ಮೇಷ: ಸುಲಭದ ದಾರಿಯಲ್ಲಿ ಸಾಗುವುದಕ್ಕೆ ಬದಲಾಗಿ ಸತ್ಯದ ದಾರಿಯಲ್ಲಿ ಸಾಗಿ. ಗೆಲುವು ಪಡೆಯಲು ಸಾಕಷ್ಟು ಶ್ರಮ ಪಡೆಬೇಕು.

ವೃಷಭ: ಎಲ್ಲರನ್ನೂ ಮೆಚ್ಚಿಸಿ ಬದುಕುವುದಕ್ಕೆ ಆಗುವುದಿಲ್ಲ. ನಿಮಗೆ ಸರಿ ಎನ್ನಿಸದನ್ನು ಆಪ್ತರ ಬಳಿ ಚರ್ಚಿಸಿ ಮಾಡಿ. ಧೈರ್ಯ ಇರಲಿ.

ಮಿಥುನ: ತಾಂತ್ರಿಕವಾಗಿ ಹೊಸ ವಿಚಾರಗಳನ್ನು ಇಂದು ತಿಳಿದುಕೊಳ್ಳಲಿದ್ದೀರಿ. ದೇಶ ಸುತ್ತು, ಕೋಶ ಓದು ಎನ್ನುವ ಮಾತಿನ ಅರಿವು ಇಂದಾಗಲಿದೆ.

ಕಟಕ: ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗೃತೆ ವಹಿಸಿ. ಯಾರೊಂದಿಗೂ ವಿರಸ ಬೇಡ. ಆಗದು ಎಂದು ಕೈ ಕಟ್ಟಿ ಕೂರುವುದು ಬೇಡ.

ಸಿಂಹ : ನಿಮ್ಮ ಮುಂದೆ ದಾರಿಗಳು ಹತ್ತಾರಿವೆ. ನೀವು ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ಭವಿಷ್ಯ ನಿಂತಿದೆ.

ಕನ್ಯಾ:  ನಿಮಗೆ ವಹಿಸಿದ ಜವಾಬ್ಧಾರಿಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ. ಪ್ರತಿಫಲಕ್ಕೆ ಅವರಸಪಡುವುದು ಬೇಡ. ಶುಭ ಫಲ.

ತುಲಾ: ವ್ಯಾಪಾರಿಗಳಿಗೆ ಲಾಭ, ವೈದ್ಯರಿಗೆ ಅನುಕೂಲದ ದಿನ, ಸರ್ಕಾರಿ ನೌಕರರಿಗೆ ಅನುಕೂಲ, ಈಶ್ವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ನಿಮ್ಮನ್ನು ದೂರ ತಳ್ಳಿದವರು ನಿಮ್ಮ ಸ್ನೇಹ ಅರಸಿ ಬರುವ ಸಾಧ್ಯತೆ

ವೃಶ್ಚಿಕ: ಲಾಭ ಸಮೃದ್ಧಿ, ಮಕ್ಕಳಿಂದ ಅನುಕೂಲ, ಆತಂಕ ಬೇಡ, ಗೌರೀ ಪ್ರಾರ್ಥನೆ ಮಾಡಿ

ಧನುಸ್ಸು: ಕೆಲಸದಲ್ಲಿ ವಿಘ್ನ, ಅನುಕೂಲದ ವಾತಾವರಣವೂ ಇರಲಿದೆ, ಕೃಷ್ಣ ಪ್ರಾರ್ಥನೆ ಮಾಡಿ

ಮಕರ: ಅಶುಚಿ-ಮಲಿನತೆಗಳಿಂದ  ಮನಸ್ಸು ಕಿರಿಕಿರಿಯಾಗಲಿದೆ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ: ಸಂಗಾತಿಯಿಂದ - ಮಿತ್ರರಿಂದ ಸಹಕಾರ, ಹಣಕಾಸಿನ ಸಮೃದ್ಧಿ, ಕುಜ ಪ್ರಾರ್ಥನೆ ಮಾಡಿ

ಮೀನ: ವ್ಯಾಪಾರ, ದಾಂಪತ್ಯದ ಬಗ್ಗೆ ಎಚ್ಚರಿಕೆ ಇರಲಿ, ಅನುಕೂಲವಿದೆ, ಸಂಪದ್ಗೌರೀ ವ್ರತ ಮಾಡಿ