ಇಂದು ವಿಚಾರವೊಂದರಿಂದ ನೀವು ಕೊರಗಬೇಕಾದ ಸ್ಥಿತಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Jul 2018, 7:12 AM IST
Special Bhavishya July 26
Highlights


ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಧನಸ್ಸು ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಇಂದು ವಿಚಾರವೊಂದರಿಂದ ನೀವು ಕೊರಗಬೇಕಾದ ಸ್ಥಿತಿ 

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಧನಸ್ಸು ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಇಂದು ನಿಮ್ಮ ಮನಸ್ಸು ಸ್ವಲ್ಪ ಆತಂಕದಿಂದ ಇರಲಿದೆ. ಮನೋ ವಿಕಾರವಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸಗಳು ಕಷ್ಟವೆನಿಸುತ್ತವೆ. ಯಾವುದರಲ್ಲೂ ನಿರಾಸಕ್ತಿ ಮೂಡುತ್ತದೆ. ಸಾಮಾನ್ಯ ದಿನ.

ದೋಷಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ : ಇಂದು ನಿಮ್ಮಲ್ಲಿ ಒಂದು ಹೊಸ ಉತ್ಸಾಹ ಮೂಡುತ್ತದೆ. ಸಹೋದರಿಯರು ನಿಮಗೆ ಗೈಡ್ ಮಾಡ್ತಾರೆ. ನಿಮ್ಮ ಆಪ್ತ ಸಂಗಾತಿ ನಿಮ್ಮಲ್ಲಿ ಹೊಸ ಚೈತನ್ಯ ತುಂಬುತ್ತಾರೆ. ಅಂದಹಾಗೆ ಇಂದು ತಾಯಿಯೊಡನೆ ಒಂದು ಗಂಭೀರ ವಿಯಷ ಚರ್ಚಿಸುವ ಸಾಧ್ಯತೆ ಇದೆ.
 
ದೋಷ ಪರಿಹಾರ : ದುರ್ಗಾ ದೇವಿಗೆ 5 ನಮಸ್ಕಾರ ಹಾಕಿಬನ್ನಿ.

ಮಿಥುನ : ಇಂದು ನೀವು ನಿಮ್ಮ ಬುದ್ಧಿ ಶಕ್ತಿಯನ್ನು ಸರಿಯಾಗಿ ಪ್ರಯೋಗ ಮಾಡಲಿದ್ದೀರಿ. ನಿಮ್ಮಲ್ಲಿರುವ ಸದ್ಗುಣ ಇತರರಿಗೆ ಆದರ್ಶವಾಗಲಿದೆ. ಕೆಲ ಸಣ್ಣಪುಟ್ಟ ಸಮಸ್ಯೆ ಇದ್ದೇ ಇರತ್ತೆ. ಹೆಚ್ಚು ಯೋಚನೆ ಬೇಡ.
    

ದೋಷ ಪರಿಹಾರ : ನಾರಾಯಣ ಮಂತ್ರ ಅಥವಾ ಸ್ಮರಣೆ ಮಾಡಿ

ಕಟಕ : ಇಂದು ನಿಮ್ಮ ಮನಸ್ಸು ಸ್ವಲ್ಪ ಖಿನ್ನವಾಗಿರಲಿದೆ. ಒಂದು ವಿಷಯಕ್ಕಾಗಿ ತುಂಬಾ ಕೊರಗುವ ಸಾಧ್ಯತೆ ಇದೆ. ಹತ್ತಿರದ ಬಂಧುಗಳು ಧೈರ್ಯ ತುಂಬುತ್ತಾರೆ. ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಆಗ ನಿಮ್ಮ ನೋವು ಸ್ವಲ್ಪ ಮರೆಯಾಗುತ್ತದೆ.
  
ದೋಷ ಪರಿಹಾರ : ದುರ್ಗಾ ದೇವಸ್ಥಾನಕ್ಕೆ ಕ್ಷೀರ ಸಮರ್ಪಣೆ ಮಾಡಿ. 

