Asianet Suvarna News Asianet Suvarna News

ಇಂದು ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ

ಜನವರಿ 20 , ಸೋಮವಾರ, ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ದಿನ 
 

Daily Astrology in Kannada 20 Jan 2020 Horoscope
Author
Bengaluru, First Published Jan 20, 2020, 7:19 AM IST
  • Facebook
  • Twitter
  • Whatsapp

ಮೇಷ: ನೀವು ಒಳ್ಳೆಯದನ್ನು ಹಂಚಿದರೆ ನಿಮಗೂ ಒಳ್ಳೆಯದ್ದೇ ದೊರೆಯುತ್ತದೆ. ಇರುವ ಗೊಂದಲಗಳಿಂದ ಹೊರಗೆ ಬರಲಿದ್ದೀರಿ.

ವೃಷಭ: ತಾಳ್ಮೆ ಕಳೆದುಕೊಂಡರೆ ನಿಮ್ಮ ತಲೆಯೇ ಕೆಡುವುದು. ಎಲ್ಲವನ್ನೂ ಸಹಿಸಿಕೊಂಡು ಮುಂದೆ ಸಾಗಿ. ದಿನದ ಕಡೆಗೆ ಶುಭ ಸುದ್ದಿ.

ಮಿಥುನ: ಬೇರೆಯವರ ಮಾತಿಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ಇಡೀ ದಿನ ಉತ್ಸಾಹದಿಂದ ಕೆಲಸ ಮಾಡಲಿದ್ದೀರಿ. ಶುಭ ಫಲ.

ಕಟಕ: ನಿನ್ನೆ ಆದ ಅನುಭವವನ್ನು ಆಧರಿಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಿ. ಆರ್ಥಿಕವಾಗಿ ಇಂದು ಲಾಭವಾಗಲಿದೆ. ಧೈರ್ಯ ಇರಲಿ.

ಸಿಂಹ: ಮಾತುಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎನ್ನುವುದನ್ನು ಅರಿತುಕೊಳ್ಳಿ. ವ್ಯವಹಾರದಲ್ಲಿ ಜಾಗೃತೆ ಇದ್ದಷ್ಟೂ ಒಳ್ಳೆಯದು.

ಕನ್ಯಾ: ತಾಯಿ ಮಾತಿಗೆ ಇಂದು ಮಾನ್ಯತೆ ಸಿಗಲಿದೆ. ಕೋರ್ಟ್ ವ್ಯವಹಾರದಲ್ಲಿ ಹಿನ್ನಡೆ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದೀರಿ.

ವಾರ ಭವಿಷ್ಯ: ಈ ರಾಶಿಯವರ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿದೆ

ತುಲಾ: ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ದೂರದ ಬೆಟ್ಟ ಯಾವಾಗಲೂ ಚೆಂದವಾಗಿಯೇ ಕಾಣುತ್ತದೆ. ಎಚ್ಚರ ಇರಲಿ.

ವೃಶ್ಚಿಕ: ನಾನು ಎನ್ನುವುದನ್ನು ಬಿಟ್ಟರೆ ಎಲ್ಲಾ ಒಳ್ಳೆಯದಾಗಲಿದೆ. ಹೊರಗಿನ ಸುತ್ತಾಟ, ಒಳಗಿನ ತಳಮಳಗಳು ಕಡಿಮೆಯಾಗಲಿವೆ.

ಧನಸ್ಸು: ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಅಧಿಕ ಎಂದು ಬಾಳುವೆ ಮಾಡಿ. ಆಸೆಯನ್ನು ಕಟ್ಟಿಟ್ಟಷ್ಟೂ ಬಾಳಿಗೆ ಒಳಿತು. ತೊಂದರೆಯಿಂದ ಪಾರು. 

ಮಕರ: ನಿಮ್ಮ ತಪ್ಪಿಗೆ ಮನೆಯವರು ತಲೆ ತಗ್ಗಿಸ ಬೇಕಾಗುತ್ತದೆ. ದೂರದ ಪ್ರಯಾಣ ಮಾಡಬೇಕಾಗುವುದು. ಆದಾಯದಲ್ಲಿ ಸ್ಥಿರತೆ.

ಕುಂಭ: ಎಲ್ಲವೂ ನನಗೇ ಬೇಕು ಎನ್ನುವ ಸ್ವಾರ್ಥ ಬೇಡ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಕೆ ಮಾಡಿಕೊಳ್ಳಿ. ಉತ್ಸಾಹವಿದ್ದರೆ ಒಳ್ಳೆಯದು.

ಮೀನ: ಧರ್ಮ ಕಾರ್ಯಗಳಿಗೆ ಮನಸ್ಸು ತುಡಿಯಲಿದೆ. ನಾಳಿನ ಚಿಂತೆ ಮರೆತು ಇಂದಿನ ಸಂತೋಷವನ್ನು ಅನುಭವಿಸಿ. ಶುಭಫಲ.

Follow Us:
Download App:
  • android
  • ios