ಇಂದು ಈ ರಾಶಿಯವರಿಗೆ ಸಂತೋಷದಾಯಕ ದಿನ

ಮೇಷ
ದಿನವಿಡೀ ಸಂತೋಷದಿಂದ ಇರುವಿರಿ.
ಹತ್ತಿರದ ಬಂಧುಗಳ ಆಗಮನ. ತಾಯಿಯ
ಆರೋಗ್ಯದಲ್ಲಿ ಚೇತರಿಕೆ. ಧನಾಗಮನ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ
ಅಂದುಕೊಂಡ ಕಾರ್ಯಗಳಲ್ಲಿ ಕೊಂಚ ಹಿನ್ನಡೆ
ಏರ್ಪಡಲಿದೆ. ಸ್ನೇಹಿತರೊಂದಿಗೆ ಕಠಿಣವಾಗಿ
ಮಾತನಾಡುವುದು ಬೇಡ. ಧೈರ್ಯ ವೃದ್ಧಿ.

ಮಿಥುನ
ತಾಳ್ಮೆ ಹೆಚ್ಚಲಿದೆ. ಸಣ್ಣ ಉಳಿತಾಯಕ್ಕೆ ಮನಸ್ಸು
ಮಾಡುವಿರಿ. ಸಮಯಕ್ಕೆ ಸರಿಯಾಗಿ ಎಲ್ಲಾ
ಕೆಲಸಗಳನ್ನೂ ಮಾಡಿ ಮುಗಿಸುವುದು ಒಳಿತು.

ಕಟಕ
ಆಟೋಟಗಳಲ್ಲಿ ಭಾಗಿಯಾಗುವಿರಿ. ಸಿನಿಮಾ
ಕ್ಷೇತ್ರದಲ್ಲಿರುವವರಿಗೆ ಶುಭ ಸುದ್ದಿ ತಿಳಿಯ
ಲಿದೆ. ಗೃಹಿಣಿಯರ ಆರೋಗ್ಯದಲ್ಲಿ ಚೇತರಿಕೆ.

ಸಿಂಹ
ಸಾಫ್ಟ್‌ವೇರ್ ಕ್ಷೇತ್ರದಲ್ಲಿರುವವರಿಗೆ ಅಧಿಕ
ಕೆಲಸದ ಒತ್ತಡ. ಅನಾವಶ್ಯಕ ಖರ್ಚುಗಳು
ಹೆಚ್ಚಾಗಲಿವೆ. ವ್ಯಾಪಾರದಲ್ಲಿ ಅಲ್ಪ ಲಾಭ.

ಕನ್ಯಾ
ಮಾಡುವ ಕೆಲಸದಲ್ಲಿ ಚುರುಕುತನವಿರಲಿ.
ಆಸಕ್ತಿಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳು
ವಿರಿ. ಮಕ್ಕಳ ವಿಚಾರದಲ್ಲಿ ತಾಳ್ಮೆಯಿಂದಿರಿ.

ತುಲಾ 
ಹಳೆಯ ಸ್ನೇಹಿತರ ಅನಿರೀಕ್ಷಿತ ಭೇಟಿ
ಯಾಗಲಿದೆ. ದೀರ್ಘಕಾಲದ ಭೂ ವ್ಯಾಜ್ಯಕ್ಕೆ
ತಾರ್ಕಿಕ ಅಂತ್ಯ ದೊರೆಯಲಿದೆ. ಶುಭ ಫಲ.

ವೃಶ್ಚಿಕ
ಸರಕಾರಿ ನೌಕರರಿಗೆ ಖರ್ಚು ಹೆಚ್ಚಲಿದೆ.
ಆಲಾಸಿತನದಿಂದ ಹೊರಗೆ ಬರುವುದು
ಒಳಿತು. ಕಣ್ಣಿನ ಆರೋಗ್ಯದಲ್ಲಿ ವ್ಯತ್ಯಯ. 

ಧನುಸ್ಸು
ವೈದ್ಯರಿಗೆ ಧನಾಗಮನವಾಗಲಿದೆ. ಕ್ರೀಡಾ
ಕ್ಷೇತ್ರದಲ್ಲಿರುವವರಿಗೆ ಈ ದಿನ ಸ್ವಲ್ಪ ಹಿನ್ನಡೆ
ಯಾಗಲಿದೆ. ಅಸಹಾಯಕರಿಗೆ ನೆರವಾಗುವಿರಿ.

ಮಕರ
ಹೊಸ ಮೊಬೈಲ್ ಕೊಳ್ಳಲಿದ್ದೀರಿ. ತಲೆ ನೋವು
ಗಳು ಕಡಿಮೆಯಾಗಲಿವೆ. ಕಲಾವಿದರಿಗೆ
ಒಳ್ಳೆಯ ಅವಕಾಶ ಲಭ್ಯವಾಗಲಿದೆ.

ಕುಂಭ
ದೂರದ ಪ್ರಯಾಣವನ್ನು ಮುಂದೂಡುವುದು
ಒಳಿತು. ಮಕ್ಕಳ ಆರೋಗ್ಯದ ಮೇಲೆ ಕಾಳಜಿ
ಇರಲಿ. ವಿದ್ಯಾರ್ಥಿಗಳಿಗೆ ಶುಭವಾಗಲಿದೆ.

ಮೀನ
ದೀರ್ಘಕಾಲದ ಸಮಸ್ಯೆಗಳಿಗೆ ಮುಕ್ತಿ ದೊರೆ
ಯಲಿದೆ. ವ್ಯಸನಗಳಿಂದ ದೂರ ಇರುವುದು
 ಒಳ್ಳೆಯದು. ಸಂಸಾರದಲ್ಲಿ ಶಾಂತಿ