ಸಿಂಹ : ಇಂದು ನೀವು ಮಾಡಿದ ಒಂದೇ ಒಂದು ಉಪಕಾರ ನಿಮ್ಮನ್ನು ಗೌರವಿಸುವಂತೆ ಮಾಡುತ್ತದೆ. ಪುಟ್ಟ ವಿಯಷವನ್ನೂ ಕಡೆಗಾಣಿಸಬೇಡಿ. ಶ್ರದ್ಧೆಯಿಂದಲೇ ಮಾಡಿ. ಆ ಪುಟ್ಟ ಸಂಗತಿಯೇ ನಿಮ್ಮನ್ನು ವಿಶೇಷ ವ್ಯಕ್ತಿಯನ್ನಾಗಿ ಮಾಡುತ್ತದೆ.

ದೋಷ ಪರಿಹಾರ : ಅರ್ಧನಾರೀಶ್ವರ ದರ್ಶನ ಮಾಡಿ. 

ಕನ್ಯಾ : ಒಂದು ಪುಟ್ಟ ಸಹಾಯ ಮಾಡುವುದರ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ಜೊತೆಗೆ ನಿಮ್ಮ ರಾಶಿಯವರಲ್ಲಿ ಒಂದು ಗುಣ ಸ್ತ್ರೀಯರನ್ನು ಓಲೈಸುವುದು. ಸ್ತ್ರೀಯರಿಗಾಗಿ ತುಂಬಾ ಶ್ರಮಿಸಬೇಕಾಗುತ್ತದೆ. ನಿಮ್ಮ ಕಾರ್ಯವೂ ಯಶಸ್ವಿಯಾಗಲಿದೆ. ವಾಹನ ತೊಂದೆರೆಯಾಗಬಹುದು.

  
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ.

ತುಲಾ :  ಸಹೋದರಿಯರಲ್ಲಿ ಭಿನ್ನಾಭಿಪ್ರಾಯ ಇರಲಿದೆ, ನಿಮ್ಮ ಕಾರ್ಯಕ್ಕೆ ಸ್ವಲ್ಪ ಅಡ್ಡಿಗಳೂ ಆಗಲಿವೆ. ಸಜ್ಜನರ ಸಹವಾಸ. ಗ್ರಹಣದ ತಯಾರಿಯಲ್ಲಿ ದಿನ ಕಳೆದುಹೋಗಲಿದೆ.

ದೋಷ ಪರಿಹಾರ : ಲಕ್ಷ್ಮೀ ಆರಾಧನೆ ಮಾಡಿ

ವೃಶ್ಚಿಕ : ಇಂದು ನಿಮ್ಮ ಪಾಲಿಗೆ ಸ್ವಲ್ಪ ನಿರಾಶಾದಾಯಕ ದಿನ, ನಿಮಗೆ ಬರಬೇಕಿದ್ದ ಅಥವ ದಕ್ಕಬೇಕಿದ್ದ ಅವಕಾಶ ಅನ್ಯರ ಕೈ ಸೇರುತ್ತದೆ. ಹತಾಶರಾಗುವ ದಿನ, ನಿಮ್ಮ ದಿನದ ಪ್ರಾರಂಭಕ್ಕೂ ಮುನ್ನ ಸುಬ್ರಹ್ಮಣ್ಯ ಸೇವೆ ಮಾಡಿ.


ದೋಷ ಪರಿಹಾರ : ಸುಬ್ರಹ್ಮಣ್ಯ ಸ್ವಾಮಿ ದರ್ಶನ ಮಾಡಿ

ಧನಸ್ಸು : ಆತ್ಮೀಯರೇ ಇಂದು ಉದ್ಯೋಗದಲ್ಲಿ ಏರುಪೇರು ಕಾಣಬಹುದು, ಮಡದಿಯಿಂದ ತುಂಬು ಸಹಕಾರ, ನಿಮ್ಮ ನೆಚ್ಚಿನ ಸಂಗಾತಿ ನಿಮ್ಮ ಕಾರ್ಯ ಲಾಭಕ್ಕೆ ಸಹಕಾರಿಯಾಗಬಹುದು. ಮಿತ್ರರಿಂದ ಸಹಾಯ ದೊರೆಯಲಿದೆ. ಆಹಾರದಲ್ಲಿ ವ್ಯತ್ಯಯವಾಗಬಹುದು. ಎಚ್ಚರವಹಿಸಿ


