Asianet Suvarna News Asianet Suvarna News

ಈ ರಾಶಿಗೆ ಸಿಗಲಿದೆ ಶುಭ ಸಮಾಚಾರ : ಉಳಿದ ರಾಶಿ..?

ಈ ರಾಶಿಗೆ ಸಿಗಲಿದೆ ಶುಭ ಸಮಾಚಾರ : ಉಳಿದ ರಾಶಿ..?

Dina Bhavishya June 09

ಈ ರಾಶಿಗೆ ಸಿಗಲಿದೆ ಶುಭ ಸಮಾಚಾರ : ಉಳಿದ ರಾಶಿ..?

ಮೇಷ
ನಿಮ್ಮ ಮನೆಯ ವಾಸ್ತುವಿನ ಬಗ್ಗೆ ಹೆಚ್ಚು ತಲೆ
ಕೆಡಿಸಿಕೊಳ್ಳುವುದು ಬೇಡ. ಜೀವನ ನಡೆದರೆ
ಸಾಕು ಎನ್ನುವ ಪರಿಸ್ಥಿತಿಯಲ್ಲಿ ಇದು ಬೇಕಾ?

ವೃಷಭ
ಓದುವವರಿಗೆ ಬಿಡುವು ಇರುವುದಿಲ್ಲ. ಸ್ವಲ್ಪ
ದಿನಗಳು ಕಷ್ಟ ಪಟ್ಟರೆ ಒಳ್ಳೆಯ ದಿನಗಳು
ಬರಲಿವೆ. ಏಕಾಗ್ರತೆಗೆ ತಕ್ಕ ಫಲ ಸಿಗಲಿದೆ.

ಮಿಥುನ
ಅಮ್ಮನಿಂದ ಶುಭ ಸಮಾಚಾರ ಸಿಗಲಿದೆ.
ಅಂದು ಕೊಂಡ ಕೆಲಸಗಳನ್ನು ಮಾಡಲು ಇದು
ಸುಸಮಯವಾಗಿದೆ. ಖುಷಿಯಲ್ಲಿ ಆರಂಭಿಸಿ.

ಕಟಕ
ಅಪರೂಪದ ವ್ಯಕ್ತಿಗಳ ಪರಿಚಯವಾಗಲಿದೆ.
ಓದಿನ ಕಡೆ ಗಮನಹರಿಸಿ. ವ್ಯಾಪಾರದಲ್ಲಿ ಸ್ವಲ್ಪ
ಎಚ್ಚರವಿರಲಿ. ಯಾಮಾರಿಸುವವರು ಇದ್ದಾರೆ.

ಸಿಂಹ
ಸ್ವಂತ ಉದ್ಯೋಗದಲ್ಲಿ ಪ್ರಗತಿಯಾಗಲಿದೆ.
ಭಿನ್ನಾಭಿಪ್ರಾಯಗಳು ದೂರಾಗಿ ಸಾಮರಸ್ಯ
ಉಂಟಾಗಲಿದೆ. ಎಚ್ಚರಿಕೆಯಿಂದ ವ್ಯವಹರಿಸಿ.

ಕನ್ಯಾ
ಇಂದು ನಿಮ್ಮ ದಿನಚರಿಯಲ್ಲಿ ಸ್ವಲ್ಪ ವ್ಯತ್ಯಯ
ಗಳು ಎದುರಾಗುವ ಸಂಭವವಿದೆ. ಊಟ
ತಿಂಡಿಗಳತ್ತ ಗಮನ ಕಡಿಮೆ ಮಾಡಿಕೊಳ್ಳದಿರಿ.

ತುಲಾ
ನಿಮ್ಮ ಉದಾರ ಬುದ್ಧಿಯು ನಿಮಗೇ ಮಾರಕ
ವಾಗಲಿದೆ. ಅದನ್ನು ದುರುಪಯೋಗಪಡಿಸಿ
ಕೊಳ್ಳುವವರು ಹೆಚ್ಚಾಗಿದ್ದಾರೆ. ಹುಷಾರಾಗಿರಿ.

ವೃಶ್ಚಿಕ
ಕೆಲ ಸಮಯದಿಂದ ಅಂದುಕೊಂಡಿದ್ದ ಕೆಲಸ
ಇಂದು ಕೈಗೂಡಲಿವೆ. ಮಹಿಳೆಯರು
ಸ್ವಲ್ಪ ಮೌನವ್ರತ ಮಾಡಿದರೆ ಒಳಿತಾಗಲಿದೆ

 ಧನುಸ್ಸು
ಕೃಷಿಕರಿಗೆ ಎಂದೆಂದು ಕಷ್ಟಗಳೇ ಇರುವುದಿಲ್ಲ.
ಕೆಲವೊಮ್ಮೆ ಒಳ್ಳೆಯ ದಿನಗಳು ಬರಲಿವೆ ಎಂಬ
ಸೂಚನೆ ಸಿಕ್ಕಿತ್ತು. ಅಂತಹ ದಿನ ಇದಾಗಿದೆ.

ಮಕರ
ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಹೊಸ ಗೆಳೆಯರ ಪರಿಚಯವಾಗಲಿದೆ. ಸಿಹಿ
ತಿನ್ನುವುದನ್ನು ಕಡಿಮೆ ಮಾಡುವುದು ಸೂಕ್ತ.

ಕುಂಭ
ಮರಗೆಲಸ ಹಾಗೂ ಆರ್ಟಿಸ್ಟ್‌ಗಳಿಗೆ ಕೆಲಸದ
ಒತ್ತಡವು ಹೆಚ್ಚಾಗಲಿದೆ. ಹಣದ ಮುಗ್ಗಟ್ಟು
ಕಾಡಲಿದೆ. ಮನಸ್ಸಿಗೆ ಸ್ವಲ್ಪ ಶಾಂತಿ ಬೇಕು.

ಮೀನ 
ರಾಜಕೀಯ ಕ್ಷೇತ್ರದಲ್ಲಿರುವವರು ತುಂಬಾ
ಬ್ಯುಸಿಯಾಗುವಿರಿ. ನಿಮ್ಮ ಪಕ್ಷವನ್ನು ಹೆಚ್ಚು
ಬಲಪಡಿಸಲು ಪ್ರಯತ್ನ ನಡೆಸುತ್ತಲ್ಲೇ ಇರಿ.

ಸಂವತ್ಸರ: ವಿಳಂಬಿ, ಉತ್ತರಾಯಣ, ಋತು: ಗ್ರೀಷ್ಮ, ಮಾಸ: ಜ್ಯೇಷ್ಠ
ಪಕ್ಷ: ಕೃಷ್ಣಪಕ್ಷ, ತಿಥಿ: ದಶಮೀ, ನಕ್ಷತ್ರ: ರೇವತಿ
ಸೂರ್ಯೋದಯ 5.52, ಸೂರ್ಯಾಸ್ತ 6.45

ರಾಹುಕಾಲ 9.00  10.30 ಯಮಗಂಡಕಾಲ 1.30  ೦3, ಗುಳಿಕಕಾಲ 6   7.30

Follow Us:
Download App:
  • android
  • ios