ಮೇಷ
ಅತಿಯಾದ ನಿರೀಕ್ಷೆಗಳೂ ಒಮ್ಮೊಮ್ಮೆ ಕೈ
ಕೊಡುವ ಸಾಧ್ಯತೆ ಇರುತ್ತದೆ. ಆರೋಗ್ಯದ
ಕಡೆಗೆ ಹೆಚ್ಚು ಗಮನ ಕೊಡುವುದು ಸೂಕ್ತ.

ವೃಷಭ
ವ್ಯರ್ಥವಾಗಿ ಕಳೆದ ಸಮಯದ ಬಗ್ಗೆ ಚಿಂತೆ
ಮಾಡುತ್ತಾ ಕೂರುವುದು ಬೇಡ. ಸಿಕ್ಕಿರುವ
ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ.

ಮಿಥುನ
ನಿಮ್ಮ ಸಣ್ಣ ತಪ್ಪನ್ನು ಮತ್ತೊಬ್ಬರು ದೊಡ್ಡದಾಗಿ
ಬಿಂಬಿಸಿ ಪ್ರಚಾರ ಮಾಡುವ ಸಾಧ್ಯತೆ ಇದೆ.
ಎಚ್ಚರಿಕೆಯಿಂದ ಹೆಜ್ಜೆ ಹಾಕಿ. ಮೌನ ಒಳಿತು.

ಕಟಕ
ನಿಮ್ಮ ಕ್ಷಮಿಸುವ ಗುಣವೇ ಇಂದು ನಿಮಗೆ
ವಿಶೇಷ ಗೌರವ ತಂದುಕೊಡಲಿದೆ.
ಸ್ನೇಹಿತರೊಂದಿಗೆ ಪ್ರವಾಸ ಹೋಗಲಿದ್ದೀರಿ.

ಸಿಂಹ
ಚಿಲ್ಲರೆ ವ್ಯಾಪಾರಿಗಳಿಗೆ ಇದು ಶುಭ ದಿನ.
ಹಾಕಿದ ಬಂಡವಾಳದ ಜೊತೆಗೆ ಒಳ್ಳೆಯ
ಲಾಭವೂ ಬರಲಿದೆ. ಖರ್ಚು ಕಡಿಮೆ ಮಾಡಿ.

ಕನ್ಯಾ
ಮನೆಯಲ್ಲಿ ನೆಮ್ಮದಿ ನೆಲೆಸಲಿದೆ. ಮಕ್ಕಳ
ಸಾಧನೆಯಿಂದ ನಿಮ್ಮ ಮನಸ್ಸಿಗೆ ಆನಂದ.
ಎಲ್ಲರನ್ನೂ ಪ್ರೀತಿಯಿಂದ ಕಾಣುವಿರಿ.

ತುಲಾ 
ಗಾಯದ ಮೇಲೆ ಬರೆ ಎಳೆದಂತೆ ಇಂದು
ಒಂದಷ್ಟು ತೊಂದರೆ ಬಂದರೂ ಅದು ಕ್ಷಣಿಕ
ಮಾತ್ರ. ಗೆಳೆಯರ ಸಹಾಯ ದೊರೆಯಲಿದೆ.

ವೃಶ್ಚಿಕ
ಗೆಲುವಿಗೆ ದಾರಿ ನೂರಿದ್ದರೂ ನೀವು
ಸರಿಯಾದ, ನ್ಯಾಯ ಸಮ್ಮತವಾದ
ದಾರಿಯನ್ನು ಆಯ್ಕೆ ಮಾಡಿಕೊಂಡು ಸಾಗಿ. 

ಧನುಸ್ಸು
ತಂತ್ರಜ್ಞಾನವನ್ನು ನಂಬಿಕೊಂಡು ದಾರಿ ತಪ್ಪುವ
ಸಾಧ್ಯತೆ ಇದೆ. ನಿಮಗೆ ಗೊತ್ತಿರದೇ
ಇರುವುದನ್ನು ಕೇಳಿ ತಿಳಿದುಕೊಳ್ಳಿ.

ಮಕರ
ಬಂಧುಗಳು ನಿಮಗೆ ನೆರವಾಗುವುದಕ್ಕೆ
ಬದಲಾಗಿ ನಿಮ್ಮಿಂದಲೇ ನೆರವು ಬೇಡಲಿದ್ದಾರೆ.
ಆಲೋಚನೆ ಮಾಡಿ ಮುಂದಡಿ ಇಡಬೇಕು.

ಕುಂಭ
ಆರ್ಥಿಕ ವಿಚಾರಗಳಲ್ಲಿ ಅವಸರದ ನಿರ್ಧಾರ
ತೆಗೆದುಕೊಳ್ಳುವುದು ಬೇಡ. ಚಿನ್ನಾಭರಣ
ಕೊಳ್ಳುವ ಯೋಗ ಇದೆ. ಶುಭ ಫಲ.

ಮೀನ 
ನಿಮ್ಮ ಹೆಸರಿಗೆ ಮಸಿ ಬಳೆಯಲು ಪ್ರಯತ್ನ
ಮಾಡುವವರಿಂದ ದೂರ ಇರುವುದು ಒಳಿತು.
ಅಪಾಯಕ್ಕೆ ಅವಸರವೇ ಕಾರಣವಾಗುತ್ತದೆ.