ಈ ರಾಶಿಗೆ ಹೊಸ ವರ್ಷದ ಸಂದರ್ಭದಲ್ಲಿ ಧನಲಾಭ

ಈ ರಾಶಿಗೆ ಹೊಸ ವರ್ಷದ ಸಂದರ್ಭದಲ್ಲಿ ಧನಲಾಭ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೇಷ
ಹೊಸ ಸ್ನೇಹಿತರು ಸಿಗಲಿದ್ದು, ಹಳೆಯ
ಸ್ನೇಹಿತರ ಭೇಟಿ ಸಾಧ್ಯತೆ. ಪುರುಷರಿಗೆ
ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.

ವೃಷಭ
ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ.
ದಿನದಂತ್ಯದಲ್ಲಿ ಧನಲಾಭ. ಮಕ್ಕಳಿಂದ
ಮನೆಯಲ್ಲಿ ನೆಮ್ಮದಿ. ಮಕ್ಕಳಿಗೆ ಶುಭ ದಿನ.

ಮಿಥುನ
ಆರೋಗ್ಯದ ಕಡೆ ಗಮನವಿರಲಿ. ದೇಹಕ್ಕೆ
ಒಗ್ಗುವ ಆಹಾರ ಪದಾರ್ಥಗಳನ್ನು ಸೇವಿಸಿ.
ದಿನದಂತ್ಯದಲ್ಲಿ ಸಿಹಿ ಸುದ್ದಿ ಸಿಗಲಿದೆ.

ಕಟಕ
ಮಕ್ಕಳಿಗೆ ಓದಿನಲ್ಲಿ ಸ್ವಲ್ಪ ಅಡೆತಡೆ ಬಂದರೂ
ದಿನದಂತ್ಯದಲ್ಲಿ ನಿರಾಳರಾಗಿ ಪೂರ್ಣಗೊಳಿ
ಸುವಿರಿ. ಶ್ರಮದ ದಿನ ನಿಮ್ಮದಾಗುತ್ತದೆ.

ಸಿಂಹ
ದೂರದ ಪ್ರಯಾಣದಿಂದ ಆಯಾಸವಾಗಲಿದೆ.
ಮಹತ್ವದ ವಿಚಾರವಗಳನ್ನು ಮನೆಯವರ
ಜೊತೆ ಸೇರಿ ನಿರ್ಧರಿಸಿದರೆ ಒಳಿತು. 

ಕನ್ಯಾ
ಕೆಲಸ ಕಾರ್ಯಗಳಲ್ಲಿ ಗಡಿಬಿಡಿ ಬೇಡ. ಎಲ್ಲಾ
ಕಾರ್ಯ ಸುಗಮವಾಗಿ ಆಗಲಿದೆ. ತಲೆಕೆಡಿಸಿ
ಕೊಂಡರೆ ಆರೋಗ್ಯದಲ್ಲಿ ಏರುಪೇರಾಗಲಿದೆ.

ತುಲಾ 
ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡದಿರಿ. ಅತಿಯಾದ
ಸಿಟ್ಟಿನಿಂದ ಸಂಬಂಧದಲ್ಲಿ ಬಿರುಕು ಸಾಧ್ಯ.
ಆದಷ್ಟು ಸಂಗೀತ ಕೇಳಿ ನಿರಾಳರಾಗಿ.

ವೃಶ್ಚಿಕ
ಆಗುವ ಕೆಲಸ ಆಗುತ್ತದೆಂದು ಸುಮ್ಮನೆ ಇದ್ದರೆ
ಯಾವುದು ಆಗದು. ಅದರಲ್ಲಿ ನಿಮ್ಮ ಶ್ರಮ
ವೂ ಇರಬೇಕು. ಆಗ ಮಾತ್ರ ಜಯ ಸಿಗುತ್ತದೆ. 

ಧನುಸ್ಸು
ಇಂದು ತುಂಬಾ ಮೌನವಾಗಿರುವಿರಿ. ಆದರೆ
ಕೆಲಸ ಕಾರ್ಯಗಳಲ್ಲಿ ನಿರೀಕ್ಷೆಗಿಂತಲೂ ಹೆಚ್ಚು
ಯಶಸ್ಸು ಸಿಗಲಿದೆ. ಶುಭ ದಿನ.

ಮಕರ
ಇಷ್ಟು ದಿನ ನೀವು ಪ್ರಯತ್ನಿಸುತ್ತಿದ್ದ
ವಿಷಯದಲ್ಲಿ ಸಫಲರಾಗುವಿರಿ.
ಮನೆಯವರಿಂದ ಪ್ರಶಂಸೆಗೆ ಪಾತ್ರರಾಗುವಿರಿ.

ಕುಂಭ
ಬೆಂಕಿ ಬಗ್ಗೆ ಎಚ್ಚರ ಇರಲಿ. ಮನಸ್ಸಲ್ಲಿ ಭಯ,
ಆತಂಕವಿದ್ದಲ್ಲಿ ಅದನ್ನು ಧ್ಯಾನದಿಂದ ಮಾತ್ರ
ದೂರಾಗಿಸಲು ಸಾಧ್ಯ. ಮಕ್ಕಳಿಗೆ ಶುಭದಿನ

ಮೀನ 
ಮನುಷ್ಯನೂ ವಿಷ ಜಂತುವಿದ್ದಂತೆ. ಹಾಗಾಗಿ
ತಕ್ಷಣ ಯಾರನ್ನೂ ನಂಬದಿರುವುದು ಒಳಿತು.
ಮನೆಯಲ್ಲಿ ನೆಮ್ಮದಿ ಇರಲಿದೆ.