Asianet Suvarna News Asianet Suvarna News

ಈ ರಾಶಿಯವರಿಗೆ ಇಂದು ಲಾಭದ ದಿನ

ಈ ರಾಶಿಯವರಿಗೆ ಇಂದು ಲಾಭದ ದಿನ

Daily Horoscope 29 October 2018
Author
Bengaluru, First Published Oct 29, 2018, 7:03 AM IST
  • Facebook
  • Twitter
  • Whatsapp

ಈ ರಾಶಿಯವರಿಗೆ ಇಂದು ಲಾಭದ ದಿನ

ಮೇಷ
ನಿತ್ಯದ ಜಂಜಾಟಗಳಿಂದ ಹೊರಗೆ
ಬರಲಿದ್ದೀರಿ. ನಿಮ್ಮಿಂದ ಆಗುವ ಕೆಲಸಗಳಿಗೆ
ಮಾತ್ರ ಕೈ ಹಾಕಿ. ಪ್ರಮಾಣಿಕತೆ ಹೆಚ್ಚಾಗಲಿದೆ.

ವೃಷಭ
ವ್ಯಾಪಾರಿಗಳಿಗೆ ಲಾಭದ ಪ್ರಮಾಣ ಹೆಚ್ಚಲಿದೆ.
ನೀವು ಹೆಚ್ಚಾಗಿ ನಂಬಿದ ವ್ಯಕ್ತಿಳಿಂದ ನೀವು
ಅಂಂದುಕೊಂಡ ಕೆಲಸ ಸಾಧ್ಯವಾಗುವುದಿಲ್ಲ.

ಮಿಥುನ
ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇಲ್ಲ.
ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ.
ಹತ್ತಿರದ ಬಂಧುಗಳ ಬಗ್ಗೆ ಗಮನವಿರಲಿ.

ಕಟಕ
ನಿಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡುವ
ಕಾರ್ಮಿಕರ ಬಗ್ಗೆ ಕನಿಕರ ಉಂಟಾಗಲಿದೆ.
ಧಾರ್ಮಿಕ ಕಾರ್ಯಗಳಿಗೆ ಸಹಾಯ.

ಸಿಂಹ
ಹೊಸ ಉತ್ಸಾಹದಿಂದ ಕೆಲಸ ಮಾಡಿ.
ಮನೆಯ ನಿರ್ವಹಣೆಗೆ ಹೆಚ್ಚು ಹಣ
ಬೇಕಾಗಬಹುದು. ಶಾಂತಿ ಹೆಚ್ಚಲಿದೆ. 

ಕನ್ಯಾ
ಕುಟುಂಬಸ್ಥರೊಂದಿಗೆ ಸಿನಿಮಾ
ನೋಡಲಿದ್ದೀರಿ, ಹೊರಗಡೆ ಸುತ್ತಾಡಲಿದ್ದೀರಿ.
ತಂದೆ ತಾಯಿಯಿಂದ ಉಡುಗೊರೆ ಸಿಗಲಿದೆ.

ತುಲಾ 
ವಿವಿಧ ಕಾರಣಗಳಿಂದ ಮನಸ್ಸಿನಲ್ಲಿ ಗೊಂದಲ
ಉಂಟಾಗಲಿದೆ. ಮಧ್ಯಾಹ್ನದ ವೇಳೆಗೆ ಶುಭ
ಸುದ್ದಿ ಕೇಳಲಿದ್ದೀರಿ. ಬಂಧುಗಳ ಆಗಮನ.

ವೃಶ್ಚಿಕ
ನಿಮ್ಮ ಅಧಿಕಾರವನ್ನು ಬಳಸಿಕೊಂಡು
ಅಗತ್ಯವಿರುವವರಿಗೆ ಸಹಾಯ ಮಾಡುವಿರಿ.
ನಿಮ್ಮ ನಿರ್ಧಾರಗಳಿಗೆ ಬದ್ಧವಾಗಿ ನಡೆದುಕೊಳ್ಳಿ 

ಧನುಸ್ಸು
ಅಡುಗೆ ಭಟ್ಟರಿಗೆ ಒಳ್ಳೆಯ ಗುತ್ತಿಗೆಗಳು
ದೊರೆಯಲಿವೆ. ನಗರ ಜೀವನದಿಂದ ಕೊಂಚ
ದೂರ ಸಾಗುವಿರಿ. ಸಂತಸ ಹೆಚ್ಚಾಗಲಿದೆ.

ಮಕರ
ವಿದೇಶಿ ಪ್ರಯಾಣಕ್ಕೆ ಬೇಕಾದ ಎಲ್ಲಾ ಸಿದ್ಧತೆ
ಗಳು ಪೂರ್ಣಗೊಳ್ಳಲಿವೆ. ಹೊಸ ವಸ್ತುಗಳು
ಮನೆ ಸೇರಲಿವೆ. ಶುಭ ಸುದ್ದಿ ತಿಳಿಯಲಿದೆ.

ಕುಂಭ
ಓದಿನ ಬಗ್ಗೆ ದೊಡ್ಡವರೊಂದಿಗೆ ಚರ್ಚೆ
ಮಾಡಲಿದ್ದೀರಿ. ಶೈಕ್ಷಣಿಕ ಪ್ರಗತಿ. ಶಾಲೆಯಲ್ಲಿ
ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ದೊರೆಯಲಿದೆ.

ಮೀನ 
ಇಂದಿನಿಂದ ಒಳ್ಳೆಯ ಸಮಯ
ಆರಂಭವಾಗಲಿದೆ. ಮನೆಯ ಜಗಳಕ್ಕೆ
ವಿರಾಮ. ಮಕ್ಕಳ ಬಗ್ಗೆ ಎಚ್ಚರವಿರಲಿ.

Follow Us:
Download App:
  • android
  • ios