ಇಂದಿನ ನಿಮ್ಮ ದಿನವು ಹೇಗಿದೆ. ತಿಳಿಯಿರಿ ರಾಶಿ ಫಲದ ಮೂಲಕ

ಈ ರಾಶಿ ಹೆಣ್ಣು ಮಕ್ಕಳಿಗೆ ಈ ದಿನ ಅತ್ಯಂತ ಶುಭ 

Add Asianetnews Kannada as a Preferred SourcegooglePreferred

ಮೇಷ
ಹೊಸ ತಯಾರಿಗಳೊಂದಿಗೆ ನೂತನ ಕೆಲಸ
ಆರಂಭಿಸಲಿದ್ದೀರಿ. ಬೆಳಿಗ್ಗೆಯೇ ಶುಭ ವಾರ್ತೆ
ಕೇಳಲಿದ್ದೀರಿ. ಹೆಣ್ಣು ಮಕ್ಕಳಿಗೆ ಶುಭದಿನ.

ವೃಷಭ
ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಲಿದ್ದೀರಿ.
ಸಾಧ್ಯವಾದಷ್ಟು ತಾಳ್ಮೆಯಿಂದಿರಿ. ಹೊಸ
ವರ್ಷಕ್ಕೆ ಹರುಷ ಹೆಚ್ಚಾಗಲಿದೆ. ಶುಭಫಲ.

ಮಿಥುನ
ದಿನಪೂರ್ತಿ ಒಳ್ಳೆಯ ಸಂಗೀತ ಕೇಳಲಿದ್ದೀರಿ.
ಹೊಸ ವರ್ಷಾಚರಣೆ ಪ್ರಯುಕ್ತ ಸ್ನೇಹಿತರು,
ಬಂಧುಗಳ ಜೊತೆ ಸಮಯ ಕಳೆಯಲಿದ್ದೀರಿ.

ಕಟಕ
ಮಹಿಳೆಯರಿಗೆ ಹತ್ತಿರದ ಬಂಧುಗಳಿಂದ
ಉಡುಗೊರೆ ದೊರೆಯಲಿದೆ. ಮೋಜು,
ಮಜಾ ಮಸ್ತಿ ಇಂದೂ ಮುಂದುವರೆಯಲಿದೆ.

ಸಿಂಹ
ಸಂಜೆ ವೇಳೆಗೆ ನೀವು ಅಂದುಕೊಂಡ ಎಲ್ಲಾ
ಕಾರ್ಯಗಳೂ ನೆರವೇರಲಿವೆ. ಹೊಸ ದಂಪತಿ
ಗಳಿಗೆ ಇಂದು ಪ್ರವಾಸ ಹೋಗುವ ಅವಕಾಶ.

ಕನ್ಯಾ
ದೀರ್ಘ ಕಾಲದ ಸಮಸ್ಯೆಗಳಿಗೆ ಶಾಸ್ವತವಾದ
ಪರಿಹಾರ ದೊರೆಯಲಿದೆ. ಅಸ್ತವ್ಯಸ್ಥವಾಗಿರು
ವ ಬದುಕಿನಲ್ಲಿ ಒಂದು ಲಯ ಏರ್ಪಡಲಿದೆ.

ತುಲಾ 
ಹೆಚ್ಚು ಜವಾಬ್ದಾರಿ ಇಂದು ನಿಮ್ಮ ಹೆಗಲ
ಮೇಲೆ ಬೀಳಿದೆ. ಗೃಹಿಣಿಯರ ಪಾಲಿಗೆ ಹೆಚ್ಚು
ಲಾಭದಾಯಕ ದಿನವಿದು. ಶುಭವಾಗಲಿದೆ.

ವೃಶ್ಚಿಕ
ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂದುಕೊಂಡು
ಹೊಸ ಪ್ರಯತ್ನಗಳನ್ನು ಆರಂಭಿಸಿ,
ಸ್ನೇಹಿತರೊಂದಿಗೆ ಇಡೀ ದಿನ ಕಳೆಯಲಿದ್ದೀರಿ. 

ಧನುಸ್ಸು
ನಿಮ್ಮ ಮನಸ್ಸಿಗೆ ಒಪ್ಪಿತವಾದ ಕೆಲಸವನ್ನು
ಯಾರಿಗೂ ಅಂಜದೇ ಮಾಡಿ ಮುಗಿಸಿ.
ಸ್ನೇಹಿತರೊಂದಿಗೆ ನಿಷ್ಠೂರವಾಗಿ ಇರಿ.

ಮಕರ
ದಿನ ಪೂರ್ತಿ ಸಂತೋಷದಿಂದ ಇರುವಿರಿ.
ಮುಂದಿನ ದಿನಗಳ ಬಗ್ಗೆ ಹೆಚ್ಚು ಪ್ಲ್ಯಾನ್
ಮಾಡಿಕೊಳ್ಳಲಿದ್ದೀರಿ. ಕೆಲಸಗಳು ಹೆಚ್ಚಲಿವೆ.

ಕುಂಭ
ದೇವಸ್ಥಾನಕ್ಕೆ ಕುಟುಂಬ ಸಮೇತವಾಗಿ ಹೋಗಿ
ಬರಲಿದ್ದೀರಿ. ಮಹಿಳೆಯರ ಪಾಲಿಗೆ ಇಂದು
ಉತ್ಸಾಹದ ದಿನವಾಗಿರಲಿದೆ.

ಮೀನ 
ಹೆಚ್ಚು ಸಂತೋಷದಿಂದ ಈ ದಿನ ಇರಲಿದ್ದೀರಿ.
ಆತ್ಮೀಯರ ಸಂಭ್ರಮದಲ್ಲಿ ನಿಮ್ಮ ಸಂತೋಷ
ಕಾಣಲಿದ್ದೀರಿ. ನಾಳಿನ ಚಿಂತೆ ಬೇಡ.