ತುಲಾ ರಾಶಿಯವರ ದೊಡ್ಡ ಸಮಸ್ಯೆಗೆ ಪರಿಹಾರ : ಉಳಿದ ರಾಶಿಗೆ?

ಮೇಷ
ಬೀಸುವ ದೊಡ್ಡೆಯಿಂದ ತಪ್ಪಿಸಿಕೊಳ್ಳುವ
ಪ್ರಯತ್ನ ಮಾಡಿ. ಬ್ಯಾಂಕ್ ವ್ಯವಹಾರಗಳು
ಪೂರ್ಣಗೊಳ್ಳಲಿವೆ. ನೆಮ್ಮದಿಯಿಂದಿರುವಿರಿ.

ವೃಷಭ
ಅನಿವಾರ್ಯವಾಗಿ ಸಾಲ ಮಾಡಬೇಕಾದ
ಪರಿಸ್ಥಿತಿ ಉಂಟಾಗಲಿದೆ. ದುಂದು ವೆಚ್ಚಗಳಿಗೆ
ಕಡಿವಾಣ ಹಾಕಿ. ಸಂಬಂಧಗಳು ವೃದ್ಧಿಸಲಿವೆ.

ಮಿಥುನ
ಮತ್ತೊಬ್ಬರನ್ನು ನಂಬಿ ಮೋಸ ಹೋಗದಿರಿ.
ನಿಮ್ಮ ಮಿತಿಯನ್ನು ಅರಿತುಕೊಂಡು ಮುಂದೆ
ಸಾಗಿ. ಸಹಾಯ ಮಾಡಲು ಹಿಂಜರಿಯಬೇಡಿ.

ಕಟಕ
ಅಪರಿಚಿತ ವ್ಯಕ್ತಿಗಳ ಸಹಾಯದಿಂದ ದೊಡ್ಡ
ತೊಂದರೆಗೆ ಪರಿಹಾರ ದೊರೆಯಲಿದೆ.
ಯಾವುದೇ ಕೆಲಸವನ್ನು ಕಡೆಗಣಿಸಬೇಡಿ.

ಸಿಂಹ
ಸ್ವಾಮಿ ಕಾರ್ಯ, ಸ್ವಕಾರ್ಯ. ತೊಂದರೆ
ಯಲ್ಲಿ ಇರುವವರ ಪಾಲಿಗೆ ಆಪದ್ಭಾಂಧವ
ರಾಗಲಿದ್ದೀರಿ. ನಗುತ್ತಾ ದಿನ ಕಳೆಯಲಿದೆ.

ಕನ್ಯಾ
ಎಲ್ಲದ್ದಕ್ಕೂ ಕಾರಣ ಕೇಳಬಾರದು. ಕೆಲ
ವೊಂದನ್ನು ಇದ್ದ ಹಾಗೆಯೇ ಒಪ್ಪಿಕೊಳ್ಳ
ಬೇಕಾಗುತ್ತದೆ. ನಿಮ್ಮಂತೆ ನೀವಿರುವಿರಿ.

ತುಲಾ 
ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ದೀರ್ಘ
ಕಾಲದ ಸಮಸ್ಯೆಗೆ ಇಂದು ಪರಿಹಾರ ಲಭ್ಯತೆ.
ಯಾರಿಗೂ ತೊಂದರೆ ಕೊಡಲು ಹೋಗದಿರಿ.

ವೃಶ್ಚಿಕ
ನಿಂದಕರನ್ನು ಬಂಧುಗಳು ಎಂದು ತಿಳಿಯಿರಿ.
ಆಲಸ್ಯದಿಂದ ಹೊರಗೆ ಬರಲಿದ್ದೀರಿ. ಸೂಕ್ತ
ವಾದ ರೀತಿಯಲ್ಲಿ ಗೆಲುವು ದೊರೆಯಲಿದೆ. 

ಧನುಸ್ಸು
ನಿಮ್ಮಿಂದಾಗಿ ತಂದೆ ಹೆಮ್ಮೆ ಪಡುವಂತಹ
ಸಂದರ್ಭ ಒದಗಿಬರಲಿದೆ. ಮಾಡುವ
ಕೆಲಸದಲ್ಲಿ ಬದ್ಧತೆ ಹೆಚ್ಚಾಗಲಿದೆ. ಶುಭಫಲ.

ಮಕರ
ಭೂ ವ್ಯಾಜ್ಯಗಳ ನಿಮಿತ್ತ ಇಂದು ಓಡಾಟ
ಹೆಚ್ಚಾಗಲಿದೆ. ನಿಮ್ಮ ಬುದ್ಧಿ ನಿಮ್ಮ
ಕೈಯಲ್ಲಿರಲಿ. ತಾಳ್ಮೆಯಿಂದ ಯಶಸ್ಸು ಸಾಧ್ಯ.

ಕುಂಭ
ಮತ್ತೊಬ್ಬರ ತಪ್ಪಿಗೆ ನೀವು ದಂಡ ತೆರಬೇಕಾ
ದೀತು. ಒಲ್ಲದ ಗಂಡನಿಗೆ ಮೊಸರಿನಲ್ಲೂ
ಕಲ್ಲು. ದುಡಿಮೆ ಹೆಚ್ಚಾಗಲಿದೆ. ಶುಭ ಫಲ.

ಮೀನ 
ಬಾವಿಯೊಳಗಿನ ಕಪ್ಪೆಯಾದಿರಿ. ಆಪ್ತರ
ಭೇಟಿಯೊಂದಿಗೆ ದಿನ ಶುರುವಾಗಲಿದೆ.
ವಿಶೇಷ ಕಾರ್ಯಗಳು ಇಂದು ಕೈಗೂಡಲಿವೆ.