ವ್ಯವಹಾರದಲ್ಲಿ ಭಾರೀ ಪ್ರಮಾಣದ ಲಾಭ ಗಳಿಕೆ 

ವ್ಯವಹಾರದಲ್ಲಿ ಭಾರೀ ಪ್ರಮಾಣದ ಲಾಭ ಗಳಿಕೆ 

Add Asianetnews Kannada as a Preferred SourcegooglePreferred

ಮೇಷ
ಸ್ನೇಹಿತರ ಸಹಕಾರದಿಂದ ವ್ಯವಹಾರದಲ್ಲಿ
ಪ್ರಗತಿ ಸಾಧ್ಯವಾಗಲಿದೆ. ನಿಮ್ಮ ಬೆನ್ನನ್ನು
ನೀವೇ ತಟ್ಟಿಕೊಳ್ಳುವುದು ಬೇಡ. ತಾಳ್ಮೆ ಇರಲಿ.

ವೃಷಭ
ನಿಮ್ಮ ಜ್ಞಾಪಕ ಶಕ್ತಿಗೆ ಸಹೋದ್ಯೋಗಿಗಳಿಂದ
ಮೆಚ್ಚುಗೆ ದೊರೆಯಲಿದೆ. ಮುಖ್ಯವಾದ
ಕಾರ್ಯದ ನಾಯಕತ್ವ ವಹಿಸಲಿದ್ದೀರಿ.

ಮಿಥುನ
ಪ್ರತಿಭೆಗೆ ತಕ್ಕ ಅವಕಾಶಗಳು ದೊರೆಯಲಿವೆ.
ಹೊಸ ಮನೆಯ ಕೆಲಸ ಕಾರ್ಯಗಳು ವೇಗ
ಪಡೆದುಕೊಳ್ಳಲಿವೆ. ಸಹಕಾರದ ಕೊರತೆ.

ಕಟಕ
ನಿಮ್ಮ ವಿರುದ್ಧದ ಆರೋಪಗಳಿಗೆ ತೆರೆ
ಬೀಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ
ಆಸಕ್ತಿ ಹೆಚ್ಚಾಗಲಿದೆ. ಪ್ರಯತ್ನ ಹೆಚ್ಚಲಿದೆ.

ಸಿಂಹ
ಹೊಸ ವಾಹನ ಖರೀದಿ ಸಾಧ್ಯತೆ. ಪೂರ್ವ
ನಿರ್ಧಾರಿತ ಕಾರ್ಯಗಳು ಸುಗಮವಾಗಿ
ನೆರವೇರಲಿವೆ. ದಿನಪೂರ್ತಿ ಕೆಲಸ.

ಕನ್ಯಾ
ಮಹಿಳೆಯರ ಹೆಗಲ ಮೇಲೆ ಹೆಚ್ಚು
ಜವಾಬ್ದಾರಿಗಳು ಬೀಳಲಿವೆ. ವ್ಯವಹಾರದಲ್ಲಿ
ನಿರೀಕ್ಷಿತ ಪ್ರಗತಿ ಕಷ್ಟ. ಪರಿಶ್ರಮಕ್ಕೆ ತಕ್ಕ ಫಲ.

ತುಲಾ 
ಹೊಗಳಿಕೆಯ ಮಾತುಗಳಿಗೆ ಕಿವಿಯಾಗಲಿದಿರಿ.
ನಿಮ್ಮ ಬುದ್ದಿ ನಿಮ್ಮ ಕೈಯಲ್ಲಿ ಇರಲಿ. ಕಿರಿಕಿರಿ
ಯಾದರೂ ದಿನಾಂತ್ಯಕ್ಕೆ ಶುಭ ಸುದ್ದಿ ಕೇಳುವಿರಿ

ವೃಶ್ಚಿಕ
ಬೆಂಕಿ ಬಗ್ಗೆ ಎಚ್ಚರ ಇರಲಿ. ಮನಸ್ಸಲ್ಲಿ ಭಯ,
ಆತಂಕವಿದ್ದಲ್ಲಿ ಅದನ್ನು ಧ್ಯಾನದಿಂದ ಮಾತ್ರ
ದೂರಾಗಿಸಲು ಸಾಧ್ಯ. ಮಕ್ಕಳಿಗೆ ಶುಭದಿನ 

ಧನುಸ್ಸು
ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡದಿರಿ. ಅತಿಯಾದ
ಸಿಟ್ಟಿನಿಂದ ಸಂಬಂಧದಲ್ಲಿ ಬಿರುಕು ಸಾಧ್ಯ.
ಆದಷ್ಟು ಸಂಗೀತ ಕೇಳಿ ನಿರಾಳರಾಗಿ.

ಮಕರ
ಕೆಲಸ ಕಾರ್ಯಗಳಲ್ಲಿ ಗಡಿಬಿಡಿ ಬೇಡ. ಎಲ್ಲಾ
ಕಾರ್ಯ ಸುಗಮವಾಗಿ ಆಗಲಿದೆ. ತಲೆಕೆಡಿಸಿ
ಕೊಂಡರೆ ಆರೋಗ್ಯದಲ್ಲಿ ಏರುಪೇರಾಗಲಿದೆ.

ಕುಂಭ
ಮನುಷ್ಯನೂ ವಿಷ ಜಂತುವಿದ್ದಂತೆ. ಹಾಗಾಗಿ
ತಕ್ಷಣ ಯಾರನ್ನೂ ನಂಬದಿರುವುದು ಒಳಿತು.
ಮನೆಯಲ್ಲಿ ನೆಮ್ಮದಿ ಇರಲಿದೆ.

ಮೀನ 
ಇಷ್ಟು ದಿನ ನೀವು ಪ್ರಯತ್ನಿಸುತ್ತಿದ್ದ
ವಿಷಯದಲ್ಲಿ ಸಫಲರಾಗುವಿರಿ.
ಮನೆಯವರಿಂದ ಪ್ರಶಂಸೆಗೆ ಪಾತ್ರರಾಗುವಿರಿ.