ಈ ರಾಶಿಗೆ ಇಂದಿನ ದಿನ ಸಂತೋಷದಾಯಕವಾದ ದಿನ
ಈ ರಾಶಿಗೆ ಇಂದಿನ ದಿನ ಸಂತೋಷದಾಯಕವಾದ ದಿನ
ಮೇಷ
ನಿಂದಕರು ಇರುವರು ಸುತ್ತ ಮುತ್ತಲು.
ಯಾರಿಗೂ ಅಂಜದೇ ಮುಂದೆ ಸಾಗುವುದೇ
ಗುರಿಯಾಗಲಿ. ಆರೋಗ್ಯ ವೃದ್ಧಿ.
ವೃಷಭ
ನಿಮ್ಮ ನಡತೆಯೇ ನಿಮಗೆ ಅವಕಾಶಗಳನ್ನು
ತಂದುಕೊಡಲಿದೆ. ಮನೆಯಲ್ಲಿ ಬಂಧು
ಗಳೊಂದಿಗೆ ಸಂತೋಷದಿಂದ ಇರುವಿರಿ.
ಮಿಥುನ
ಎರಡು ರೀತಿಯ ಯೋಚನೆಗಳನ್ನು
ಮಾಡುವುದು ಬೇಡ. ಮಕ್ಕಳಿಗೆ ಉತ್ಸಾಹ
ಹೆಚ್ಚಾಗಲಿದೆ. ಮಹಿಳೆಯರಿಗೆ ಲಾಭ.
ಕಟಕ
ಹಿಂದಿನ ಉಳಿತಾಯ ಇಂದು ಉಪಯೋಗಕ್ಕೆ
ಬರಲಿದೆ. ಹೆಚ್ಚು ಮಾತು ಬೇಡ. ಮೌನಕ್ಕೂ
ಮಿತಿ ಇರಲಿ. ಸಂತೋಷ ಹೆಚ್ಚಾಗಲಿದೆ.
ಸಿಂಹ
ಹೊಸತನಕ್ಕೆ ಹೆಚ್ಚು ತೆರೆದುಕೊಳ್ಳಲಿದ್ದೀರಿ.
ಮಾತಾಡುವ ಬದಲು ಮಾಡಿ ತೋರಿಸಿ. ನಿಮ್ಮ
ಮಿತ್ರರಿಗೆ ನಿಮ್ಮಿಂದ ಆರ್ಥಿಕ ಸಹಾಯ.
ಕನ್ಯಾ
ದೇವರಲ್ಲಿ ನಂಬಿಕೆ ಇರಲಿ. ಶುದ್ಧವಾದ
ವಾತಾವರಣ ನಿರ್ಮಾಣ ಮಾಡಿಕೊಳ್ಳಲಿದ್ದೀರಿ.
ಆದಷ್ಟೂ ಕೋಪವನ್ನು ಕಡಿಮೆ ಮಾಡಿಕೊಳ್ಳಿ.
ತುಲಾ
ಹೆಚ್ಚು ಚಿಂತೆ ಮಾಡುವುದು ಬೇಡ. ನಿಮ್ಮ
ಹಳೆಯ ನೋವುಗಳು ಶಮನವಾಗಲಿವೆ.
ಸ್ನೇಹಿತರ ಮಾತಿಗೆ ಹೆಚ್ಚು ಮಹತ್ವ ನೀಡಿ.
ವೃಶ್ಚಿಕ
ಅಧಿಕಾರಿ ವರ್ಗಕ್ಕೆ ಹೆಚ್ಚು ಅನುಕೂಲ. ನಿಮ್ಮ
ಮನೆಯ ಮುಂದಿನ ಹೂ ಗಮವನ್ನು
ಸವಿಯಿರಿ. ಪಕ್ಕದ ಮನೆಯ ಸುದ್ದಿ ಬೇಡ.
ಧನುಸ್ಸು
ಈ ಬೆಳಕಿನ ಹಬ್ಬ ನಿಮ್ಮ ಬಾಳಲ್ಲಿ ಹೊಸ ಬೆಳಕು
ತರಲಿದೆ. ಮನೆ ಮಗಳಿಂದ ಹೆತ್ತವರಿಗೆ
ಹೆಮ್ಮೆಯಾಗಲಿದೆ. ಆರೋಗ್ಯ ವೃದ್ಧಿ.
ಮಕರ
ಹೊಸ ಭಾಷಿಕರ ಪರಿಚಯವಾಗಲಿದೆ. ಹಬ್ಬ
ಮುಗಿದ ನಂತರ ಶುಭ ಕಾರ್ಯಕ್ಕೆ
ಮುಂದಾಗುವಿರಿ. ಶುಭ ಫಲದ ನಿರೀಕ್ಷೆ.
ಕುಂಭ
ಮತ್ತೊಬ್ಬರ ಸುಳ್ಳಿಗೆ ಸಾಕ್ಷಿಯಾಗುವುದು
ಬೇಡ. ನಿಮ್ಮ ನಿರ್ಧಾರಕ್ಕೆ ಬದ್ಧವಾಗಿ
ನಡೆದುಕೊಳ್ಳಿ. ವ್ಯಾಪಾರದಲ್ಲಿ ಲಾಭ.
ಮೀನ
ಮನಸ್ಸಲ್ಲಿ ಕಲ್ಮಶ ಇಟ್ಟುಕೊಂಡು ನರಳುವುದು
ಬೇಡ. ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಸಾಕಷ್ಟು
ಮನಸ್ಸುಗಳು ನಿಮ್ಮ ಸುತ್ತ ಮುತ್ತಲೂ ಇವೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 6, 2018, 6:56 AM IST