Asianet Suvarna News Asianet Suvarna News

ಒಂದು ರಾಶಿಗೆ ಸಣ್ಣ ವ್ಯಾಪಾರದಿಂದ ಭಾರೀ ಲಾಭ : ಉಳಿದ ರಾಶಿ..?

ಜನವರಿ 22 ಬುಧವಾರ, ಹೇಗಿದೆ ಇಂದಿನ ನಿಮ್ಮ ರಾಶಿಗಳ ಫಲಾ ಫಲ

Daily Astrology in Kannada 22 Jan 2020 horoscope
Author
Bengaluru, First Published Jan 22, 2020, 7:10 AM IST
  • Facebook
  • Twitter
  • Whatsapp

ಒಂದು ರಾಶಿ ಸಣ್ಣ ವ್ಯಾಪಾರದಿಂದ ಭಾರೀ ಲಾಭ : ಉಳಿದ ರಾಶಿ..?

ಮೇಷ
ಎಂದೋ ನಡೆದ ಘಟನೆಯನ್ನು ಮತ್ತೆ ನೆನಪಿಸಿ
ಕೊಳ್ಳದಿರಿ. ದೂರಾದವರು ಹತ್ತಿರವಾಗಲಿ
ದ್ದಾರೆ. ಈ ದಿನ ನಿಮ್ಮ ಪಾಲಿಗೆ ಶುಭ ತರಲಿದೆ.

ವೃಷಭ
ಮುಗ್ಧರಾಗಿದ್ದರೆ ನಿಮ್ಮನ್ನು ದುರಪಯೋಗ
ಪಡಿಸಿಕೊಳ್ಳಬಹುದು. ಕಟುವಾದ ಮಾತು
ನೋವು ತರುವ ಸಾಧ್ಯತೆ. ಎಚ್ಚರ ಇರಲಿ.

ನಿಮ್ಮ ಜನ್ಮರಾಶಿಗೆ ಹೊಂದುವ ಡ್ರೆಸ್ ಧರಿಸಿದ್ರೆ ಲಕಲಕ...

ಮಿಥುನ
ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ. ಇದರಿಂದ
ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಕ್ಕಳಿಗೆ
ಓದಿನಲ್ಲಿ ಆಸಕ್ತಿ ಹೆಚ್ಚಲಿದೆ. ಶಾಂತಿ ಸಿದ್ಧಿ.

ಕಟಕ
ಸ್ನೇಹಿತರಿಂದ ಸಂತಸ. ದೂರ ಪ್ರಯಾಣ
ಸಾಧ್ಯತೆ. ದಿನದಂತ್ಯದಲ್ಲಿ ಶುಭ ಸುದ್ದಿ. ಶುಭ
ದಿನ. ಮಾತಿನಲ್ಲಿ ಎಚ್ಚರಿಕೆ ಇದ್ದರೆ ಒಳ್ಳೆಯದು.

ಸಿಂಹ
ದುಶ್ಚಟಗಳು ನಿಮಗೂ ಹಾಗೂ ನಿಮ್ಮವರಿ
ಗೂ ಮಾರಕ.ಅದರಿಂದ ದೂರ ಇರುವುದು
ಒಳಿತು. ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ಲಾ

ಕನ್ಯಾ
ಯಾರಿಗೂ ಎದುರು ಮಾತನಾಡದಿರುವುದು
ಉತ್ತಮ. ಕೆಲಸದ ವಿಚಾರದಲ್ಲಿ ಕಿರಿಕಿರಿ
ಯಾದರೂ ದುಡುಕದೆ ಬಗೆಹರಿಸಿಕೊಳ್ಳಿರಿ.

ತುಲಾ 
ಉತ್ತಮ ಅವಕಾಶಗಳು ನಿಮ್ಮನ್ನು
ಹುಡುಕಿಕೊಂಡು ಬರಲಿವೆ. ಬಾಧೆಗಳು
ಎದುರಾದರೂ ಅದನ್ನು ನಿವಾರಿಸಲಿದ್ದೀರಿ.

ವೃಶ್ಚಿಕ
ಯಾರದೋ ತಪ್ಪಿನಿಂದ ನಿಮಗೆ ಶಿಕ್ಷೆಯಾಗುವ
ಸಾಧ್ಯತೆ. ಸಮಸ್ಯೆ ಎದುರಾದರೂ ಧೈರ್ಯ
ದಿಂದ ಎದುರಿಸಲಿದ್ದೀರಿ. ಗೆಲುವು ನಿಮ್ಮದೇ. 

ಧನುಸ್ಸು
ಶಾಂತ ಮನಸ್ಸಿನಿಂದ ಸಕಲ ಕಾರ್ಯಗಳಲ್ಲೂ
ಯಶಸ್ಸು ಕಾಣುವಿರಿ. ದಿನದಂತ್ಯದಲ್ಲಿ
ತಲೆನೋವಿನ ವಿಚಾರಗಳು ಎದುರಾಗಲಿವೆ.

ಮಕರ
ಓದಿನ ವಿಚಾರದಲ್ಲಿ ದುಡುಕು ನಿರ್ಧಾರ
ಬೇಡ. ಹಿರಿಯರಲ್ಲಿ ಗೌರವ ಹೆಚ್ಚಲಿದೆ.
ಆರೋಗ್ಯದಲ್ಲಿ ಕೊಂಚ ಏರುಪೇರು ಸಾಧ್ಯತೆ.

ಕುಂಭ
ನಗುವಿನಿಂದ ಜಗತ್ತು ಗೆಲ್ಲಬಹುದು.
ತಾಳ್ಮೆಯಿಂದ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ.
ತಾಯಿಯ ಆರೋಗ್ಯದಲ್ಲಿ ವ್ಯತ್ಯಯ.

ಮೀನ 
ಎಷ್ಟೋ ದಿನದ ನಿಮ್ಮ ಶ್ರಮ ಫಲಿಸಲಿದೆ.
ಮಹಿಳೆಯರಿಗೆ ಕಂಕಣ ಭಾಗ್ಯ. ಕಟ್ಟಡ
ಕಾರ್ಮಿಕರಿಗೆ ಲಾಭ. ಆರೋಗ್ಯದಲ್ಲಿ ವೃದ್ಧಿ

Follow Us:
Download App:
  • android
  • ios