Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಶಂಖ ದಾನ ಮಾಡಿ

31 ಅಕ್ಟೋಬರ್ 2020 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope of 31 October 2020 in Kannada grg
Author
Bengaluru, First Published Oct 31, 2020, 7:10 AM IST

ಮೇಷ: ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇದೆ, ಮಾತಿನಿಂದ ಕಾರ್ಯ ಸಿದ್ಧಿ, ಸಮಾಧಾನವಾಗಿರಿ, ಶುಭಾಶುಭ ಮಿಶ್ರಫಲಗಳಿವೆ, ಶಂಖ ದಾನ ಮಾಡಿ

ವೃಷಭ: ಹಣಕಾಸಿಗೆ ತೊಂದರೆ, ಮಾತಿನಿಂದ ವಿರೋಧ, ಕುಟುಂಬದಲ್ಲಿ ಘರ್ಷಣೆ, ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ನವಗ್ರಹ ಪ್ರಾರ್ಥನೆ ಮಾಡಿ

ಮಿಥುನ: ಸಣ್ಣಮಕ್ಕಳಲ್ಲಿ ಬಾಲಾರಿಷ್ಟ ದೋಷ, ಆರೋಗ್ಯದಲ್ಲಿ ಗಂಭೀರ ಏರುಪೇರು, ವಾತ-ಕಫದ ದೋಷ ಕಾಡಲಿದೆ, ಆಹಾರದಲ್ಲಿ ಎಚ್ಚರಿಕೆ ಬೇಕು, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ: ದಾಂಪತ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ನಷ್ಟ, ಸಂಗಾತಿ-ಮಿತ್ರರ ನಡುವೆ ಭಿನ್ನಾಭಿಪ್ರಾಯ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಸಿಂಹ: ಆತಂಕಕ್ಕೆ ತುತ್ತಾಗುವ ಸಾಧ್ಯತೆ ಇದೆ, ಹೊಸ ಶತ್ರುಗಳ ಕಾಟ, ಸಾಲ ಬಾಧೆ, ಮಾನಸಿಕ ಒತ್ತಡ, ಎಚ್ಚರಿಕೆ ಬೇಕು, ಈಶ್ವರ ಹಾಗೂ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ:  ಬುದ್ಧಿಶಕ್ತಿಗೆ ಮಂಕು ಕವಿಯುತ್ತದೆ, ನಿರ್ಧಾರಗಳಿಂದ ಸಮಸ್ಯೆಗಳಾಗಬಹುದು, ಶುಭಾಶುಭ ಮಿಶ್ರಫಲವಿದೆ, ಬುಧನ ಪೀಡಾಪರಿಹಾರ ಸ್ತೋತ್ರ ಪಠಿಸಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ತುಲಾ: ನೀವು ಇಂದು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಮನೆಯವರ ಮೇಲೆ ಪರಿಣಾಮ ಬೀರುವುದರಿಂದ ಎಚ್ಚರಿಕೆ ಇರಲಿ.

ವೃಶ್ಚಿಕ: ಮಾಡಿದ್ದುಣ್ಣೋ ಮಹರಾಯ ಎನ್ನುವ ಹಾಗೆ ನಿಮ್ಮ ಹಿಂದಿನ ಪುಣ್ಯಕಾರ್ಯಗಳಿಗೆ ಇಂದು ನಿರೀಕ್ಷಿತ ಫಲವನ್ನು ಪಡೆಯಲಿದ್ದೀರಿ.

ಧನಸ್ಸು: ಗೊಂದಲಗಳು ಸಹಜ. ಅದರಿಂದ ಹೊರಗೆ ಬಂದು ಸಂತಸ ಹುಡುಕಿ. ಸಂಜೆ ವೇಳೆಗೆ ಮನಸ್ಸು ನಿರಾಳವಾಗಲಿದೆ. ಶಾಂತಿ ಇರಲಿದೆ. 

ಮಕರ: ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಇಡೀ ದಿನ ತೊಡಗಿಸಿಕೊಳ್ಳಲಿದ್ದೀರಿ. ಅವಿವೇಕಿಗಳ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದಿರಿ.

ಕುಂಭ: ಅಧಿಕಾರ ಕ್ಷಣಿಕ ಎನ್ನುವುದು ನಿಮ್ಮ ಮನಸ್ಸಿನಲ್ಲಿ ಇರಲಿ. ಮತ್ತೊಬ್ಬರ ಬಗ್ಗೆ ಸಹಾನುಭೂತಿ ಇರಲಿ. ಸಂಗೀತ ಕೇಳಿ ಮನಸ್ಸು ನಿರಾಳ.

ಮೀನ: ಮುಂದಿನ ವಾರದ ಕಾರ್ಯಕ್ರಮಗಳ ತಯಾರಿಯಲ್ಲಿಯೇ ಈ ದಿನ ಕಳೆಯಲಿದೆ. ಅವಿವಾಹಿತರಿಗೆ ಒಳ್ಳೆಯ ಸುದ್ದಿ ತಿಳಿಯಲಿದೆ.

Follow Us:
Download App:
  • android
  • ios