ಈ ರಾಶಿಯವರಿಂದ ನಡೆಯಲಿದೆ ಒಂದು ಮಹತ್ವದ ಕಾರ್ಯ..!

First Published 18, Jun 2018, 7:04 AM IST
Dina Bhavishya June 18
Highlights

ಈ ರಾಶಿಯವರಿಂದ ನಡೆಯಲಿದೆ ಒಂದು ಮಹತ್ವದ ಕಾರ್ಯ..!

ಈ ರಾಶಿಯವರಿಂದ ನಡೆಯಲಿದೆ ಒಂದು ಮಹತ್ವದ ಕಾರ್ಯ..!

ಮೇಷ
ಮಿತ್ರರು ನಿಮ್ಮ ಕಷ್ಟ ಕಾಲಕ್ಕೆ ಆಗಲಿದ್ದಾರೆ.
ಈಗ ನಿಮ್ಮಿಂದ ಹೊಸದೊಂದು ಮಹತ್ವದ
ಕೆಲಸವು ಆಗಲಿದೆ. ಖುಷಿಯನ್ನು ಹಂಚಿಕೊಳ್ಳಿ.

ವೃಷಭ
ಕಾಡುವ ಸಮಸ್ಯೆಗಳನ್ನು ಪಕ್ಕಕ್ಕೆ ಇಡಿ. ಅವು
ನಿಮ್ಮ ಮನಃಶಾಂತಿಯನ್ನು ಕದಡುವುದು.
ಅಲ್ಲದೇ ಅದರಿಂದ ಆರೋಗ್ಯವೂ ಹಾಳು.

ಮಿಥುನ
ಕಷ್ಟದ ದಿನಗಳು ನಿಮಗೇನು ಹೊಸತಲ್ಲ.
ಆದರೂ ಈ ಬಾರಿ ಕಷ್ಟದ ದಿನಗಳು ಕ್ರಮೇಣ
ದೂರಾಗಲಿದೆ. ಜಾಗ್ರತೆಯಿಂದ ನಿರೀಕ್ಷಿಸಿರಿ.

ಕಟಕ
ಹತ್ತಿರದ ಬಂಧುಗಳಿಗಿಂತ ದೂರದ ಸ್ನೇಹಿತರೇ
ಹೆಚ್ಚು ಆಪ್ಯಾಯರು ಎಂಬುದು ಇತ್ತೀಚಿನ
ಘಟನೆಗಳಿಂದ ನಿಮ್ಮ ಅರಿವಿಗೆ ಬರಲಿದೆ.

ಸಿಂಹ
ವಾಸ್ತುವಿನ ದೋಷದ ಬಗ್ಗೆ ಚಿಂತೆ ಬೇಡ.
ಸುಖಾಸುಮ್ಮನೆ ಹಣವನ್ನು ಖರ್ಚು ಮಾಡ
ಬೇಡಿ. ಸಾಧ್ಯವಾದರೆ ಅನ್ನದಾನ ಮಾಡಿ.

ಕನ್ಯಾ
ಹಾಡುಗಾರಿಕೆಯನ್ನು ಮುಂದುವರಿಸಿ. ಅದ
ರಿಂದ ನಿಮ್ಮಲ್ಲಿನ ಈ ಪ್ರತಿಭೆಗೆ ಬೆಲೆ ಬರಲಿದೆ.
ಇಂದು ಉತ್ತಮ ವೇದಿಕೆಯೊಂದು ಸಿಗಲಿದೆ.

ತುಲಾ 
ಕಲೆ ಮತ್ತು ಸಂಗೀತ ಕ್ಷೇತ್ರಗಳಲ್ಲಿರುವವರಿಗೆ
ನೆಮ್ಮದಿಯ ದಿನ. ಗೃಹಿಣಿಯರಿಗೆ ಪ್ರಶಂಸೆ
ದಿನವಿದು. ಓಡಾಟ ಹೆಚ್ಚು. ಖುಷಿಯಿದೆ.

ವೃಶ್ಚಿಕ
ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿ
ಕೊಳ್ಳುವುದು ಲೇಸು. ಈ ದಿನವು ನಿಮಗೆ ಶುಭ
ದಿನವಾಗಿದೆ. ಇಂದು ನಿಮ್ಮದೇ ದಿನವಾಗಿದೆ. 

ಧನುಸ್ಸು
ಹಣಕಾಸಿನ ವಿಷಯದಲ್ಲಿ ಉಂಟಾಗಿದ್ದ
ಆತಂಕ ದೂರಾಗಲಿದೆ. ಬರಬೇಕಾದ ಹಣವು
ಇಂದು ಸಿಗುವ ಲಕ್ಷಣಗಳೂ ಹೆಚ್ಚಾಗಿವೆ.

ಮಕರ
ಹೊಸ ತರಹದ ಆಲೋಚನೆಗಳು ನಿಮ್ಮನ್ನು
ಹುರಿದುಂಬಿಸಲಿದೆ. ಮಾನಸಿಕವಾಗಿ ಧೈರ್ಯ
ವಂತರಾಗುತ್ತೀರಿ. ಕಾರ್ಯ ಸಿದ್ಧಿಯ ದಿನ.

ಕುಂಭ
ಸಣ್ಣಪುಟ್ಟ ಘಟನೆಗಳು ನಿಮ್ಮಲ್ಲಿನ ತಾಳ್ಮೆಯನ್ನು
ಕದಡಿದೆ. ಅವು ಆಕಸ್ಮಿಕವಷ್ಟೆ. ಹಾಗಾಗಿ ಅದ
ಕ್ಕಾಗಿ ಅಷ್ಟೊಂದು ಯೋಚಿಸುವ ಅಗತ್ಯವಿಲ್ಲ.

ಮೀನ 
ಯಾವುದೇ ಋಣಾತ್ಮಕ ವಿಚಾರಗಳಿಗೆ ಕಿವಿ
ಗೊಡದಿರುವುದೇ ಉಚಿತ. ಆಲೋಚಿಸಿ
ನಿರ್ಧಾರ ತೆಗೆದುಕೊಳ್ಳಿ. ಧೈರ್ಯದಿಂದಿರಿ

loader