"ಮೇಷ: ಬೆಳಿಗ್ಗೆಯೇ ಶುಭ ಸುದ್ದಿ ಕೇಳಲಿದ್ದೀರಿ. ಅಂದುಕೊಂಡ ಕಾರ್ಯಕ್ಕೆ ಸಣ್ಣ ವಿಘ್ನ ಬರಲಿದೆ. ತಂದೆಯ ಮಾತಿಗೆ ಮನ್ನಣೆ ನೀಡಿ.

ವೃಷಭ: ಹಿಂದೆ ಮಾಡಿದ ತಪ್ಪು ಕೆಲಸಕ್ಕೆ ಇಂದು ಬೆಲೆ ತೆರಬೇಕಾಗಿ ಬರುತ್ತದೆ. ಅಂದುಕೊಂಡ ಕಾರ್ಯಗಳು ನೆರವೇರಲಿವೆ. ನೆಮ್ಮದಿ ಇದೆ.

ಮಿಥುನ: ದಿನವಿಡೀ ಸಂತೋಷದಿಂದ ಇರಲಿದ್ದೀರಿ. ಆತ್ಮೀಯರ ಸಂಖ್ಯೆ ಹೆಚ್ಚಾಗಲಿದೆ. ಮತ್ತೊಬ್ಬರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ.

ಒಂದು ರಾಶಿಗೆ ಒಳ್ಳೆಯ ಫಲವೊಂದು ಒಲಿಯಲಿದೆ : ವಾರ ಭವಿಷ್ಯ

ಕಟಕ: ಹಳೆಯ ಸಾಲಗಳು ವಾಪಸ್ ಬರಲಿವೆ. ನೆಮ್ಮದಿಯ ನಾಳೆಗಾಗಿ ಇಂದಿನಿಂದಲೇ ತಯಾರಿ ನಡೆಸಲಿದ್ದೀರಿ. ಕಣ್ಣಿನ ಆರೋಗ್ಯ ವೃದ್ಧಿ.

ಸಿಂಹ: ನಿಮ್ಮ ಕನಸುಗಳು ಇಂದು ಕಾರ್ಯರೂಪಕ್ಕೆ ಬರಲಿವೆ. ಹೆಚ್ಚು ಮಾತನಾಡುವುದಕ್ಕೆ ಬದಲಾಗಿ ಕೆಲಸ ಮಾಡಿ ತೋರಿಸಲಿದ್ದೀರಿ.

ಕನ್ಯಾ: ನಿಮ್ಮನ್ನು ಹೊಗಳಿ ಮಾತನಾಡುವವರು ಹಿಂದಿನಿಂದ ತೊಂದರೆ ಉಂಟುಮಾಡುವ ಸಾಧ್ಯತೆ ಇರುತ್ತದೆ. ಎಚ್ಚರಿಕೆಯಿಂದಿರಿ.

ತುಲಾ: ಮತ್ತೊಬ್ಬರಿಗಾಗಿ ಕಾಯುವುದು ಬೇಡ. ಇನ್ನೊಬ್ಬರನ್ನು ನೀವು ಕಾಯಿಸಬೇಡಿ. ನಿಮ್ಮ ಪಾಲಿಗೆ ಬಂದದ್ದನ್ನು ನೀವೇ ಅನುಭವಿಸಬೇಕು.

ವೃಶ್ಚಿಕ: ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವುದು ಬೇಡ. ಬಂಧುಗಳ ಏಳಿಗೆಯಿಂದ ನಿಮಗೆ ಸಂತೋಷ. ಶುಭಫಲ.

ಧನಸ್ಸು: ಬಂಧುಗಳ ಆಗಮನವಾಗಲಿದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಹಿಡಿತ ಸಾಧಿಸಿಕೊಳ್ಳಬೇಕು. ವಾಹನ ಚಾಲನೆ ವೇಳೆ ಎಚ್ಚರವಿರಲಿ.

ಮಕರ: ಮತ್ತೊಬ್ಬರನ್ನು ನಿಂದಿಸಿ ಫಲವಿಲ್ಲ. ನೀವು ಮಾಡುವ ಕೆಲಸದಲ್ಲಿ ನಿಯತ್ತು ಇರಲಿ. ಬೆಲೆ ಬಾಳುವ ವಸ್ತು ಕೊಳ್ಳಲಿದ್ದೀರಿ. ಶುಭ ಫಲ.

ಕುಂಭ: ಸೇವಾ ಕಾರ್ಯಗಳಲ್ಲಿ ದಿನವಿಡೀ ತೊಡಗಿಸಿಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ನಿಂದನೆಗೆ ಒಳಗಾಗಲಿದ್ದೀರಿ.

ಮೀನ: ಆತ್ಮೀಯರೊಂದಿಗೆ ವಿರಸ ಏರ್ಪಡಲಿದೆ. ಅತಿಯಾದ ಉತ್ಸಾಹದಿಂದ ಮುಂದೆ ಸಾಗುವುದು ಇಂದು ಒಳಿತಲ್ಲ. ಶುಭ ಫಲ.