ದೋಷ ಪರಿಹಾರ : ಶಿವಾಯನಮ: ಎಂಬ ಪಂಚಾಕ್ಷರಿ ಮಂತ್ರ 108 ಬಾರಿ ಪಠಿಸಿ

ಮಕರ :  ಆತ್ಮೀಯರೇ ನಿಮ್ಮ ಸಂಗಾತಿಯಿಂದ ವ್ಯಾಪಾರದಲ್ಲಿ ಲಾಭ, ನೀರಿನ ವ್ಯಾಪಾರಿಗಳಿಗೆ ಲಾಭದ ದಿನ ಉದ್ಯೋಗದಲ್ಲಿ ಉತ್ತಮ ಪ್ರಗತಿ, ಸ್ವಲ್ಪ ಮಟ್ಟಿಗೆ ಧನ ವ್ಯಯ, ಉನ್ನತ ಶಿಕ್ಷಣಕ್ಕೆ ತಯಾರಿ ನಡೆಸುತ್ತೀರಿ. ಹಿರಿಯ ಜೀವವೊಂದು ನಿಮ್ಮನ್ನು ರಕ್ಷಣೆ ಮಾಡುತ್ತದೆ.
  
ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ದೀಪ ಸಮರ್ಪಣೆ ಮಾಡಿದಲ್ಲಿ ನಿಮ್ಮ ಸಮಸ್ಯೆ ಪರಿಹಾರ.

ಕುಂಭ : ನಿಮ್ಮ ರಾಶ್ಯಾಧಿಪತಿ ಶನಿಯುಕ್ತನಾಗಿರುವುದರಿಂದ ಮನಸ್ಸಿಗೆ ಬೇಸರ, ಆರೋಗ್ಯದಲ್ಲಿ ವ್ಯತ್ಯಯ, ಹಾಗೂ ನಿಮ್ಮ ಧನ ವ್ಯಯವಾಗುವ ಸಾಧ್ಯತೆ ಇದೆ. ನಾಳೆ ಗ್ರಹಣದ ಪ್ರಭಾವ ಇಂದಿನಿಂದಲೇ ಶುರುವಾಗಲಿದೆ. ಆದಷ್ಟು ಶಿವ ಸ್ಮರಣೆಯಲ್ಲಿ ದಿನವನ್ನು ದೂಡಿ. 


ದೋಷ ಪರಿಹಾರ : ಶಿವ ಅಥವಾ ಶನಿ ದೇವಸ್ಥಾನಕ್ಕೆ ಎಳ್ಳು ದಾನ ಮಾಡಿ
  
ಮೀನ : ಸ್ನೇಹಿತರೆ ಇಂದು ನಿಮ್ಮ ದಿನದಲ್ಲಿ ಸಂಪೂರ್ಣ ಬದಲಾವಣೆಯಾಗಬಹುದು, ನೀವು ಯೋಜಿಸಿದ ಕಾರ್ಯ ಇನ್ನೊಬ್ಬರ ಕೈ ಸೇರುವ ಸಾಧ್ಯತೆ ಇದೆ. ದುಷ್ಟ  ಜನರ ಸಹವಾಸ ನಿಮ್ಮನ್ನು ಹೈರಾಣು ಮಾಡುತ್ತದೆ. ಆದಷ್ಟು ಹಣ ಕೊಟ್ಟು ಮೋಸಹೋಗಬೇಡಿ.
 
ದೋಷ ಪರಿಹಾರ : ಗುರು ದರ್ಶನ ಮಾಡಿ

ಗೀತಾಸುತ.

loader