Asianet Suvarna News Asianet Suvarna News

ದಿನ ಭವಿಷ್ಯ: ಕುಂಭ ರಾಶಿಯವರಿಗೆ ಬಾಯಿ ಹುಣ್ಣಾಗುವ ಸಾಧ್ಯತೆ, ಉಳಿದ ರಾಶಿ ಹೇಗಿದೆ?

* 03 ಸಪ್ಟೆಂಬರ್ 2021 ಶುಕ್ರವಾರದ ಭವಿಷ್ಯ
* ಮೇಷ ರಾಶಿಯವರಿಗೆ ಧನಾಗಮನವಾಗಲಿದೆ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
 

Daily Horoscope 03 September 2021 Astrological Predictions for Aquarius And Other in Kannada grg
Author
Bengaluru, First Published Sep 3, 2021, 7:09 AM IST
  • Facebook
  • Twitter
  • Whatsapp

ಮೇಷ: ಬೆಲೆ ಬಾಳುವ ವಸ್ತುಗಳ ಬಗ್ಗೆ ಸೂಕ್ತ ರಕ್ಷಣೆ ಮಾಡಿಕೊಳ್ಳುವಿರಿ. ಧನಾಗಮನವಾಗಲಿದೆ. ದುಷ್ಟರಿಂದ ದೂರ ಇರುವುದು ಒಳ್ಳೆಯದ್ದು.

ವೃಷಭ: ಫಲವತ್ತಾದ ಭೂಮಿಯಲ್ಲಿ ಒಳ್ಳೆಯ ಬೆಳೆ ಬರುವಂತೆ ನಿಮ್ಮಲ್ಲಿರುವ ಒಳ್ಳೆಯ ಗುಣವನ್ನು ಬಳಸಿಕೊಂಡರೆ ಒಳ್ಳೆಯ ಲಾಭ ಬರಲಿದೆ.

ಮಿಥುನ: ಸ್ಥಳೀಯ ಮಟ್ಟದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಪೂರ್ವ ತಯಾರಿ ಮುಗಿಯಲಿದೆ.

ಕಟಕ: ಮನೆ ಮತ್ತು ಮನವನ್ನು ಶುಚಿಯಾಗಿ ಇಟ್ಟುಕೊಳ್ಳಿ. ಇದರಿಂದ ಮನಶಾಂತಿ ಹೆಚ್ಚಾಗುತ್ತದೆ. ಸ್ವಚ್ಛತೆಯೇ ದೇವರು.

ಸಿಂಹ - ಹೊಸದನ್ನು ತಿಳಿಯಲು ಹಿಂಜರಿಕೆ ಬೇಡ. ನೀವು ಕಷ್ಟಪಟ್ಟು ಮಾಡಿದ ಕಾರ್ಯಗಳಿಗೆ ಸರಿಯಾದ ಪ್ರತಿಫಲ ಪಡೆದುಕೊಳ್ಳಲಿದ್ದೀರಿ.

ಕನ್ಯಾ - ಶರೀರದಲ್ಲಿ ವ್ಯತ್ಯಾಸ, ಸಹೋದರ ಸಂಬಂಧಿಗಳಿಂದ ಕಿರಿಕಿರಿ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ, ಧನ್ವಂತರಿ ಪ್ರಾರ್ಥನೆ ಮಾಡಿ

ತುಲಾ - ಹಣ-ಮಾತಿನವಿಚಾರದಲ್ಲಿ ಎಚ್ಚರಿಕೆ ಇರಲಿ, ಅಮ್ಮನವರ ಪ್ರಾರ್ಥನೆ ಮಾಡಿ, ಮಂಗಲ ದ್ರವ್ಯ ದಾನ ಮಾಡಿ

ಜಾತಕ ಕೂಡಿ ಬಂದರೆ ಮಾತ್ರ ವೈವಾಹಿಕ ಸಂಬಂಧ ಗಟ್ಟಿಯಾಗಿರುತ್ತಾ?

ವೃಶ್ಚಿಕ - ದೇಹಾಯಾಸ, ಅನಾನುಕೂಲತೆ ಇದೆ, ಅಸಮಧಾನದ ದಿನ, ಪಿತೃಗಳ ಸ್ಮರಣೆ ಮಾಡಿ

ಧನುಸ್ಸು - ಉತ್ಕೃಷ್ಟ ಫಲ, ಸ್ತ್ರೀಯರಿಂದ ಲಾಭ, ವಿದೇಶಗಳಿಂದ ಶುಭವಾರ್ತೆ, ಓಡಾಡುವಾಗ ಎಚ್ಚರವಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಕರ - ಕಾರ್ಯ ವಿಳಂಬ, ಕಾರ್ಯ ಸಾಧನೆ, ಸಂಗಾತಿಯಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದಲ್ಲಿ ವ್ಯತ್ಯಾಸ, ಬಾಯಿ ಹುಣ್ಣಾಗುವ ಸಾಧ್ಯತೆ, ಅಜೀರ್ಣತೆ ಉಂಟಾಗಲಿದೆ, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ - ಮಕ್ಕಳಿಂದ ನಷ್ಟ, ತೊಡಕುಗಳಿಲ್ಲ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ 

Follow Us:
Download App:
  • android
  • ios