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯಬಹುದು. ಗೌರವ ಹೆಚ್ಚಳವಾಗಲಿದೆ. ಆದಾಯ (income) ದ ಸಾಧನಗಳು ಹೆಚ್ಚಾಗುತ್ತವೆ.
ಮಂಗಳ ಸಂಕ್ರಮಣ; ಈ ಐದು ರಾಶಿಯವರಿಗೆ ಜೇಬು ತುಂಬ ಹಣ..!
ಮಿಥುನ ರಾಶಿ (Gemini)
ಪುಷ್ಯ ನಕ್ಷತ್ರದಲ್ಲಿ ಸೂರ್ಯನ ಸಂಚಾರವು ನಿಮ್ಮ ಕೌಶಲ್ಯ (Skill) ಮತ್ತು ಪ್ರತಿಭೆ (talent) ಯನ್ನು ಹೆಚ್ಚಿಸುತ್ತದೆ. ಹಣಕಾಸಿನ ಯಶಸ್ಸು (success) ಹತ್ತಿರದಲ್ಲಿದೆ ಮತ್ತು ಈ ಸಮಯದಲ್ಲಿ ನಿಮ್ಮ ಕುಟುಂಬ (family) ವು ಬೆಂಬಲವನ್ನು ನೀಡುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದವರು ಹೇರಳವಾದ ಲಾಭವನ್ನು ಪಡೆಯುತ್ತಾರೆ ಮತ್ತು ಅವರ ಪ್ರಯತ್ನಗಳಲ್ಲಿ ಮಿಂಚುತ್ತಾರೆ. ನಿಮ್ಮ ಎದುರಾಳಿ (opponent) ಗಳ ಮೇಲೆ ಜಯ ಸಾಧಿಸುವಿರಿ. ಕೌಟುಂಬಿಕ ಜೀವನ (life) ಸುಖಮಯವಾಗಿರುತ್ತದೆ. ಹೊಸ ಜನರನ್ನು ಭೇಟಿ ಮಾಡಬಹುದು. ಆರ್ಥಿಕ ಏಳಿಗೆ (Financial prosperity) ಯತ್ತ ಜೀವನ ಸಾಗಲಿದೆ.
ವೃಶ್ಚಿಕ ರಾಶಿ (Scorpio)
ಸೂರ್ಯನ ಸಂಕ್ರಮಣದ ಸಮಯದಲ್ಲಿ ನಿಮ್ಮಲ್ಲಿ ಸಕಾರಾತ್ಮಕತೆ (positivity) ಯ ಸಂವಹನ ಇರುತ್ತದೆ. ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ನಿಮ್ಮ ಶಕ್ತಿ ಮತ್ತು ನಿಮ್ಮ ಕಾರ್ಯಗಳು ಇತರರ ಮೇಲೆ ಶಾಶ್ವತ (everlasting) ವಾದ ಪ್ರಭಾವ ಬೀರುತ್ತವೆ. ಸೂರ್ಯನ ಆಶೀರ್ವಾದದಿಂದ ನೀವು ಹಣ (money) ವನ್ನು ಗಳಿಸುವ ಸಾಧ್ಯತೆಯಿದೆ.
ಶನಿದೇವನ ಕೋಪದಿಂದ ಕೆಲಸದಲ್ಲಿ ಅಡಚಣೆ; ಈ ವಿಧಾನಗಳಿಂದ ನಿಮ್ಮ ಸಂಕಷ್ಟ ದೂರ..!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.