ಮೇಷ
ಹಿಡಿದ ಕೆಲಸವನ್ನು ಎಷ್ಟೇ ಕಷ್ಟವಾದರೂ
ಇಂದೇ ಮಾಡಿ ಮುಗಿಸಿ. ನಾಳೆ ಎನ್ನುವುದು
ಯಾವತ್ತೂ ನಿಮ್ಮ ಕೈಯಲ್ಲಿ ಇರುವುದಿಲ್ಲ.

ವೃಷಭ
ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ
ಇದ್ದರೆ ಒಳಿತು. ದೂರದ ಸಂಬಂಧಿಗಳ ಆಕಸ್ಮಿಕ
ಭೇಟಿಯಾಗಲಿದೆ. ಗೆಲುವಿಗಾಗಿ ಹಂಬಲಿಸುವಿರಿ.

ಮಿಥುನ
ಸಾಧ್ಯವಾದರೆ ಒಳಿತು ಮಾಡಿ, ಇಲ್ಲದೇ ಇದ್ದರೆ
ಸುಮ್ಮನೆ ಇದ್ದು ಬಿಡುವುದು ಲೇಸು. ಸವಾಲು
ಗಳಿಗೆ ಬೆನ್ನು ಮಾಡಿ ಓಡುವುದು ಬೇಡ.

ಕಟಕ
ಕಠಿಣ ಪರಿಶ್ರಮಕ್ಕಿಂತ ಬುದ್ಧಿವಂತಿಕೆಯಿಂದ
ಮಾಡುವ ಕೆಲಸ ಬೇಗನೇ ಫಲ ನೀಡುತ್ತದೆ.
ಆತ್ಮೀಯರೊಂದಿಗೆ ಸಣ್ಣ ವಿರಸ ಉಂಟಾಗಲಿದೆ.

ಸಿಂಹ
ಹತ್ತು ಮಂದಿಯನ್ನು ಕೇಳಿ ಶುಭ ಕಾರ್ಯ
ವನ್ನು ನಿರ್ಧರಿಸುವುದು ಸಾಧ್ಯವಿಲ್ಲ. ನಿಮ್ಮ
ಮನಸ್ಸಿಗೆ ಸರಿ ಎನ್ನಿಸಿದನ್ನು ಮಾಡಿ ಮುಗಿಸಿ.

ಕನ್ಯಾ
ಮಾಡುವ ಕೆಲಸದಿಂದ ಪರಿಣಾಮ
ಏನಾಗಲಿದೆ ಎನ್ನುವುದನ್ನು ಅಂದಾಜು ಮಾಡಿ
ಕಾರ್ಯರಂಗಕ್ಕೆ ಇಳಿಯುವುದು ಲೇಸು.

ತುಲಾ 
ವ್ಯಕ್ತಿ ವ್ಯಕ್ತಿಗಳ ನಡುವೆ ವ್ಯತ್ಯಾಸ ಇದ್ದೇ
ಇರುತ್ತದೆ. ಅದನ್ನು ಗುರುತಿಸಿ ಅವರ
ಯೋಗ್ಯತೆಯನ್ನು ತಿಳಿದರೆ ನಿಮಗೆ ಒಳಿತು.

ವೃಶ್ಚಿಕ
ನಾಳಿನ ಚಿಂತೆಯನ್ನು ಇಂದು ಮಾಡುತ್ತಾ
ಕೂರುವುದಕ್ಕೆ ಬದಲಾಗಿ, ಇಂದು ಆಗಬೇಕಾದ
ಕಾರ್ಯಗಳನ್ನು ಮಾಡಿ ಮುಗಿಸಿ. ಧನುಸ್ಸು

ಧನಸ್ಸು
ನೀವು ಮಾಡುವ ಎಲ್ಲಾ ಕಾರ್ಯಗಳೂ
ಇಂದು ಫಲ ನೀಡದೇ ಇದ್ದರೂ ಮುಂದಿನ
ದಿನಗಳಲ್ಲಿ ಅವುಗಳಿಂದ ಫಲ ಇದ್ದೇ ಇದೆ.

ಮಕರ
ಧರ್ಮ ಕಾರ್ಯಗಳಲ್ಲಿ ಆಸಕ್ತಿ ಉಂಟಾಗಲಿದೆ.
ಇಡೀ ದಿನ ತುಂಬಾ ಚಟುವಟಿಕೆಯಿಂದ
ಇರಲಿದ್ದೀರಿ. ಉತ್ಸಾಹವೇ ಉನ್ನತಿಗೆ ದಾರಿ.

ಕುಂಭ
ನಿಮ್ಮ ತಾಳ್ಮೆ ಪರೀಕ್ಷೆ ಮಾಡುವಂತಹ
ಹಲವಾರು ಘಟನೆಗಳು ಇಂದು ನಡೆಯಲಿವೆ.
ಯಾವುದಕ್ಕೂ ಅಂಜದೇ ಮುಂದೆ ಸಾಗಿ.

ಮೀನ 
ನಿಮ್ಮ ಮೇಲೆ ಇತರರು ಇಟ್ಟಿರುವ ನಂಬಿಕೆಗೆ
ದ್ರೋಹ ಬಗೆಯುವ ಪ್ರಯತ್ನ ಬೇಡ.
ತಾಳ್ಮೆಯಿಂದ ಮುಂದೆ ಸಾಗಿದರೆ ಫಲವಿದೆ.