ಈ ರಾಶಿಗೆ ವ್ಯಾಪಾರದಲ್ಲಿ ಲಾಭ -ಶುಭದಾಯಕ : ಉಳಿದ ರಾಶಿ ? 

ಮೇಷ
ಮೈ ತುಂಬಾ ಕೆಲಸವಿದೆ ಎಂದು ಚಿಂತೆ
ಮಾಡದೇ, ಸ್ವಲ್ಪ ಸ್ವಲ್ಪವಾಗಿ ಮಾಡಿ ಮುಗಿಸಿ.
ಎಲ್ಲವೂ ಒಳ್ಳೆಯದೇ ಆಗಲಿದೆ. ಶುಭ ಫಲ.

ವೃಷಭ
ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಸಣ್ಣ
ವಿಚಾರಕ್ಕೆ ಆಪ್ತರೊಂದಿಗೆ ಮನಸ್ತಾಪ
ಉಂಟಾಗಲಿದೆ. ಕುಗ್ಗದೇ ಮುಂದೆ ಸಾಗಿ.

ಮಿಥುನ
ಬೇಡದ ವಿಚಾರಗಳನ್ನು ಮನಸ್ಸಿನಲ್ಲಿ
ಇಟ್ಟುಕೊಂಡು ಕೊರಗುವುದು ಬೇಡ.
ಮತ್ತೊಬ್ಬರನ್ನು ಮೆಚ್ಚಿಸಲು ಹೋಗಬೇಡಿ.

ಪಂಚಾಕ್ಷರಿ ಮಂತ್ರ ಪಠಿಸಿ ಒಳ್ಳೆಯದಾಗುತ್ತೆ: ನಿತ್ಯ ಪಂಚಾಂಗ...

ಕಟಕ
ಪರಮಾಪ್ತರ ಸಂಕಷ್ಟಕ್ಕೆ ನೀವು ನೆರವಾಗಿ
ನಿಲ್ಲಲಿದ್ದೀರಿ. ವ್ಯಾಪಾರದಲ್ಲಿ ಲಾಭ. ದೂರದ
ಪ್ರವಾಸ ಮಾಡುವ ಅನಿವಾರ್ಯ ಬರಲಿದೆ.

ಸಿಂಹ
ಗೊಂದಲಗಳ ನಡುವಲ್ಲಿ ಶುಭ ಕಾರ್ಯ
ಮಾಡುವುದು ಬೇಡ. ಮಕ್ಕಳ ಭವಿಷ್ಯದ ಬಗ್ಗೆ
ಚಿಂತೆ ಕಾಡಲಿದೆ. ಗಣೇಶನ ಸ್ತುತಿ ಮಾಡಿ.

ಕನ್ಯಾ
ನೀವು ಮತ್ತೊಬ್ಬರಿಗೆ ನೀತಿ ಹೇಳುವ
ಬದಲಿಗೆ ನೀವು ನೀತಿ ಮಾರ್ಗದಲ್ಲಿ ಮುಂದೆ
ಸಾಗಿ. ಮಾಡಿದ ತಪ್ಪನ್ನು ಒಪ್ಪಿಕೊಂಡು ಬಿಡಿ.

ತುಲಾ 
ಆದಾಯದಲ್ಲಿ ಏರಿಕೆ. ಅದೇ ರೀತಿ ಖರ್ಚು
ಹೆಚ್ಚಾಗಲಿದೆ. ಕೋರ್ಟ್ ವ್ಯಾಜ್ಯಗಳು
ಮತ್ತಷ್ಟು ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ.

ವೃಶ್ಚಿಕ
ಮತ್ತೊಬ್ಬರ ತಪ್ಪುಗಳನ್ನು ಹುಡುಕುವುದೇ
ನಿಮ್ಮ ಕೆಲಸವಾಗಬಾರದು. ಕೋಪದಿಂದ
ಮೊದಲು ಕೆಡುವುದು ನಿಮ್ಮ ಮನಸ್ಸೇ. 

ಧನುಸ್ಸು
ದೊಡ್ಡ ವ್ಯಕ್ತಿಗಳಿಂದ ನಿಮಗೆ ಒಳ್ಳೆಯ ಗೌರವ
ದೊರೆಯಲಿದೆ. ಅನಗತ್ಯ ವಿಚಾರಗಳ ಬಗ್ಗೆ
ಹೆಚ್ಚು ಚಿಂತೆ ಮಾಡುವುದು ಬೇಡ.

ಮಕರ
ಯಾರೋ ಹೇಳಿದ ಮಾತಿಗೆ ನೀವು ಸಾಕ್ಷಿ
ಯಾಗಿ ನಿಲ್ಲಬೇಕಾದೀತು. ಆರೋಗ್ಯದಲ್ಲಿ
ಸಣ್ಣ ವ್ಯತ್ಯಯ ಉಂಟಾಗಲಿದೆ. ಶುಭಫಲ.

ಕುಂಭ
ಅತಿಯಾದ ನಿದ್ದೆ, ಅತಿಯಾದ ಊಟ ನಿಮ್ಮ
ಆರೋಗ್ಯಕ್ಕೆ ತೊಂದರೆ ಉಂಟುಮಾಡುತ್ತವೆ.
ಆಸೆಗೆ ಬಿದ್ದು ಮೋಸ ಹೋಗದಿರಿ.

ಮೀನ 
ಮನೆಯಲ್ಲಿ ಶುಭ ಸಮಾರಂಭಗಳ ಬಗ್ಗೆ
ಚರ್ಚೆ ಏರ್ಪಡಲಿದೆ. ಎಲ್ಲರ ಪಾಲಿಗೂ
ನೀವು ಒಳ್ಳೆಯವರಾಗಲು ಸಾಧ್ಯವಿಲ